ಪಬ್ಲಿಕ್ ಸ್ಟೋರಿ
ತುಮಕೂರು: ನಗರದಲ್ಲಿ ಎಲ್ಲೆಲ್ಲೂ ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು ಅತಿಕ್ರಮಣ ಮಾಡಿಕೊಳ್ಳುತ್ತಿದ್ದು ಮಹಾನಗರ ಪಾಲಿಕೆಯ ಸಿಬ್ಬಂದಿ ಮಾತ್ರ ನಿದ್ದೆಯಲ್ಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ವೆಚ್ಚ ಮಾಡಿ ಫುಟ್ ಪಾತ್ ಗಳ ಮರು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹೀಗೆ ನಿರ್ಮಾಣವಾಗುತ್ತಿರುವ ಫುಟ್ ಪಾತ್ ಗಳು ಜನಸಾಮಾನ್ಯರಿಗೆ ಮಾತ್ರ ಬಳಕೆಗೆ ಬರುತ್ತಿಲ್ಲ. ಅಂಗಡಿ ಮಾಲೀಕರು ತಮ್ಮದೇ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ.
ಅಂಗಡಿ ಮಾಲೀಕರು, ಹೋಟೆಲ್ ಉದ್ಯಮಿಗಳು, ಜ್ಯೂಸ್ ಸೆಂಟರ್ಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದರು ಕೂಡ ಯಾರೂ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ .
ಟೌನ್ ಹಾಲ್ ವೃತ್ತದಲ್ಲಿ ಟಿಎಚ್ ಎಸ್ ಡಯಾಗ್ನಾಸ್ಟಿಕ್ ಸಮೀಪ ಇದೇ ರೀತಿಯಾಗಿದೆ.
ಇಲ್ಲಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಇಡೀ ಜಾಗವನ್ನೂ ಕಬಳಿಸಲಾಗಿದೆ.
ಎಲ್ಲಾ ಖಾಸಗಿ, ಸರ್ಕಾರಿ ಬಸ್ಸುಗಳು ಇಲ್ಲಿ ನಿಲುಗಡೆ ನೀಡುತ್ತವೆ. ಬಸ್ ಕೇಳಿದವರು ಫುಟ್ ಪಾತ್ ಬಳಕೆಗೆ ಅವಕಾಶವೇ ಇಲ್ಲದಂತಾಗಿದೆ. ಫುಟ್ ಪಾತ್ ಬದಲಿಗೆ ರಸ್ತೆ ರೆ ಬಳಸಬೇಕಾಗುವುದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚಿವೆ.
ಕೂಡಲೇ ಇಲ್ಲಿಯ ಫುಟ್ ಪಾತ್ ತೆರವು ಗೊಳಿಸಬೇಕು ಜನಸಾಮಾನ್ಯರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಫುಟ್ ಪಾತ್ ಗಳ ಅತಿಕ್ರಮಣ
—————————————