ಟಾಟಾ ಸುಮೋ ರಸ್ತೆಯಲ್ಲಿ ನಿಲ್ಲಿಸಿ ಕಾಯುತ್ತಿದ್ದರು. ಅದೂ ರಾತ್ರಿ ಹೊತ್ತು. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವುದು ಊಟಕ್ಕಾಗಿಯೋ ಇಲ್ಲವೇ ದೈಹಿಕ ಬಾಧೆಗಳನ್ನು ತೀರಿಸಿಕೊಳ್ಳಲೋ ಉಂಟು. ಆದರೆ ಹಾಗೆ ನಿಂತಿದ್ದವರ ಬಳಿ ಮಚ್ಚು ಲಾಂಗು ಇವೆಯೆಂದರೆ ಅವರು ದರೋಡೆಕೋರರೇ ಇರಬೇಕು ಅಲ್ಲವೇ?
ಹೌದು ತುಮಕೂರು ತಾಲೂಕು ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಣಾವರ ಗೇಟ್ ಬಳಿ ಹೀಗೆ ಮಚ್ಚು ಲಾಂಗು, ಪಿಸ್ತೂಲು ಸೇರಿದಂತೆ ಮಾರಾಕಾಸ್ತ್ರಗಳನ್ನು ಟಾಟಾ ಸುಮೋ ವಾಹನದಲ್ಲಿಟ್ಟುಕೊಂಡು ಕಾಯುತ್ತಿದ್ದರು. ಮಧ್ಯರಾತ್ರಿ ಗಸ್ತಿಗೆ ಬಂದ ಪೊಲೀಸರು ದರೋಡೆಕೋರರು ಇದ್ದಲಿಗೆ ಬಂದು ವಿಚಾರಿಸಿದರು. ಅಷ್ಟೇಕ್ಕೆ ಸುಮ್ಮನಾಗುತ್ತಾರೆಯೇ ಪೊಲೀಸರು. ಟಾಟಾ ಸುಮೋ ವಾಹನಕ್ಕೂ ಕಣ್ಣು ಹಾಕಿದರು. ಆಗಲೇ ಇವರು ದರೋಡೆ ಕೋರರೆಂಬುದು ಖಚಿತವಾಗಿದ್ದು.
ಈ ದರೋಡೆಕೋರರು 25 ದಿನಗಳ ಹಿಂದೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ಸುಮೋ ಮತ್ತು ಮೊಬೈಲ್ ಸುಲಿಗೆ ಮಾಡಿದ್ದರಂತೆ. ಮಾಗಡಿಯಲ್ಲೂ ದೇವರ ವಿಗ್ರಹ ಕದ್ದಿದ್ದರು. ಬೆಂಗಳೂರಿನ ಭಾರತಿ ನಗರದಲ್ಲೂ ಒಂದು ಟಾಟಾ ಸುಮೋವನ್ನು ಕಳವು ಮಾಡಿರುವ ಪ್ರಕರಣಗಳು ಆರೋಪಿಗಳು ಬಾಯಿ ಬಿಟ್ಟಂತೆ ಒಂದೊಂದೇ ಹೊರಬಂದಿವೆ. ಸರಿ ಕನ್ ಫರ್ಮ್ ಆಗಿ ನಾಲ್ವರನ್ನು ಬಂದಿಸಿದ್ದಾರೆ. ತುಮಕೂರು ಶಾಂತಿನಗರದ ಜಪ್ರುದ್ದೀನ್, ಬೆಂಗಳೂರು ನೀಲಸಂದ್ರದ ಸಫೀರುದ್ದೀನ್, ಮಿಕದ್ದರ್ ಪಾಷಾ, ವೆಂಕಟೇಶಪುರದ ಮೊದಮದ್ ಸಲೀಂ, ಕಲೀಂಪಾಷಾ ಬಂದಿಸಿಸಲಾಗಿದೆ. ಈ ದರೋಡೆಕೋರದಿಂದ ಒಂದು ಟಾಟಾ ಸುಮೋ, ಸುಮೋ ಇಂಜಿನ್ ಮತ್ತು ಬಿಡಿಭಾಗಗಳು, 10 ಮೊಬೈಲ್ ಗಳು, ಒಂದು ನಾಡ ಪಿಸ್ತೂಲು, 5 ಜೀವಂತ ಗುಂಡುಗಳು , ಲಾಂಗು, 7 ಡ್ರಾಗರ್, ಮೂರು ದೇವರ ವಿಗ್ರಹ ವಶಪಡಿಸಿಕೊಳ್ಳಲಾಗಿದೆ.