ರಂಗನಕೆರೆ ಮಹೇಶ್
ಕಳೆದ ನಾಲ್ಕೈದು ವರ್ಷಳಿಂದ ಶಾಲೆಗಳ ಇಕೋಕ್ಲಬ್ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಪರಿಸರದ ಮಹತ್ವ ತಿಳಿಸಲು ಶಾಲಾ ಶಿಕ್ಷಕರು ಆಹ್ವಾನ ನೀಡುತ್ತಿದ್ದರು.
ಪ್ರತಿ ವರ್ಷವೂ ಸುಮಾರು ಆರೇಳು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪರಿಸರ, ನೀರು, ಗಾಳಿ ಬಗ್ಗೆ ತಿಳಿಸಿ ಹೇಳುತ್ತಿದ್ದೆ. ಪ್ರಕೃತಿಯಲ್ಲಿ ಲಭ್ಯವಾಗುವ ನೀರು, ಗಾಳಿಯನ್ನು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪಡೆಯಬಹುದು.
ನೀರು ಮತ್ತು ಗಾಳಿ(ಆಮ್ಲಜನಕ) ಪ್ರಾಣವಾಯು ನಮ್ಮ ಪೂರ್ವಿಕರ ಕಾಲದಲ್ಲಿ ಹೇರಳವಾಗಿ ಸಿಗುತ್ತಿತ್ತು. ನಮ್ಮ ಗುರುಗಳು ನೀರು ಮತ್ತು ಗಾಳಿಯನ್ನು ಅಪರಿಮಿತ ಗಣಕ್ಕೆ ಉದಾಹರಣೆ ಕೊಡುತ್ತಿದ್ದರು. ಆದರೆ ಇತ್ತೀಚೆಗೆ ಮಾನವನ ಕೆಂಗಣ್ಣಿಗೆ ಪರಿಸರ ಗುರಿಯಾಗಿ ನಾಶವಾಗುತ್ತಿದೆ.
ಈಗಾಗಲೇ ವಿಶ್ಚಸಂಸ್ಥೆ ಕೂಡ 2050ರ ವೇಳೆಗೆ ಈ ಭೂಮಿಯಲ್ಲಿ ಕುಡಿಯುವ ನೀರು ಅಲಭ್ಯ ಎಂದು ಸರ್ವೇ ಮುಖಾಂತರ ತಿಳಿಸಿದೆ.
ಆದರೂ ನಾವು ಎಚ್ಚೆತ್ತು ಕೊಳ್ಳುತ್ತಿಲ್ಲ. ಮಕ್ಕಳಿಗೆ ಹಣ, ಆಸ್ತಿ ಮಾಡುವ ಆತುರದಲ್ಲಿ ಮುಂದೆ ನಮ್ಮ ಮಕ್ಕಳಿಗೆ ಬೇಕಾಗಿರುವ ನೀರು ಮತ್ತು ಉತ್ತಮ ಗಾಳಿಯನ್ನು ಉಳಿಸಲು ಮುಂದಾಗುತ್ತಿಲ್ಲ.
ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಆಸ್ತಿ ಇದ್ದರೂ ನೀರು ಮತ್ತು ಗಾಳಿ ಇಲ್ಲದ ಮೇಲೆ ಅವರು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ ಎಂದು ವಿವರಣೆಯನ್ನು ನೀಡಿದೆ. ಕೊನೆಗೆ ಪರಿಸರದ ಮಹತ್ವವನ್ನು ಕುರಿತು ಹೇಳುವಾಗ…
ಗಾಳಿ,ನೀರು ಅತ್ಯವಶ್ಯಕ. ಈಗಾಗಲೇ ಜೀವದಾನ ನೀಡುವ ನೀರು ಮಾರಾಟದ ಸರಕಾಗಿದೆ. ಇನ್ನೂ ಗಾಳಿ(ಆಮ್ಲಜನಕ)ಕೂಡ ಭವಿಷ್ಯದಲ್ಲಿ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಫಿಲ್ ಮಾಡಿಸಿದಂತೆ ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸಲು ಕ್ಯೂನಲ್ಲಿ ನಿಲ್ಲಬೇಕಾಗುವ ಸ್ಥಿತಿ ನಿರ್ಮಾಣವಾಗಬಹುದು.
ಮುಂದಿನ ದಿನಗಳಲ್ಲಿ ಶುದ್ಧೀಕರಣ ಗೊಳಿಸಿದ ಗಾಳಿಯೂ ಮಾರಾಟದ ಸರಕಾಗಬಹುದು ಎಂದು ಅವರಿಗೆ ಹೇಳಿ ಗಿಡ ನೆಡಲು ಪ್ರೇರೇಪಿಸುತ್ತಿದ್ದೆ. ಈ ರೀತಿ ಕಳೆದ ಒಂದು ತಿಂಗಳ ಹಿಂದಷ್ಟೇ ಹೇಳಿದೆ.
ಆದರೆ ಕೇಲವೇ ದಿನಗಳಲ್ಲಿ ಆಕ್ಸಿಜನ್ ಕೂಡ ಮಾರಾಟದ ಸರಕಾಗಿದೆ. ಈಗಾಗಲೇ ಎಲ್ಲಿಯೂ ಆಮ್ಲಜನಕ ದೊರೆಯದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಂದಿರುವುದಕ್ಕೆ ಮಾನವರೇ ಕಾರಣವಲ್ಲವೇ…!!
ಅದಕ್ಕೆ ಹೇಳೋದುಮಾಡಿದ್ದುಣೋ_ಮಾರಾಯಾ ಅಂಥ….