ಮಧುಗಿರಿ : ಶ್ರೀ ರಾಘವೇಂದ್ರ ಹಾಸ್ಪಿಟಲ್ ಹಾಗೂ ಪ್ರಕ್ರಿಯೆ ಹಾಸ್ಪಿಟಲ್ ವತಿಯಿಂದ ಮಾರ್ಚ್ 8ರಂದು ಜುಪಿಟರ್ ಪಬ್ಲಿಕ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ಸಂಸ್ಥೆಯ ಕಾರ್ಯದರ್ಶೀ ಡಾ.ಜಿ.ಕೆ.ಜಯರಾಂ ತಿಳಿಸಿದರು.
ಪಟ್ಟಣದ ಜುಪಿಟರ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆ ವತಿಯಿಂದ 13 ವರ್ಷಗಳಿಂದ ಪ್ರತಿ ತಿಂಗಳ ಮೂರನೇ ಗುರುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಿ, 15 ಸಾವಿರಕ್ಕೂ ಹೆಚ್ಚು ವೃದ್ದರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.
ದವಡೆ, ಕರುಳು, ಸ್ತನ ಹಾಗೂ ರಕ್ತದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲೇ ಗುಣವಾದರೆ ಕ್ಯಾನ್ಸರ್ ಖಾಯಿಲೆ ದೂರವಾಗುತ್ತದೆ. ಇಲ್ಲದಿದ್ದರೆ ಹಂತ ಹಂತವಾಗಿ ಮನುಷ್ಯನ ಜೀವಕ್ಕೆ ಆಪತ್ತು ತಂದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಉಚಿತ ತಪಾಸಣೆ ಶಿಬಿರದಲ್ಲಿ ನುರಿತ ಕ್ಯಾನ್ಸರ್ ತಜ್ಞರು ಬಾಗವಹಿಸಲಿದ್ದು, ಸಾರ್ವಜನಿಕರು ಶಿಬಿರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಕ್ರಿಯ ಆಸ್ಪತ್ರೆಯ ಡಾ. ಸಿ.ಜಿ.ಮಹೇಶ್ ಮಾತನಾಡಿ, ಗ್ರಾಮೀಣ ಭಾಗದ ರೋಗಿಗಳಿಗೂ ವೈಧ್ಯಕೀಯ ಸೇವೆ ಸಿಗಲೆಂಬ ಉದ್ದೇಶದಿಂದ ಡಾ.ಜಿ.ಕೆ.ಜಯರಾಂ ಅವರು ಈ ಶಿಬಿರವನ್ನು ಆಯೋಜಿಸಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಆಸ್ಪತ್ರೆಯ ಧ್ಯೇಯವಾಗಿದೆ ಎಂದರು.
ಮುಖಂಡ ಡಾ.ಎಂ.ಜಿ.ಶ್ರೀನಿವಾಸ್ ಮೂರ್ತಿ, ರೋಹಿತ್ ಹಾಗೂ ಪ್ರವೀಣ್ ಇದ್ದರು.
ಶಿಬಿರದಲ್ಲಿ ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಶಸ್ತ್ರಚಿಕಿತ್ಸಾ ತಜ್ಞರು ಹೃದ್ರೋಗ ತಜ್ಞರು ಜನರಲ್ ಫಿಸಿಚಿಯನ್ ಹಾಗೂ ಕ್ಯಾನ್ಸರ್ ತಜ್ಞರು ಭಾಗವಹಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 991665933 ಹಾಗೂ 9663088820ಯನ್ನು ಸಂಪರ್ಕಿಸಬಹುದು.
ಉಚಿತ ಆರೋಗ್ಯ ತಪಾಸಣಾ ಶಿಬಿರ
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on