Tumkuru: ತಮ್ಮ ಊರುಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ಕೂಡಲೆ ಉಚಿತ ರೈಲುಗಳ ವ್ಯವಸ್ಥೆ ಮಾಡಿ ಅವರುಗಳನ್ನು ಸುರಕ್ಷಿತವಾಗಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಸಕಾ೯ರವನ್ನು ಆಗ್ರಹಿಸಿವೆ.
ಊರಿಗೆ ಹಿಂತಿರುಗ ಬಯಸುವವರಿಗಾಗಿ ಕೂಡಲೇ ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸ ಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಈಗಾಗಲೆ ಹಲವು ಕಡೆ ಕಾಮಿ೯ಕರು ತಮ್ಮ ಊರುಗಳಿಗೆ ಹೋಗಲು ಬಿಡುತ್ತಿಲ್ಲ ಎಂದು ಪ್ರತಿಭಟನೆ ಧ್ವನಿ ಎತ್ತಿದ್ಧಾರೆ. ಅವರನ್ನು ಕೆಲಸಕ್ಕೆಂದು ಕರೆತಂದ ಗುತ್ತಿಗೆದಾರರು ಪದಾರಿಯಾಗಿದ್ದಾರೆ. 40 ದಿನಗಳ ಲಾಕ್ಡೌನ್ ಅವಧಿಯಲ್ಲಿ ಪಡಬಾರದ ಪಡಿಪಾಟಲನ್ನು ಕಾಮಿ೯ಕರು ಪಟ್ಟಿದ್ದಾರೆ.
ಇದೀಗ ತಮ್ಮ ಊರುಗಳಿಗೆ ಹೋಗಲು ಅನುಮತಿ ಇದ್ದರೂ ಸಹಾ ರೈಲುಗಳ ವ್ಯವಸ್ಥೆ ಇಲ್ಲದ ಕಾರಣ ಹತಾಶರಾಗಿದ್ದಾರೆ. ಪ್ರತಿ ರಾಜ್ಯಕೆಂದು ನೇಮಕವಾಗಿರುವ ನೋಡಲ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಊರಿಗೆ ಹೋಗುವವರು ಯಾರನ್ನು ಸಂಪಕ೯ ಮಾಡಬೇಕು ಎಂಬ ಯಾವುದೆ ವಿವರವನ್ನು ಪೂಣ೯ವಾಗಿ ಕಾಮಿ೯ಕರಿಗೆ ರಾಜ್ಯ ಸಕಾ೯ರವು ನೀಡುತ್ತಿಲ್ಲ ಎಂದು ಸಿಪಿಐ(ಎಂ) ಖಂಡಿಸಿದೆ.
ರಾಜ್ಯದವರೆ ಆದ ಕೇಂದ್ರ ರೈಲ್ವೆ ಸಚಿವರು ನಾಪತ್ತೆ ಆಗಿದ್ದಾರೆ , ಬಿಜೆಪಿ ಸಚಿವರು, ಸಂಸದರು,ಶಾಸಕರು ಹಲವರು ಎಲ್ಲಿ ಅಡಗಿಕೊಂಡಿದ್ದಾರೆ. ಬಾಯಿ ಬಿಟ್ಟರೆ ಸಾಕು ಜನರ ನಡುವೆ ದ್ವೇಶ ಬಿತ್ತುವ ಮಾತುಗಳನ್ನು ಹಾಡುತ್ತಿದ್ದ ಹಲವು ಬಿಜೆಪಿ ನಾಯಕರು, ಜನರು ಪರದಾಡುತಿರುವಾಗ ಎಲ್ಲಿ ಹೋಗಿದ್ದಾರೆ ? ಎಂದು ಸಿಪಿಐ(ಎಂ) ಟೀಕಿಸಿದೆ.