Publicstory. in
ತುಮಕೂರು: ಆಹಾರ ಹಂಚಿಕೆಯಲ್ಲಿ ಯಾರೂ ಸಹ ರಾಜಕೀಯ ಹುಡುಕಬಾರದು. ಆಹಾರ ಹಂಚಿಕೆಯ ಹಿಂದೆ ರಾಜಕೀಯ ಆಸೆ ಇಟ್ಟುಕೊಂಡವರನ್ನು ಜನರು ದೂರ ಸರಿಸಬೇಕು. ಶ್ರೀಮಂತ ರೈತರು, ಶಕ್ತಿ ಇರುವ ಕ್ಷೇತ್ರದ ಜನರು ಆಹಾರದ ಕಿಟ್ ಗಳನ್ನು ತ್ಯಾಗ ಮಾಡಿ ಬಡವರಿಗೆ ಹಂಚುವಂತೆ ಮಾಡಬೇಕು ಎಂದು ಮಾಜಿ ಶಾಸಕ ಸುರೇಶಗೌಡ ಹೇಳಿದರು.
ಪ್ರಧಾನಿ ನರೇಂದ್ರಮೋದಿ ಅವರ ಕರೆಯಂತೆ ಜನರಿಗೆ ಸಹಾಯ ಹಸ್ತ ನೀಡುತ್ತಿದ್ದೇವೆ. ಶ್ರೀಮಂತರು ತ್ಯಾಗ ಮಾಡಲು ಮುಂದಾಗಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದರು.
ಬುಧವಾರ ಗೂಳೂರು ಪಂಚಾಯತ್ ನ ಗಳಿಗೇನಹಳ್ಳಿಯಲ್ಲಿ ಉಚಿತ ಆಹಾರದ ಕಿಟ್, ಮಾಸ್ಕ್ ವಿತರಿಸಿ ಮಾತನಾಡಿದರು.
ಕರೊನಾ ಕಾರಣದಿಂದ ದೇಶದಲ್ಲಿ, ಆಯಾ ಕ್ಷೇತ್ರದಲ್ಲಿ ಬಡವರು ಯಾರೂ ಹಸಿವಿನಿಂದ ನರಳಬಾರದು. ಯಾರೊಬ್ಬರಿಗೂ ಮಾಸ್ಕ್ ಗಳ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರಮೋದಿ ಕರೆ ನೀಡಿದರು. ಅದರಂತೆ ಬಿಜೆಪಿ ಕಾರ್ಯಕರ್ತರು, ಹಲವು ದಾನಿಗಳು ನೆರವಿಗೆ ಧಾವಿಸಿರುವುದು ಶಾಘ್ಲನೀಯ ಎಂದರು.
ಕ್ಷೇತ್ರದಲ್ಲಿರುವ ಶ್ರೀಮಂತರು, ಸ್ವಶಕ್ತಿ ಇರುವ ರೈತರು, ಜನರು ಬೇಸರ ಮಾಡಿಕೊಳ್ಳಬಾರದು. ಬಡವರು, ಆಶಕ್ತರಿಗೆ, ಪಡಿತರ ಕಾರ್ಡ್ ಇಲ್ಲದವರಿಗೆ ನೀವು ಮಾಡುವ ತ್ಯಾಗ, ದಾನ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಹದಿನೈದು –ಇಪ್ಪತ್ತು ಕೆಜಿ ಅಕ್ಕಿ, ಒಂದಿಷ್ಟು ತರಕಾರಿ, ಉಪ್ಪು ಸೇರಿದಂತೆ 500 ರೂಪಾಯಿಯಿಂದ 600 ರೂಪಾಯಿ ಆಗಬಹುದು. ಇದು ದೊಡ್ಡ ಮೊತ್ತವೇನಲ್ಲ. ಹಣ ಇರುವವರು, ಈ ಸಣ್ಣ ಸಹಾಯದ ಅಗತ್ಯ ಇಲ್ಲದವರಿಗೆ ನನ್ನನ್ನು ಸೇರಿದಂತೆ ಯಾರಾದರೂ ಉಚಿತ ಪಡಿತರ ಕೊಟ್ಟರೆ ಅದನ್ನು ವಾಪಸ್ ಮಾಡಬೇಕು. ಬಡವರಿಗೆ ಹಂಚಿ ಎಂದು ಹೇಳಬೇಕು ಎಂದು ಮನವಿ ಮಾಡಿದರು.
ಕೂಲಿ ಕಾರ್ಮಿಕರು, ವೃದ್ಧರು, ಒಂಟಿ ಮಹಿಳೆಯರಿಗೆ ಇನ್ನೂ ಹೆಚ್ಚಿನ ಸಹಾಯ ಮಾಡಿ ಎಂದು ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಈ ಕಷ್ಟ ಕಾಲದಲ್ಲಿ ಯಾರೂ ರಾಜಕೀಯ ಮಾಡಲ ಹೋಗಬಾರದು. ನಿಜವಾಗಿ ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡುವಂತೆ ಹೇಳಿವುದು ಸಹ ದಾನದ ರೂಪವೇ ಆಗಿದೆ ಎಂದರು.
ಜಮೀರ್ ವಿರುದ್ಧ ವಾಗ್ದಾಳಿ
ಬೆಂಗಳೂರಿನ ಪಾದರಾಯನಪುರದ ಘಟನೆಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮ್ಮದ್ ಹೇಳಿಕೆಯನ್ನು ಖಂಡಿಸಿದರು. ನಾನು ಯಾವುದೇ ಧರ್ಮ, ಜಾತಿಯ ಬಗ್ಗೆ ಮಾತನಾಡುವುದಿಲ್ಲ. ರೋಗಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಲು ಸಹ ಒಪ್ಪಿಗೆ ಪಡೆಯಬೇಕು ಎಂಬುದು ಸರಿಯೇ? ಇಂಥ ಶಾಸಕರು ಇರಬೇಕೇ? ಬೇಡವೇ ಎಂಬುದನ್ನು ಜನರು ತೀರ್ಮಾನ ಮಾಡಬೇಕು ಎಂದು ಹೇಳಿದರು.
ನೂರಾರು ಜನರಿಗೆ ಉಚಿತ ಮಾಸ್ಕ್, ಪಡಿತರ ಕಾರ್ಡ್ ಇಲ್ಲದ ಬಡವರಿಗೆ ಆಹಾರದ ಕಿಟ್ ಹಂಚಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಐಶ್ವರ್ಯ ಸುರೇಶಗೌಡ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.
Hi Sureshgowda sir,
I am advocate sharada from bangalore….I literally very much impressed by ur simplicity…moral responsibility …its true that we are all humans…but only few will be human being…being a good human being is great….I am very glad to tell u dat , you have conscious responsibility…
Thank u sir