ಎಡೆಯೂರು: ಹೋಬಳಿಯ 46ವರ್ಷದ ವ್ಯಕ್ತಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ರಾತ್ರಿಯಿಂದಲೇ ಎಚ್ಚರಿಕೆಯ
ಕ್ರಮಗಳನ್ನು ಕೈಗೊಂಡಿದ್ದಾರೆ.
ಗುರುವಾರ ಸಂಜೆ ಮಾಹಿತಿ ತಿಳಿಯುತ್ತದ್ದಂತೆಯೇ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ
ಎಡೆಯೂರಿಗೆ ಆಗಮಿಸಿ, ಸೋಂಕಿತ ವ್ಯಕ್ತಿಯನ್ನು ತುಮಕೂರು ಕೋವೀಡ್ ಆಸ್ಪತ್ರೆಗೆ
ಸಾಗಿಸಿದ್ದಾರೆ. ಕುಟುಂಬ ವರ್ಗದವರನ್ನು ( ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿ)
ಸ್ಥಳೀಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನಲ್ಲಿಡಲಾಗಿದೆ .
ಸೋಂಕಿತ ವ್ಯಕ್ತಿ , ಕ್ಷಯ ರೋಗಿಯಾಗಿದ್ದು, ಸ್ಥಳೀಯ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ..
ಈತನ ಸಂಪರ್ಕ ಹೊಂದಿದ ವ್ಯಕ್ತಿಗಳ ಬಗ್ಗೆ ಸ್ಪಷ್ಠ ಮಾಹಿತಿ ಇಲ್ಲದಿದ್ದರು ಕಳೆದ ತಿಂಗಳು
ಮಂಡ್ಯಜಿಲ್ಲೆ ನಾಗಮಂಗಲ ಮತ್ತು ತುರುವೇಕೆರೆಗಳಿಗೆ ಹೋಗಿದ್ದು, ಎಡೆಯೂರಿನಲ್ಲಿ ಮದುವೆ
ಕಾರ್ಯಕ್ರಮದಲ್ಲ ಭಾಗಿಯಾಗಿದ್ದನೆಂದು ಕುಟುಂಬದ ಮೂಲಗಳು ತಿಳಿಸಿವೆ.
ಅಧಿಕಾರಿ ವರ್ಗದವರು ಪ್ರಾಥಮಿಕ ಸಂಪರ್ಕದವರ ವಿವರಗಳನ್ನು ಕಲೆ ಹಾಕ್ಕುತ್ತಿದ್ದಾರೆ. ಸೋಂಕಿತ ಮನೆ
ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ.
ತಾಲ್ಲೂಕಿನಲ್ಲಿ ಮೊದಲ ಪ್ರಕರಣ ಮುಂಬೈ ನಿಂದ ಬಂದು ಕ್ವಾರಂಟೈನ್ ನಲ್ಲಿದ್ದ
ವ್ಯಕ್ತಿಗೆ ಪಾಸಿಟಿವ್ ಬಂದಿದ್ದು ಗಂಭೀರತೆ ಪಡೆದಿರಲ್ಲಿಲ್ಲ,ಈಗ ಎಡೆಯೂರಿನ
ವ್ಯಕ್ತಿಗೆ ಸೋಂಕು ತಗುಲಿರುವುದು ಜನರು ಭಯ ಭೀತರಾಗಿದ್ದಾರೆ.
ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಸರ್ಕಾರ ನೀಡಿಲ್ಲ.