ತುರುವೇಕೆರೆ: ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಹಲವೆಡೆ ಗಿಡಗಳನ್ನು ಶುಕ್ರವಾರ ನೆಡಲಾಯಿತು.
ಅರಣ್ಯ ಇಲಾಖೆಗಳ ವತಿಯಿಂದ ಕಳ್ಳನಕೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂರಾರು ವಿವಿಧ ಬಗೆಯ ಸಸಿಗಳನ್ನು ಶಾಸಕ ಮಸಾಲ ಜಯರಾಂ ನೆಟ್ಟು ನೀರುಣಿಸಿದರು. ಗ್ರಾಮಸ್ಥರಿಗೆ ಹಾಗು ಶಾಲಾ ಶಿಕ್ಷಕರುಗಳಿಗೆ ಸಸಿಗಳನ್ನು ಚನ್ನಾಗಿ ಬೆಳೆಸಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಆರ್.ನಯಿಂಉನ್ನೀಸಾ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಗಿಡಗಳನ್ನು ನೆಟ್ಟು ಸಿಬ್ಬಂದಿಗಳಿಗೆ ಗಿಡಗಳನ್ನು ಬೆಳಸಿ ಪರಿಸರ ಉಳಿಸೋಣವೆಂದು ಕಿವಿ ಮಾತು ಹೇಳಿದರು.
ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಕೋರ್ಟ್ ಆವರಣದಲ್ಲಿ ನ್ಯಾಯಾದೀಶರ ಸಮ್ಮುಖದಲ್ಲಿ ವೈವಿಧ್ಯ ಬಗೆಯ ಗಿಡಗಳನ್ನು ನೆಡಲಾಯಿತು. ಹಾಗು ತಾಲ್ಲೂಕಿನ ಎಲ್ಲ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಇನ್ನು ಕೆಲವೆಡೆ ವಿವಿಧ ಸಂಘ ಸಂಸ್ಥೆಗಳಿಂದ ಸಸಿ ನೆಟ್ಟಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶ ಬಾಲಸುಬ್ರಹ್ಮಣ್ಯಂ, ಸಿವಿಲ್ ನ್ಯಾಯಾಧೀಶ ರಮೇಶ್ಬಾಬು, ಅರಣ್ಯ ವಲಯಾಧಿಕಾರಿ ನಿಸ್ಸಾರ್ ಅಹ್ಮದ್ ಚುನಾವಣಾ ಇಲಾಖೆಯ ಕಾಂತರಾಜ್, ಕಂದಾಯಾಧಿಕಾರಿ ಶಿವಕುಮಾರ್, ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.