ಚಿತ್ರ ಕೃಪೆ: ವಿಕಿ ಪಿಡಿಯಾ
ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಗಳು ದೇಶದ ಭೂಮಿ ಬೆಳಕನ್ನು ಬೂದಿ ಮಾಡುತ್ತವೆ. ಕೃಷಿ, ಶಿಕ್ಷಣ ಮುಂತಾದ ಕೆಲವು ಕ್ಷೇತ್ರಗಳು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇದ್ದರೂ ಕೇಂದ್ರೀಕರಣ ನೀತಿಯ ಮೂಲಕ ಒಕ್ಕೂಟ ಪದ್ಧತಿಗೆ ಧಕ್ಕೆ ತರಲಾಗುತ್ತಿದೆ ಎಂದು ಬಂಡಾಯ ಸಾಹಿತಿ, ಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ರಾಜ್ಯ ಮತ್ತು ರೈತರ ಸ್ವಾತಂತ್ರ್ಯವನ್ನು ಕಸಿಯಾಲಾಗುತ್ತಿದೆ. ಆದರೂ ರೈತರಿಗೆ ಸ್ವಾತಂತ್ರ್ಯ ಕೊಡುತ್ತಿರುವುದಾಗಿ ಕಂಠ ಪಾಠ ಒಪ್ಪಿಸಲಾಗುತದೆ. ಬಂಡವಾಳಶಾಹಿ ಆರ್ಥಿಕನೀತಿ ನೀಡುವ ಸ್ವಾತಂತ್ರ್ಯ ವೆಂದರೆ ಅದು ಬಂಡವಾಳಗಾರರಿಗೆ ನೀಡುವ ಸ್ವಾತಂತ್ರ್ಯ. ಶ್ರಮಮೂಲ ಆರ್ಥಿಕ ನೀತಿ ನೀಡುವ ಸ್ವಾತಂತ್ರ್ಯವೆಂದರೆ ರೈತರಿಗೆ, ಬಡವರಿಗೆ ನೀಡುವ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾಯಿದೆಗಳನ್ನು ವಿರೋಧಿಸುವ ಹೋರಾಟ ನ್ಯಾಯದ ಹೋರಾಟ. ರೈತರು ನಡೆಸುತ್ತಿರುವ ಹೋರಾಟಕ್ಕೆ ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲಿಸುತ್ತದೆ ಎಂದಿದ್ದಾರೆ.
ಹೋರಾಟ ಯಶಸ್ವಿ ಯಾಗಿ ಹೊಸ ಬೆಳಕಿನ ಹಾದಿಗೆ ನಾಂದಿಯಾಗಲಿ ಎಂದು ನಮ್ಮ ಸಂಘಟನೆ ಹಾರೈಸುತ್ತದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.