Publicstory.in
ಪಾವಗಡ: ಶನಿವಾರದಂದು ರಾಜ್ಯದ ಶ್ರೀ ಸತ್ಯಸಾಯಿ ಮಹಿಳಾ ಸಂಘಟನೆಯಿಂದ ಒಂದು ಆಪೂರ್ವಸೇವಾಕಾರ್ಯವು ನಡೆಯಿತು.
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯಕೇಂದ್ರದಲ್ಲಿ ನೂರಾರು ಕುಷ್ಠರೋಗಿಗಳು ಆಗಮಿಸಿದ್ದು ಅವರೆಗೆ ಔಷೋದೋಪಚಾರ ನೀಡುವುದರ ಜೊತೆಗೆ ಶ್ರೀ ಸತ್ಯಸಾಯಿ ಮಹಿಳಾಮಂಡಳಿಯ ಸುಮಾರು ಎಪ್ಪತ್ತೈದು ಸ್ವಯಂಸೇವಕರು ರೋಗಿನಾರಾಯಣ ಸೇವೆಯನ್ನು ಅತ್ಯಂತ ಶ್ರಾದ್ಧ ಭಕ್ತಿಯೊಂದಿಗೆ ಪೂಜ್ಯ ಸ್ವಾಮಿ ಜಪಾನಂದಜಿರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು.
ಭಗವಾನರ ಪವಿತ್ರಸ್ಮರಣೆಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಪಾವಗಡ, ಮಧುಗಿರಿ ಹಾಗು ಸುತ್ತಮುತ್ತಲ ಪ್ರದೇಶಗಳಿಂದ ನೂರಕ್ಕೂ ಮಿಗಿಲಾದ ಬಡ ರೋಗಿಗಳು ಆಗಮಿಸಿದ್ದರು. ಅವರ ವ್ರಣಗಳನ್ನು ಶುದ್ಧಿಗೊಳಿಸಿ ಔಷದೋಪಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ ನೇತೃತ್ವದಲ್ಲಿ ನಡೆಸಿಕೊಟ್ಟರು.
ನಂತರ ಪ್ರತಿಯೊಬ್ಬರಿಗೂ ಸುಮಾರು ಒಂದುಸಾವಿರದ ಐದುನೂರು ರೂಪಾಯಿಗಳ ಬ್ಯಾಗ್ ನೀಡಿದರು.
ಕುಟುಂಬ ಚೀಲದಲ್ಲಿ ಬಟ್ಟೆ, ಹೊದಿಕೆಗಾಗಿ ಕಂಬಳಿ, ಸೀರೆ, ಟವೆಲ್, ಪಂಚೆ, ಚಾಪೆ ಹೀಗೆ ಗೃಹಬಳಕೆಯ ವಸ್ತುಗಳನ್ನು ನೀಡಲಾಯಿತು. ನೂರಾರು ರೋಗಿಗಳಿಗೆ ಸೇವೆಸಲ್ಲಿಸಿದ ಭಾಗ್ಯನಮಗಾಯಿತು ಎಂದು ಸತ್ಯಸಾಯಿ ಸ್ವಯಂಸೇವಕರಿಗೆ ಸಂತೃಪ್ತಿಯಾಯಿತು.
ಇದೇಸಂದರ್ಭದಲ್ಲಿ ಆಶ್ರಮಕ್ಕೆ ಭೇಟಿನೀಡಿದ ಭಕ್ತರು ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸ್ವಾಮಿ ಜಪಾನಂದಜಿ ರವರು ನಾಮಸಂಕೀರ್ತನೆಯೊಂದಿಗೆ “ಸತ್ಸಂಗ ಮಹಿಮೆ” ಎಂಬುದರ ಮೇಲೆ ಉಪನ್ಯಾಸವಿತ್ತರು. ಒಟ್ಟಿನಲ್ಲಿ ಬೆಂಗಳೂರಿನಿಂದ ಬಂದಂತಹ ಭಕ್ತರಿಗೆ ನಿಜವಾದ ಅರ್ಥದಲ್ಲಿ ಸೇವೆ ಹಾಗು ಆದ್ಯಾತ್ಮ ಎರಡು ದೊರೆತಂತಾಯಿತು ಎಂದರು.
ಶ್ರೀ ರಾಮಕೃಷ್ಣ ಸೇವಾಶ್ರಮ ಕಳೆದ ಮೂವತ್ತು ವರುಷಗಳ ನಿರಂತರ ಸೇವೆ ಮತ್ತು ಆದ್ಯಾತ್ಮ ಕಾರ್ಯಕ್ರಮಗಳು ದೂರದೂರದಿಂದ ಜನರನ್ನು ಆಕರ್ಷಿಸುತ್ತಿರುವುದು ಶ್ಲಾಘನೀಯ.
ಸಹಾಯ ಹಸ್ತ ಚಾಚಿದ ಸಂಘಟನೆ?