ತುಮಕೂರು: ನಿವೇಶನ ರಹಿತ ಮತ್ತು ವಸತಿ ರಹಿತ ಹೋರಾಟ ಸಮಿತಿಯ ಸೂರಿಗಾಗಿ ಕೋಟಿ ಹೆಜ್ಜೆಯ ಐತಿಹಾಸಿಕ ಕಾಲ್ನಡಿಗೆ ಜಾಥವನ್ನು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮಾಜದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಜಾಥದ ನೇತೃತ್ವ ವಹಿಸಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.
ಅವರು ತುಮಕೂರಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಾವುದೆ ಒಂದು ರಾಜಕೀಯ ಪಕ್ಷ ಈವರೆಗೆ ಇಂತಹ ಸುದೀರ್ಘ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಂಡ ಉದಾಹರಣೆ ಇಲ್ಲ ಆದರೆ ಸಿಪಿಐ ನೇತೃತ್ವದಲ್ಲಿ ಈ ಯಾತ್ರೆಯನ್ನು ಫೆಬ್ರವರಿ 2 ರಿಂದ ಹಮ್ಮಿಕೊಳ್ಳಲಾಗಿದ್ದು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಕಾಲೋನಿಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸಿದೆ.
ರಾಜ್ಯದಲ್ಲಿ ಸುಮಾರು 50 ಲಕ್ಷ ಕುಟುಂಬಗಳು ಅಂದರೆ ಅಂದಾಜು ಎರಡು ಕೋಟಿ ಜನ ನಿವೇಶನ ರಹಿತ ಹಾಗೂ ವಸತಿ ರಹಿತವಾಗಿವಾಗಿದ್ದಾರೆ ಎಂಬ ಮೆಲ್ನೋಟದ ಮಾಹಿತಿ ಇದೆ.
ಇವರ ಸಮಸ್ಯೆ ಬಗೆಹರಿಸುವುದು ರಾಜ್ಯ ಸರ್ಕಾರದ ಆಧ್ಯ ಕರ್ತವ್ಯವಾಗಿದ್ದು ಕಾಯೋನ್ಮಖವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಸೂರಿಗಾಗಿ ಸಮರ ಕೋಟಿ ಹೆಜ್ಜೆ ಐತಿಹಾಸಿಕ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಬೇಕಾಯಿತು.
ಜನರ ನಡುವೆ ಈ ಜಾಥವನ್ನು ತೆಗೆದುಕೊಂಡು ಹೋಗಿ ಜನತೆಗೆ ಪೂರಕವಾದ ಜಾಥವನ್ನಾಗಿ ಮಾರ್ಪಡಿಸಲು ಶ್ರಮವಹಿಸಲಾಗಿದೆ ಎಂದು ತಿಳಿಸಿದರು