Tumkuru: ವಿದೇಶದಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳು ಮಾತ್ರವಲ್ಲದೇ ಅವರ ಮನೆಯವರು ಕ್ವಾರಂಟೈನ್ (ಏಕಾಂತ) ದಲ್ಲಿರಬೇಕು. ಕುಟುಂಬದವರೂ ಸಹ ಮನೆಯಿಂದ ಹೊರಗಡೆ ಓಡಾಡಬಾರದು. ಬೇರೆಯವರೊಂದಿಗೆ ಬೆರೆಯುವಂತಿಲ್ಲ.
ವಿದೇಶದಿಂದ ಬಂದವರನ್ನು ಎರಡು ಹಂತಗಳಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಒಟ್ಟು 28 ದಿನ ಅವರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತಿದೆ. ಕುಟುಂಬ ಸದಸ್ಯರು ಸಹ ಅವರೊಂದಿಗೆ ಸಂಪರ್ಕ ಬೆಳೆಸಬಾರದು. ಅವರ ಉಪಯೋಗಿಸಿದ ವಸ್ತುಗಳನ್ನು ಮುಟ್ಟಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ತಿಳಿಸಿದರು.
ವಿದೇಶದಿಂದ ಬಂದವರ ಮನೆಯವರು ಹೊರಗಡೆ ತಿರುಗಾಡುತ್ತಿದ್ದರೆ ಅಂತವರಿಗೆ ಬುದ್ದಿ ಹೇಳಬೇಕು. ಸಮೀಪದ ಆರೋಗ್ಯಾಧಿಕಾರಿಗಳಿಗೆ, ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೂ ಯಾರಿಗೂ ಸೋಂಕು ಕಂಡು ಬಂದಿಲ್ಲ. ಶಂಕಿತ ಹನ್ಬೆರಡು ಮಂದಿಯ ವರದಿಯೂ ಬಂದಿದ್ದು, ನೆಗಟಿವ್ ಬಂದಿದೆ. ಹೊಸದಾಗಿ ಭಾನುವಾರ ಯಾವ ಶಂಕಿತರು ಕಂಡುಬಂದಿಲ್ಲ ಎಂದರು.