ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಪೊಲೀಸರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರಿಗೆ ಹೂವಿನ ಮಳೆ ಸುರಿಯುವ ಮೂಲಕ ಗೌರವಿಸಿದರು.
ಸಚಿವ ಗೋವಿಂದ ಕಾರಜೋಳ ಸಹ ಇದಕ್ಕೆ ಕೈ ಜೋಡಿಸಿದರು. ಲಾಕ್ ಡೌನ್ ಆರಂಭವಾದಾಗಿನಿಂದ ಕ್ಷೇತ್ರದಲ್ಲಿ ಪಡಿತರ ಚೀಟಿ ಇಲ್ಲದವರಿಗೆ, ಕಡು ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡುವುದರ ಜೊತೆಗೆ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಜೀವನದ ಹಂಗು ತೊರೆದು ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಬೇಕಾಗಿದೆ. ಅವರ ಮಾಡುತ್ತಿರುವ ಕೆಲಸ ಬೇರೆಯವರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕೃಷಿಕರು ಬೆಳೆದಿರುವ ಬೆಳೆಯನ್ನು ಮಾರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಂದ ಖರೀದಿಸಿ ಬಡವರಿಗೆ ನೀಡಲಾಗುತ್ತಿದೆ ಎಂದು ಬಿ.ಸುರೇಶ ಗೌಡ ಹೇಳಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಸುರೇಶ ಗೌಡ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುರೇಶಗೌಡರಂಥ ಜನಾನುರಾಗಿಯನ್ನು ನಾನು ಬೇರೇ ಎಲ್ಲೂ ನೋಡಿಲ್ಲ. ಕ್ಷೇತ್ರಕ್ಕಾಗಿ ಹಗಲಿರುಳು ಈ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ತುಮಕೂರು ಗ್ರಾಮಾಂತರದ ಹೆತ್ತೇನಹಳ್ಳಿ ಹಾಗೂ ಹೆಗ್ಗೆರೆ ಗ್ರಾಮಗಳಲ್ಲಿ ಉಚಿತ ಮಾಸ್ಕ್ ಹಾಗೂ ಕಿಟ್ ನ್ನು ನೀಡುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ದೀಪಬೆಳಗುವ ಬದಲು ಸುಮಾರು 48 ದಿನಗಳಿಂದ ತಮ್ಮ ಕುಟುಂಬದ ರಕ್ಷಣೆಯನ್ನು ಬದಿಗೊತ್ತಿ, ದೇಶದ, ಸಮಾಜದ ಹಿತದೃಷ್ಟಿಯಿಂದ ಮಹಾಮಾರಿ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ವೈದ್ಯರುಗಳಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಮುಖ್ಯಮಂತ್ರಿ ಲೋಕೋಪಯೋಗಿ ಸಚಿವರಾದ ಗೋವಿಂದ ಎಂ ಕಾರಜೋಳ, ಮಾಜಿ ಸಚಿವ ಎಸ್ ಶಿವಣ್ಣ, ಪುಷ್ಪ ಗಳಿಂದ ಹೂ ಮಳೆಗರೆದರು.
ಸುರೇಶ್ ಗೌಡ ರವರು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಕುಮಾರ್, ಅನಿತಾ ಸಿದ್ದೇಗೌಡರು, ವೈ ಹೆಚ್ ಹುಚ್ಚಯ್ಯ ನವರು., ನರಸಿಂಹಮೂರ್ತಿ, ರಾಜೇಗೌಡರು, ಡಾಕ್ಟರ್ ನಾಗರಾಜುರವರು, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ಗಂಗಾಂಜನೆಯ, ಉಪಾಧ್ಯಕ್ಷರಾದ ಶ್ರೀ ಕೆ. ಏನ್. ಶಾಂತಕುಮಾರ್, ಹೆಗ್ಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಾಗರಾಜು, ತಾ ಪಂ ಸದಸ್ಯರುಗಳಾದ , ಡಿ, ಕೆ ಶಿವಕುಮಾರ್, ಕಂಠಪ್ಪ, ವಿಜಯಕುಮಾರ್, ಕವಿತ ರಮೇಶ್, ತಾಲೂಕು ಘಟಕದ ಅಧ್ಯಕ್ಷರಾದ, ಶಂಕರಣ್ಣ , ಗ್ರಾಮ ಪಂಚಾಯತಿ ಸದಸ್ಯರುಗಳಾದ ಭೋಜಣ್ಣ,ದೇವರಾಜು, ರಾಜಣ್ಣ ಮುಖಂಡರುಗಳಾದ, ನಾಗರತ್ನಮ್ಮ ಯುವ ಮೋರ್ಚಾದ ಅಧ್ಯಕ್ಷರಾದ ಗಿರೀಶ್, ಉಪಾಧ್ಯಕ್ಷರಾದ ಮದನ್, ಸ್ವಾಮಿ, ರಾಘವೇಂದ್ರ, ಇನ್ನೂ ಮುಂತಾದವರು ಉಪಸ್ಥಿತರಿದ್ದರು