ಮಹೇಂದ್ರ ಕೃಷ್ಣಮೂರ್ತಿ
ಹೆಣ್ಣು ಮಕ್ಕಳು, ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಡಾ.ಗಿರಿಜಮ್ಮ ಅವರು ಬರೆದಿರುವ ಬಸಿರು ಪುಸ್ತಕವನ್ನು ಗಂಡಸರು ಸಹ ಓದಬೇಕಾಗಿದೆ.
ಹೆರಿಗೆ ಅಂದರೆ ಮಹಿಳೆಗೆ ಪುನರ್ ಜನ್ಮ ಇದ್ದಂತೆ ಎಂಬ ಮಾತು ಈಗಲೂ ಜನಜನಿತ.
ಎಷ್ಟೆಲ್ಲ ವೈಜ್ಞಾನಿಕತೆ ಮುಂದುವರೆದಾಗಲೂ ಇಂದಿಗೂ ಹೆರಿಗೆ, ಬಾಣಂತನ ಎಂಬುವುದು ಕತ್ತಲಿನಲ್ಲೇ ಸಾಗುತ್ತಿದೆ.
ಹಲವು ಕಂದಚಾರಗಳು, ಲೋಕರೂಢಿಗಳಲ್ಲಿ ಸಿಲುಕಿದರೆ, ಹೆರಿಗೆಯ ಭಯದಲ್ಲೇ ಅನೇಕ ಗರ್ಭಿಣಿಯರು ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಇವೆಲ್ಲವಕ್ಕೂ ಉತ್ತರವನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ.
ಗರ್ಭದಾರಣೆಯಿಂದ ಹಿಡಿದು ಸಿಜೇರಿಯನ್ ಹೆರಿಗೆಯವರೆಗಿನ ಸಣ್ಣ ಸಣ್ಣ ಮಾಹಿತಿಯನ್ನು ವೈದ್ಯೆಯೂ ಆಗಿರುವ ಲೇಖಕಿ ನೀಡಿದ್ದಾರೆ.
ಗರ್ಭಿಣಿ, ಬಾಣಂತನದ ಆರೈಕೆ, ಊಟಪೋಚಾರಗಳು, ಆಕೆಯ ತುಮಲ, ವ್ಯಾಕುಲತೆ, ಆಹಾರ ಕ್ರಮ, ಎಚ್ಚರ ತಪ್ಪಿದರೆ ಬರಬಹುದಾದ ರೋಗ ರುಜಿನಗಳು, ಗರ್ಭಕೊರಳಿನ ಕ್ಯಾನ್ಸರ್ ಹೀಗೆ ಅನೇಕ ಮಾಹಿತಿಗಳ ಆಗರವಾಗಿರುವ ಈ ಪುಸ್ತಕವನ್ನು ಗಂಡಸರು ಓದಿದರೆ ತನ್ನೊಲುಮೆಯ ಹೆಂಡತಿಯನ್ನು ಗರ್ಭಿಣಿ ಮತ್ತು ಬಾಣಂತನದಲ್ಲೂ ಆಕೆಯ ಸೂಕ್ಷ್ಮ ಮನಸ್ಸು ಅರಿತು ಪ್ರೀತಿ ತೋರುವುದು ಗೊತ್ತಾಗಲಿದೆ.
ಪಠ್ಯಕ್ರಮದ ರೀತಿಯಲ್ಲಿ ಪುಸ್ತಕವನ್ನು ಜೋಡಿಸಿದ್ದು, ಹಲವು ರೇಖಾಚಿತ್ರಗಳ ಮೂಲಕ ಸರಳವಾಗಿ ಎಲ್ಲರಿಗೂ ಅರ್ಥವಾಗುಸುವಂತ ಭಾಷೆಯಲ್ಲಿ ಬರೆಯಲಾಗಿದೆ.