ತುರುವೇಕೆರೆ: ತಾಲ್ಲೂಕಿನ 480 ಎಪಿಆರ್, ಪಿಆರ್ಒಗಳಿಗೆ ಚುನಾವಣಾ ತರಬೇತಿ.
ತುರುವೇಕೆರೆ ತಾಲ್ಲೂಕಿನ 2ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27 ರಂದು ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಜಿ.ಜೆ.ಸಿ ಕಾಲೇಜಿನಲ್ಲಿ ಪಿಆರ್ಒ ಮತ್ತು ಎಪಿಆರ್ಒಗಳಿಗೆ ಚುನಾವಣಾ ತರಭೇತಿ ನೀಡಲಾಯಿತು.
ತಾಲ್ಲೂಕಿನ 27 ಪಂಚಾಯಿತಿಗಳ 200 ಮತಗಟ್ಟೆ ಕೇಂದ್ರಗಳಿಗೆ ಎಪಿಆರ್ 240, ಪಿಆರ್ಒ 240 ಸಿಬ್ಬಂದಿಗಳನ್ನು 15 ಕೊಠಡಿಗಳಲ್ಲಿ ಕೂರಿಸಿ 15 ಮಾಸ್ಟರ್ ತರಭೇತುದಾರರಿಂದ ಮಾಹಿತಿ ನೀಡಲಾಯಿತು.
ಮಧ್ಯಾಹ್ನ ಉಪಹಾರದ ನಂತರ ಚುನಾವಣೆಗೆ ನಿಯೋಜನೆಗೊಂಡ ಒಟ್ಟು 480 ಸಿಬ್ಬಂದಿಗಳಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಿಪಿಟಿಯ ಎಲ್ಇಡಿ ಸ್ಕ್ರೀನ್ ಮೂಲಕ ಪ್ರಾಯೋಗಿಕ ತರಭೇತಿ ನೀಡಲಾಯಿತು.
ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಎಲ್ಲರೂ ಮುಂದಾಗ ಬೇಕಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಕರೆಕೊಟ್ಟರು.
ಅಂಚೆ ಮತಪತ್ರ: ಚುನಾವಣಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಹಾಗು ಹೊರ ಜಿಲ್ಲೆಗಳಲ್ಲಿನ ನೌಕರರು, ಸೈನಿಕರು ಅಂಚೆ ಮತ ಪತ್ರದ ಮೂಲಕ ತಮ್ಮ ಮತ ಚಲಾಯಿಸಲು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಅಂಚೆ ಮತಪತ್ರ ಕೇಂದ್ರ ತೆರೆಯಲಾಗಿದ್ದು ಅಂಚೆ ಮತಪತ್ರಕ್ಕೆ ಅರ್ಜಿ ಸ್ವೀಕರಿಸಲು ಡಿ.22 ಕೊನೆಯ ದಿನವಾಗಿದೆ. ಪಡೆದ ಅಂಚೆ ಮತ ಪತ್ರವನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಲು ಡಿ.30 ಬೆಳಗ್ಗೆ8 ಗಂಟೆಯೊಳಗೆ ಸಲ್ಲಿಸಬೇಕು. ತದ ನಂತರ ಬಂದ ಪತ್ರಗಳನ್ನು ತಿರಸ್ಕರಿಸಲಾಗುವುದು. ಈಗಾಗಲೇ ತಾಲ್ಲೂಕಿನ 65 ಸೈನಿಕರಿಗೆ ಅಂಚೆ ಮತ ಪತ್ರ ಕಳುಹಿಸಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸವಪ್ಪ, ತಹಶೀಲ್ದಾರ್ ಆರ್.ನಯಿಂಉನ್ನೀಸಾ, ನೋಡಲ್ ಅಧಿಕಾರಿಗಳಾದ ಬಾಲಕೃಷ್ಣಪ್ಪ, ನಟರಾಜು, ಪಿಎಸ್ಐ.ಪ್ರೀತಂ, ಚುನಾವಣಾ ಸಿಬ್ಬಂದಿ ಪಿ.ಕಾಂತರಾಜು ಇದ್ದರು.