ಶಿರಾ: ಪತ್ರಿಕೋದ್ಯಮದ ಜವಾಬ್ದಾರಿ ಹೆಚ್ಚಿದ್ದು, ನೈತಿಕತೆ ಹೆಚ್ವಿಸುವ ಕೆಲಸ ಪತ್ರಕರ್ತರು ಮಾಡನೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಶಾಖೆ ಹಾಗೂ ಶಿರಾ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಸಮಾಜ ಸೇವಾ ರತ್ನ ಹಾಗೂ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಮಹಾರಾಜ್ ಜೀ ದ್ವೇಷ, ಅಸೂಯೆಗಳಿಂದ ಸಮಾಜವನ್ನು ಹೊಡೆಯುವ ಕೆಲಸ ಮಾಡುವುದನ್ನು ಬಿಡಬೇಕು, ಸಮಾಜವನ್ಮು ಬದಲಾಯಿಸುವ ಶಕ್ತಿ ಪತ್ರಿಕೆಗೆ ಇದೆ. ನಿಮ್ಮ ಒಂದು ವರದಿ ಸಮಾಜವನ್ನು ಸರಿ ದಾರಿಗೆ ತರುವುದು ಅದ್ದರಿಂದ ಹೊಸ ಸಮಾಜವನ್ನು ನಿರ್ಮಾಣ ಮಾಡುವ ಕೆಲಸ ಮಾಡಬೇಕು. ನಮ್ಮ ಜೀವನದಲ್ಲಿ ಬಂದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವವರೆ ನಿಜವಾದ ಸಮಾಜ ಸೇವಕರು ಎಂದರು.
ದತ್ತಿ ಪ್ರಶಸ್ತಿ: 2019-20 ನೇ ಸಾಲಿನಲ್ಲಿ ಚಂದ್ರಕಾಂತ್, ಎಚ್.ವಿ.ವೆಂಕಟಾಚಲ, ಎಚ್.ಐ.ಶಾಂತಿನಾಥ್, 2019-20 ನೇ ಸಾಲಿನಲ್ಲಿ ಕೊರಟಗೆರೆ ಪ್ರಜಾವಾಣಿ ವರದಿಗಾರ ಎ.ಆರ್.ಚಿದಂಬರ, ಮಂಜುನಾಥ ಅರಸ್, ಟಿ.ಎ.ವಿಜಯಕುಮಾರ್ ಅವರಿಗೆ ದತ್ತಿ ಪ್ರಶಸ್ತಿ ಹಾಗೂ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಮಹಾರಾಜ್ ಜೀ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಐಯುಡಬ್ಲ್ಯೂಜೆ ರಾಷ್ಟ್ರಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿದರು.
ಸಂಸದ ಪಿ.ಸಿ.ಮೋಹನ್, ನಗರಸಭೆ ಅಧ್ಯಕ್ಷ ಅಂಜಿನಪ್ಪ, ತಹಶೀಲ್ದಾರ್ ಎಂ.ಮಮತ, ಮುಡಿಮಡು ಮಂಜುನಾಥ್, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ರಘುರಾಮ್, ತಾಲ್ಲೂಕು ಅಧ್ಯಕ್ಷ ಜಯಪಾಲ್ , ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದಲಿಂಗಸ್ವಾಮಿ, ಆರ್.ನಾಗರಾಜು, ಚಿಕ್ಕೀರಪ್ಪ, ವಿನೋದ್ ಕುಮಾರ್, ದಶರಥ, ಬಾಲಕೃಷ್ಣೇಗೌಡ, ಶಿವಕುಮಾರ್ ಇದ್ದರು.