Friday, November 22, 2024
Google search engine
Homeಜನಮನಜಗತ್ತಿನ ಶಕ್ತಿದೇವತೆಗಳ ಮಹಾಸಂಗಮ ಶಕ್ತಿಪೀಠಕ್ಕೆ ಶಿಲಾನ್ಯಾಸ‌ ನೆರವೇರಿಸಿದ ಶಾಸಕ ಜ್ಯೋತಿ ಗಣೇಶ್

ಜಗತ್ತಿನ ಶಕ್ತಿದೇವತೆಗಳ ಮಹಾಸಂಗಮ ಶಕ್ತಿಪೀಠಕ್ಕೆ ಶಿಲಾನ್ಯಾಸ‌ ನೆರವೇರಿಸಿದ ಶಾಸಕ ಜ್ಯೋತಿ ಗಣೇಶ್

Publicstory.in


ಬಗ್ಗನಡು: ಶಕ್ತಿಪೀಠ ಕ್ಯಾಂಪಸ್ ವಿಶ್ವದ, ದೇಶದ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುವ ಬುದ್ದಿಜೀವಿಗಳ ತಾಣವಾಗಲಿ ಎಂದು ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಕರೆ ನೀಡಿದರು.

ಅವರು ದಿನಾಂಕ:22.08.2021 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆದ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವದ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳ ಸ್ಥಾಪನೆ ಶಕ್ತಿಪೀಠದಲ್ಲಿ ಆಗಲಿದೆ.

ಶಕ್ತಿಪೀಠದಲ್ಲಿ ಧಾರ್ಮಿಕವಾಗಿ ಮಾತ್ರವಲ್ಲದೇ ದೇಶದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ಯೊಂದಿಗೆ , ದೇಶದ 37 ರಾಜ್ಯಗಳ ಮತ್ತು ರಾಜ್ಯದ 31 ಜಿಲ್ಲೆಗಳ ಪರಿಣಿತರು ಒಂದೇ ವೇದಿಕೆಯಲ್ಲಿ ಸೇರಿ ಅಭಿವೃದ್ಧಿ ಯೋಜನೆಗಳ ಚಿಂಥನ– ಮಂಥನ ನಡೆಸುವ ಆಲೋಚನೆ ಬಹಳ ಉತ್ತಮವಾಗಿದೆ ಎಂದರು.

ಧಾರ್ಮಿಕ, ಜ್ಞಾನ, ವಿಜ್ಞಾನ ಮತ್ತು ಅಭಿವೃದ್ಧಿಯ ಸಂಗಮವಾಗಲಿದೆ ಈ ಕ್ಷೇತ್ರ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ ಶಾಸಕರು, ಕೇಂದ್ರ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಹಳ ಒತ್ತು ನೀಡಿದೆ. ಅದನ್ನು ಗ್ರಾಮೀಣ ಮಟ್ಟದಲ್ಲಿ ಬಳಸಿಕೊಂಡು ರೈತರ ಮತ್ತು ಬಡವರ ಅಭಿವೃದ್ಧಿಗೆ ಅನೂಕೂಲ ಮಾಡುವಂತಹ ಚಿಂತನೆಗಳ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.

ನಮ್ಮಲ್ಲಿ ನೂರಾರು ಯೋಜನೆಗಳು ಜಾರಿಯಾಗಲಿವೆ, ಯೋಜನೆ ಜಾರಿಯಾದ ನಂತರ ಅವುಗಳಿಂದ ಯಾರಿಗೆ ಎಷ್ಟರ ಮಟ್ಟಿಗೆ ಅನೂಕೂಲವಾಗಿವೆ ಎಂಬ ಮೌಲ್ಯಮಾಪನ ಅಗತ್ಯ ಎಂದು ಪ್ರತಿ ಪಾದಿಸಿದರು. ಈ ಕ್ಯಾಂಪಸ್ ಒಂದು ‘ಕಾಮನ್ ಫೆಸಿಲೇಟಿ ಸೆಂಟರ್’ ಆಗುವ ಲಕ್ಷಣಗಳಿವೆ. ಸಂಶೋಧಕರು ಇದರ ಪ್ರಯೋಜನ ಪಡೆದುಕೊಳ್ಳ ಬೇಕಿದೆ ಎಂದರು.

ಕುಂದರನಹಳ್ಳಿ ರಮೇಶ್ ರವರು ನಮ್ಮ ತಂದೆಯವರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜೊತೆಯಲ್ಲಿ ಧೀರ್ಘ ಕಾಲದ ಒಡನಾಟದ ಅನುಭವಗಳನ್ನು ಸಾಕಾರಗೊಳಿಸುವ ಕಾರ್ಯ ಆರಂಭ ಮಾಡಲು ಪ್ರಥಮ ಹೆಜ್ಜೆ ಇಟ್ಟಿದ್ದಾರೆ. ಶಕ್ತಿಪೀಠ ಫೌಂಡೇಷನ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಂದಿಗೆ ವಿವಿಧ ಯೋಜನೆಗಳ ‘ಪರಿಣಿತರ, ಬುದ್ದಿವಂತರ, ಚಿಂತಕರ ಕಣಜವಾಗಲಿ ‘ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ನಂತರ ಕ್ಯಾಂಪಸ್ ನ ಲೇ ಔಟ್ ನಲ್ಲಿ ಸುತ್ತಾಡಿ ಮಾಹಿತಿ ಪಡೆದರು. ನೀರು ಮತ್ತು ಪರಿಸರಕ್ಕೆ ಬಹಳ ಒತ್ತು ನೀಡಲಾಗಿದೆ. ‘ಬರದ ನಾಡಿನಲ್ಲಿ ಇದೊಂದು ಮಲೆನಾಡಿನ ವಾತಾವಾರಣ’ ವಾಗುವ ಆಶಾಭಾವನೆ ವ್ಯಕ್ತ ಪಡಿಸಿದರು.

ದಾನಿಗಳು, ಭಕ್ತರು, ಚಿಂತಕರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?