ಕುರುಕ್ಷೇತ್ರ ನಾಟಕ ಎಂದರೆ ಕಲಾಭಿಮಾನಿಗಳಿಗೆ ಹಬ್ಬವೇ ಸರಿ. ಕುರುಕ್ಷೇತ್ರ ನಾಟಕ ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇಂದು ಜನರ ಮನಸ್ಸನ್ನು ಸೂರೆಗೊಂಡಿತು.
ಅದರಲ್ಲೂ ದುರ್ಯೋಧನ ಪಾತ್ರಧಾರಿ ಧನಂಜಯ ವೇದಿಕೆಗೆ ಆಗಮಿಸಿದ ಕೂಡಲೇ ಕೇಕೆ, ಚಪ್ಪಾಳೆ, ಸೀಟಿ ಹೊಡೆಯುವುದರೊಂದಿಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹಾಡು, ಕುಣಿತ ದುರ್ಯೋಧನನ ಹಾವ, ಭಾವಕ್ಕೆ ನೆರೆದಿದ್ದ ಕಾಲಾ ಪೋಷಕರು ಹರ್ಷೋದ್ಘಾರದೊಂದಿಗೆ ಪ್ರೋತ್ಸಾಹಿಸಿದರು.
ದುರ್ಯೋಧನಂಜಯನ ಕಲೆಗೆ ತಲೆದೂಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಅವರ ಜೊತೆ ಭಾವಚಿತ್ರ ತೆಗೆಸಿಕೊಂಡು ಕಲಾವಿದರಿಗೆ ಪ್ರೋತ್ಸಾಹ ನೀಡಿದರು.
ಸಂಪೂರ್ಣ ನಾಟಕ ತುಂಬಾ ಚೆನ್ನಾಗಿ ಮೂಡು ಬರುತ್ತಿದೆ ಎಂದು ನೆರೆದಿದ್ದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ನಿರ್ವಹಣೆ, ಬೆಳಕು, ಸಂಗೀತ, ಪಾತ್ರಧಾರಿಗಳ ಕಲಾ ಪ್ರದರ್ಶನ ಸಂಪೂರ್ಣ ನಾಟಕ ಜನರ ಮನಚ್ಚಿನಲ್ಲಿ ತನ್ನದೆ ಛಾಪು ಮೂಡಿಸಿದೆ.