ಚಿದು
ಮೊನ್ನೆ ನಮ್ಮಮದುವೆ ವಾರ್ಷಿಕೋತ್ಸವ ಇತ್ತು. ಎಲ್ರೂ ಬೆಳಿಗ್ಗೆನೆ ವಾರ್ಷಿಕೋತ್ಸವದ ಶುಭ ಹಾರೈಸಿದ್ರು. ಅದ್ರಲ್ಲು ನಮ್ಮ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಹರಸಿ ಹಾರೈಸಿದ್ರು.
ಅಂತೂ ಇಂತು ನಾವು ನಮ್ಮ ಸ್ವ-ಸ್ವತಂತ್ರ ಕಳಕೊಂಡು ಏಳು ವರ್ಷ ಮುಗಿದೋಯ್ತು. ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ಏರುಪೇರಿನ ಗಾಯನಕ್ಕೆ ಜೊತೆಗೂಡಿ ಅಡಿ ಇಟ್ಟವಳು ನಮ್ಮಾಕೆ.
ಯಾವಾಗಾದ್ರು ನನ್ನ ಮೇಲೆ ಬೇಜಾರಾದಾಗ ಅಯ್ಯೋ ಈ ಮನುಷ್ಯನ್ನ ಎಲ್ಲೆಲ್ಲೋ ಕಟ್ಕೊಂಡೆ ಅಂತ ಅವ್ಳು ಬೇಸರಿಸುತ್ತಿರುತ್ತಾಳೆ. ಬೆಳಗ್ಗೆ ಆಗಂದವಳೆ ಸಂಜೆ ಶಾಲೆಯಿಂದ ಬಂದವ್ಳು ನನಗೆ ಇಷ್ಟದ ಟೀ ಕೊಟ್ಟು ಮಧ್ಯಾಹ್ನ ಏನು ಊಟ ಮಾಡ್ಕಂಡ್ರಿ ಅಂತ ಆರೈಕೆ ಮಾಡ್ತಾಳೆ.
ಒಂದ್ವೇಳೆ ನಾನು ಮಧ್ಯಾಹ್ನ ಏನು ತಿಂದಿಲ್ಲ ಅಂದ್ರೆ.. ಅದ್ಕೂ ಬೈತಾಳೆ.. ಏನಾರ ತಿನ್ಕೊಳೋದಲ್ವ ಅಂತಾ… ಬೆಳಗೆ ನೋಡಿದ್ರೆ ಯಾಕಾದ್ರು ಕಟ್ಕೊಂಡೆ ಅಂದವಳು ಸಂಜೆ ನಿಗಾ ವಹಿಸ್ತಾಳೆ. ಹಿಂಗೇ ಆಗ್ಲೆ ಏಳು ವರ್ಷ ಪೂರೈಸಿ ಎಂಟನೇ ವರ್ಷಕ್ಕೆ ಕಾಲಿಟ್ಟಿದಿವಿ.
ಜೀವನ ನಾವು ಎಂಗೆ ರೂಪಿಸಿಕೊಳ್ತಿವೋ ಅಂಗೆ. ಯಾವುದನ್ನು ಹೆಚ್ಚು ಹೊತ್ತು ತಲೆಲೀ ಇಟ್ಕೊಳ್ಳದೆ ಸಿಕ್ಕ ಸಣ್ಣ ಸಣ್ಣ ಸಮಯದಲ್ಲಿ ಆದಷ್ಟು ನಗ್ತಾ ಇದ್ದಿದರಲ್ಲಿ ಖುಷಿ ಪಡೋದ್ರಲ್ಲೆ ಸ್ವರ್ಗ ಸುಖ.
ನಾನಂತು ಕೆಲವು ಸಲ ನನ್ನಾಕೆ ಜೊತೆ ಜಗಳ ಹಾಡೋದ್ರಲ್ಲು ಜೀವನಾನಂದ ಅನುಭವಿಸ್ತಿನಿ ಯಾಕಂದ್ರೆ ಅವ್ಳು ನನ್ನ ಜೊತೆ ಜಗಳ ಆಡಿದಷ್ಟು ಹೆಚ್ಚೆಚ್ಚು ನನ್ನ ಕೇರ್ ಮಾಡ್ತಾಳೆ. ಜಗಳ ಹಾಡೋಕೆ, ಖುಷಿ ಪಡೋಕೆ, ಅನ್ಸಿದ್ನ ಹೇಳಿಕೊಂಡು ಬೈಸಿಕೊಳ್ಳೋಕೆ ನನಗೊಂದು ಒಳ್ಳೆ ಜೀವ ಸಿಕ್ಕಿದೆ. ಇದಷ್ಟು ದಿನ ಇಂಗೇ ಇರ್ಲಿ ಭಗವಂತ…