ತಿಪಟೂರು: ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ ನ. 23 ಮತ್ತು 24 ರಂದು ನಡೆಯಲಿದ್ದು ಈ ವೇಳೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ . ರಾಕೇಶ್ ಕುಮಾರ್ ತಿಳಿಸಿದರು.
ನಗರದ ಕಲ್ಪತರು ಕಾಲೇಜಿನ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಗಣಪತಿ ಜಾತ್ರೆಯನ್ನು ಶಾಂತ ರೀತಿಯಲ್ಲಿ ಯಶಸ್ವಿ ಮಾಡಬೇಕೆಂದು ತಿಳಿಸಿದರು.
ಶಾಸಕರಾದ ಬಿ ಸಿ ನಾಗೇಶ್ ರವರು ಮಾತನಾಡಿ ಕಳೆದ 90 ವರ್ಷಗಳಿಂದಲೂ ಕಲ್ಪತರು ನಾಡ ಹಬ್ಬವಾಗಿ ಗಣೇಶೋತ್ಸವವನ್ನು ಅಚರಿಸಿಕೊಂಡು ಬರುತ್ತಿದ್ದು ಕಲ್ಪತರು ನಾಡಿನ ಜನತೆ ಭಾಗವಹಿಸಿ ಯಶಸ್ವಿ ಮಾಡಬೇಕೆಂದು ತಿಳಿಸಿದರು.
ಶಾಂತಿ ಸಭೆಯಲ್ಲಿ ಮಾತನಾಡಿದ ಎಸ್ಪಿ ಕೊನಂವಂಶಿಕೃಷ್ಣ ಅವರು ಸತ್ಯಗಣಪತಿ ಜಾತ್ರೆಯು ರಾಜ್ಯದಲ್ಲೆ ಹೆಸರು ವಾಸಿಯಾಗಿದ್ದು ರಾಜ್ಯದಾದ್ಯಂತ ಜನರು ಬರುವುದರಿಂದ ಎಲ್ಲರೂ ಸಹಕರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೆಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಲೋಕೇಶ್ವರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತರಕಾರಿ ನಾಗರಾಜು, ಉಪವಿಭಾಗಾಧಿಕಾರಿ ಕೆ.ಅರ್ ನಂದಿನಿ, ತಹಶಿಲ್ದಾರ್ ಅರತಿ,ಡಿ ವೈ ಎಸ್ ಪಿ ಕಲ್ಯಾಣ ಕುಮಾರ್ ,ಸಿ.ಪಿ.ಐ ನವೀನ್, ಗ್ರಾಮಂತರ ಪಿ ಸಿ ಐ ಜಯಲಕ್ಷೀ, ಪಿ ಎಸ್ ಐ ಕೃಷ್ಣಕುಮಾರ್,ನಗರ ಸಭಾ ಸದಸ್ಯರಾದ ಡಾ. ಓಹಿಲಾ , ಭಾರತಿ, ಸಂಗಮೇಶ್, ಯೋಗೀಶ್ ವಿನುತ ಮಾಜಿ ಸದಸ್ಯರಾದ ತರಕಾರಿ ಗಂಗಾಧರ್ ನಿಜಗುಣ ಇತರರು ಇದ್ದರು.
ನಗರದ ರಸ್ತೆಗಳನ್ನು ಸರಿ ಪಡಿಸಲು ನಗರಸಭಾ ಸದಸ್ಯರುಗಳ ಅಗ್ರಹ;
ತಿಪಟೂರು ನಗರದ ರಸ್ತೆಗಳು ಹಾಳಾಗಿದ್ದು ಅವುಗಳನ್ನು ಮೊದಲು ಸರಿಪಡಿಸಿ ಗಣೇಶನ ಮೆರವಣಿಗೆಗೆ ಅನೂಕೂಲಮಾಡಿ ಕೊಡಬೇಕೆಂದು ನಗರಸಭಾ ಸದಸ್ಯರುಗಳು ಅಗ್ರಹಿಸಿದರು. ಶಾಂತಿ ಸಭೆಯಲ್ಲಿ ಮಾತನಾಡಿದ ನಗರಸಭಾ ಸದಸ್ಯರುಗಳು ರಸ್ತೆಗಳು ಸರಿಪಡಿಸದಿದ್ದರೆ ಮೆರವಣಿಗೆ ಕಷ್ಟ ಸಾದ್ಯ ಎಂದ ಅವರು ನಗರ ಸಭೆಯ ಅಧಿಕಾರಿಗಳು ಬರಿ ಸುಳ್ಳು ಹೇಳುತ್ತಾರೆ ಎಂದು ಅರೋಪಿಸಿದರು.