ಬಯಲುಸೀಮೆ ತುಮಕೂರಿನಲ್ಲಿ ವಾರ್ಷಿಕವಾಗಿ ಬೀಳುತ್ತಿದ್ದ ಮಳೆಗಿಂತಲೂ ಹೆಚ್ಚು ಬಿದ್ದಿದೆ.
ಜಿಲ್ಲೆ ವಾರ್ಷಿಕ ಮಳೆ ಪ್ರಮಾಣ 640 ಮಿ.ಮಿ. ಆದರೆ ಈ ವರ್ಷ ಈಗಾಗಲೇ 740 ಮಿ.ಮಿ. ಮಳೆಯಾಗಿದೆ. ಇನ್ಮೂ ಮಳೆಗಳು ಇರುವ ಕಾರಣ ಮತ್ತಷ್ಟು ನೀರು ಸಿಗಲಿದೆ. ಆದರೆ ಇದು ಕಷ್ಟಕ್ಕೂ ಕಾರಣವಾಗಲಿದೆ ಎನ್ನುತ್ತಾರೆ ರೈತರಾದ ಪದ್ಮರಾಜ್
ಹದಿನೈದು ವರ್ಷಗಳ ನಂತರ ಎಲ್ಲಾ ಕಡೆಯು ರಾಗಿ ಹೊಲಗಳು ಚೆನ್ನಾಗಿವೆ. ನಡುವೆ ಬಿತ್ತನೆ ಮಾಡಿರುವ ಅಕ್ಕಡಿ ಸಾಲಿನಲ್ಲಿರುವ ಸಾಸಿವೆ, ಜೋಳ, ಅವರೆ, ಅಲಸಂದೆ, ತೊಗರಿ, ನವಣೆ, ಹುಚ್ಚೇಳು, ಹುರುಳಿ ಬೆಳೆಗಳು ಇಳುವರಿಯ ನೀಡುವಲ್ಲಿ ಪೈಪೋಟಿ ನಡೆದಿದೆ, ಎಲ್ಲಾ ಖುಷಿಯ ನಡುವೆ ಬೆಲೆ ಕುಸಿಯುವ ಅತಂಕ ಕಾಣುತ್ತಿದೆ.
ಸಜ್ಜೆ ಕೊರಳೆ ಹೊಲಗಳು ಸಹ ಉತ್ತಮವಾದ ಇಳುವರಿ ನೀಡುತ್ತವೆ.
ರಾಗಿ ಹೊಲಗಳು 4 ಅಡಿಗೂ ಹೆಚ್ಚು ಬೆಳೆದಿದೆ.
ರಾಗಿ ಪೈರುಗಳಿಗಿಂತಲೂ ಹೆಚ್ಚು ಎತ್ತರವಾಗಿ ಬೇರೆ ಬೆಳೆಗಳು ಬೆಳದಿವೆ. ತೆನೆಗಳು ದಷ್ಟಪುಷ್ಟವಾಗಿ ಕಾಣುತ್ತಿವೆ. ವಾರ್ಷಿಕ ವಾಡಿಕೆ ಮಳೆ 630 ಮಿಮೀ. ಇದುವರೆಗೂ ಬಂದಿರುವ ಮಳೆ 760 ಮಿಮೀ. ಜುಲೈನಲ್ಲಿ ಮಾತ್ರ ಮಳೆ ಕೈಕೊಟ್ಟಿದರಿಂದ ಕುಂಟೆ ಹೊಡೆಯುವುದು, ಕಳೆ ಕೀಳುವುದು ಮಾಡಲು ಅಗಲಿಲ್ಲ. ಪ್ರತಿ ತಿಂಗಳು ವಾಡಿಕೆ ಮಳೆಗಿಂತಲೂ ಹೆಚ್ಚು ಅಗಿದೆ. ಹಿರಿಯ ರೈತರು ತಿಳಿಸಿದಂತೆ ಹದವಾಗಿ ಮಳೆಯಾಗಿದೆ.
ಹೊಲಗಳು ಸಿಕ್ಕಪಟ್ಟೆ ಬೆಳೆದಿರುವುದರಿಂದ ತೆನೆಯ ಭಾರ ಹೆಚ್ಚಾಗಿ ನೆಲಕ್ಕೆ ಬಾಗುವುದು ಪ್ರಾರಂಭವಾಗಿ ರೈತರುಗಳಿಗೆ ಅತಂಕ ತಂದಿದೆ.
ತೆನೆಗಳು ನೆಲಕ್ಕೆ ತಾಗಿದರೆ ಮೊಳಕೆ ಹೊಡೆದು ಬೆಳೆ ಹಾಳುಗುತ್ತದೆ. ಮೇವು ಸಹ ಗೆದ್ದಳು ಹತ್ತಿ ಹಾಳುಗುತ್ತದೆ. ಇದು ಅತ್ಯಂತ ಅಪಾಯ ಸ್ಥಿತಿ.
ಹದಿನೈದು ವರ್ಷಗಳ ನಂತರ ಈ ರೀತಿಯ ಬೆಳೆಗಳನ್ನು ನೋಡುತ್ತಿದ್ದೆವೆ ಎನ್ನುತ್ತಾರೆ.
ಮಳೆ ಎಲ್ಲಾ ಕಡೆಯು ಬೆಳೆಗೆ ಅನುಕೂಲ ವಾದ ರೀತಿ ಅಗಿದೆ. ಬೆಳೆಯ ಇಳುವರಿಯು ಸಹ ಒಂದೇ ಸಮ ಬರುತ್ತದೆ.
ಸದ್ಯದ ಮಟ್ಟಿಗೆ ರೈತನ ಮುಖದಲ್ಲಿ ಹೆಚ್ಚಿನ ಮಂದಹಾಸ ಮೂಡಿಸಿದೆ. ಹೆಚ್ಚಿನ ಇಳುವರಿಯಿಂದ ರಾಗಿ ಬೆಲೆಯು ಕುಸಿಯುವ ಹಂತ ತಲುಪಿದೆ.
ಬೆಲೆ ಕುಸಿತವಾದರೆ ರೈತನ ಸ್ಥಿತಿಯಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ.