Publicstory. in
ತುಮಕೂರು: ನಗರದ ಬಟವಾಡಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವೈಕುಂಠ ದ್ವಾರಬಾಗಿಲ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಸಾದದ ತಯಾರಿ
ಹಲವು ವರ್ಷಗಳಿಂದಲೂ ಇಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವೈಕುಂಠವೇ ಧರೆಗೆ ಇಳಿದು ಬಂದಿರುವಂಥ ದೃಶ್ಯ ವೈಭವ ಪುನರ್ ಸೃಷ್ಟಿಸಲಾಗಿದೆ. ದೇವಸ್ಥಾನದಲ್ಲಿ ಸಾಲಂಕೃತಗೊಂಡ ವೈಕುಂಠ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಾರೆ ಇಲ್ಲಿ ವೈಕುಂಠ ದರ್ಶನ ಪಡೆದಿರುವ ಭಕ್ತರು.
ಜಾಹೀರಾತು
ಪ್ರತಿ ವರ್ಷದಂತೆ ಈ ವರ್ಷವೂ ಮುಂಜಾನೆ ಆರು ಗಂಟೆಗೆ ದರ್ಶನ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆ 4 ಗಂಟೆ ವೇಳೆಗಾಗಲೇ ಭಕ್ತರು ಸಾಲುಗಟ್ಟಿ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುವುದರಿಂದ ಭಕ್ತರಿಗೆ ತೊಂದರೆಯಾಗದಂತೆ ದರ್ಶನ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಹೂವಿನ ಅಲಂಕಾರ
ವಿಶೇಷ ವ್ಯವಸ್ಥೆಯೂ ಇದ್ದು, ಅದಕ್ಕಾಗಿ ಹೆಚ್ಚಿನ ಹಣ ತೆತ್ತು ಆ ಸಾಲಿನಲ್ಲಿ ಹೋಗಬಹುದಾಗಿದೆ. ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈಗಾಗಲೇ ದೇವಸ್ಥಾನವನ್ನು ದೀಪಂಲಕಾರಗಳಿಂದ ಶೃಂಗರಿಸಲಾಗಿದೆ.
ಏನು ವಿಶೇಷ
ಡಿ.ಎಸ್.ಕುಮಾರ್
ಸ್ವಾಮಿಗೆ ವಜ್ರ ಕಿರೀಟ, ವಜ್ರ ಶಂಖದ ವಿಶೇಷ ಅಲಂಕಾರ ಮತ್ತು ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿ ಅಮ್ಮನವರಿಗೆ, ಬಲಮುರಿ ಗಣೇಶ, ಉತ್ಸವ ಮೂರ್ತಿ,ಆಂಜನೇಯ ಸ್ವಾಮಿ ಹಾಗೂ ಸತ್ಯನಾರಾಯಣ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎಸ್.ಕುಮಾರ್ ತಿಳಿಸಿದ್ದಾರೆ.
ಭಕ್ತರು ನಂಬಿಕೆ ದಿನೇದಿನೇ ಹೆಚ್ಚುತ್ತಲೇ ಸಾಗಿದೆ. ಪ್ರತಿ ವರ್ಷ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸ್ವಾಮಿ ದರ್ಶನದಿಂದ ಭಕ್ತರು ಪುನೀತರಾಗುತ್ತಿದ್ದಾರೆ ಎಂದರು.
ಪ್ರಸಾದ ತಯಾರಿ
ಲಕ್ಷಕ್ಕೂ ಮೀರಿ ಭಕ್ತರು ಬರುವವರಿದ್ದು ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಭಾನುವಾರ ರಾತ್ರಿಯಿಂದಲೇ ಭಟ್ಟರು ಪ್ರಸಾದದ ಕೈಕಂರ್ಯದಲ್ಲಿ ತೊಡಗಿದ್ದರು. ದೇವಸ್ಥಾನದ ಅಲಂಕಾರಗಳಿಂದ ಕಂಗಗೊಳಿಸುತ್ತಿತ್ತು. ಹಬ್ಬದ ವಾತಾವರಣದಿಂದ ಕಳೆಗಟ್ಟಿತ್ತು.