ತುಮಕೂರು ತಾಲ್ಲೂಕಿನ ಬಳ್ಳಗೆರೆಯ ಬಿ.ಜಿ.ಗೀತಾಂಜಲಿ ಅವರು ಬಿಬಿಎಂ ಪದವಿಯಲ್ಲಿ ಚಿನ್ನದ ಪದಕ ಪಡೆದು ಸಂಭ್ರಮಿಸಿದರು. ಇವರು ತುಮಕೂರು ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿನಿ. ಪ್ರಸ್ತುತ sit college student in MBA
Picture: Jp
Publicstory. in
Tumkuru: ದೇಶದ ಅಭಿವೃದ್ಧಿ ಮತ್ತು ಭವ್ಯ ಪರಂಪರೆ ಯುವ ಜನಾಂಗದ ಕೈಯಲ್ಲಿದ್ದು, ಇರುವ ಅಪರಿಮಿತ ಅವಕಾಶಗಳನ್ನು ಬಳಸಿಕೊಂಡು 21ನೇ ಶತಮಾನದ ಆರ್ಥಿಕತೆಯ ಉತ್ತುಂಗದ ದಾರಿಯಲ್ಲಿ ಸಾಗಬೇಕು ಎಂದು ವಿಶ್ವವಿದ್ಯಾಲಯಗಳ ಸಂಘ ಅಧ್ಯಕ್ಷ ಮಾಣಿಕ್ ರಾವ್ ಸಾಲುಂಖೆ ತಿಳಿಸಿದರು.
ಅವರು ಇಂದು ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ತುಮಕೂರು ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದರು. ಅವಿಷ್ಕಾರ, ನಾವಿನ್ಯತೆ, ವಾಣಿಜ್ಯೋದ್ಯಮದ ಬಾಗಿಲುಗಳು ತೆರೆದು ನಿರುದ್ಯೋಗದಂತಹ ಸಮಸ್ಯೆಗಳನ್ನು ಹೋಗಲಾಡಿಸಬೇಕು ಎಂದರು.
ರಾಜ್ಯಪಾಲರು ವಾಜುಭಾಯಿ ವಾಲಾ 13ನೇ ಘಟಿಕೋತ್ಸವ ಸಮಾಭರಂದಲ್ಲಿ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣಪದಕ, ಪ್ರಮಾಣಪತ್ರ, ನಗದು ಬಹುಮಾನ ನೀಡಿದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಡಾ. ಸಿ.ಎನ್ ಮಂಚೇಗೌಡ ಅವರಿಗೆ ರಾಜ್ಯ ಪಾಲರು ಡಿ.ಲಿಟ್ ಪದವಿ ನೀಡಿದರು.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎನ್.ಸಿದ್ಧೇಗೌಡ ಪ್ರಾಸ್ತಾವಿಕ ನಾತನಾಡಿ ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆ, ವಿಶ್ವವಿದ್ಯಾನಿಲಯದ ಮಹತ್ವ, ಶೈಕ್ಷಣಿಕ ವಿವರ, ವಿಶ್ವವಿದ್ಯಾನಿಲಯದಲ್ಲಿರುವ ಕೋರ್ಸ್ಗಳು ಮತ್ತು ಅವುಗಳ ಸೌಲಭ್ಯಗಳು, ಆಡಳಿತ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕುಲಸಚಿರಾದ ಪ್ರೊ. ಕೆ.ಜೆ.ಸುರೇಶ್, ಪ್ರೊ. ಗಂಗಾನಾಯ್ಕ್, ಜಿಲ್ಲಾಧಿಕಾರಿ ಡಾ. ರಾಕೇಶ್ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನವಂಶಿಕೃಷ್ಣ ಉಪಸ್ಥಿತರಿದ್ದರು.