Publicstory
ತುಮಕೂರು : ನಗರದ ಜನನಿಬಿಡ ರಸ್ತೆ ಬಸ್ ರಸ್ತೆಗೆ ತಾಗಿಕೊಂಡಂತಿರುವ ಶಂಕರಮಠದಲ್ಲಿ ಕಳ್ಳತನ ನಡೆದಿದೆ.
ಶಂಕರಮಠದ ನಡೆಯುವ ಕಳ್ಳತನ ಇಂದು ಬೆಳಿಗ್ಗೆ ಬೆಳಕಿಗೆ ಬಂದಿತ್ತು ಜನರನ್ನು ಭಯಭೀತರನ್ನಾಗಿಸಿದೆ.
ಯಾವಾಗಲೂ ರಸ್ತೆಯಲ್ಲಿ ವಾಹನ ಸಂಚಾರ ಇದ್ದರೂ ಕೂಡ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿಯಾಗಿದೆ.
ಮಠಕ್ಕೆ ನುಗ್ಗಿರುವ ಕಳ್ಳರು ಮಠದ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ.
ಕಳ್ಳತನಕ್ಕೂ ಮುನ್ನ ದೇವಸ್ಥಾನದ ಪಕ್ಕದಲ್ಲಿರುವ ಅರ್ಚಕರ ಮನೆಯ ಬಾಗಿಲಿಗೆ ಬೀಗ ಹಾಕಿರುವ ಕಳ್ಳರು ನಂತರ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಎಸಗಿ ಪರಾರಿಯಾಗಿದ್ದಾರೆ.
ಮುಂಜಾನೆ 5ಗಂಟೆಗೆ ಎಂದಿನಂತೆ ಬಾಗಿಲು ತೆರೆದು ಎದ್ದು ಅರ್ಚಕರು ನೋಡಿ ಮಠದ ವ್ಯವಸ್ಥಾಪಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಂತರ ಭದ್ರತಾ ಸಿಬ್ಬಂದಿ ಬಂದು ಅರ್ಚಕರ ಮನೆ ಬಾಗಿಲು ತೆಗೆದಿದ್ದಾರೆ.
ಆ ನಂತರ ದೇವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಎನ್ ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.
ಸಿದ್ದರಾಮೇಶ್ವರ ಬಡಾವಣೆ ಒಂದೇ ದಿನ 7ಮನೆಗಳ ಕಳ್ಳತನ ನಡೆದ ಬೆನ್ನಲ್ಲೇ ಈ ಘಟನೆ ನಗರದ ಜನರನ್ನು ಭಯಭೀತರನ್ನಾಗಿಸಿದೆ.