ಎಸ್. ತಾರಾನಾಥ್ ಭದ್ರಾವತಿ
ಕುಣಿಗಲ್: ನೂರು ಜನ ಒಂದೇ ಹಾದಿಯಲ್ಲಿ ಹೋಗುತ್ತಿದ್ದರೆ ಕಣ್ಣು ಮುಚ್ಚಿಕೊಂಡು ನಾವು ಅತ್ತ ಹೋಗುತ್ತೀವಿ. ಬದಲಿಗೆ ಬೇರೆ ದಾರಿ ತುಳಿಯಬೇಕು. ಆಗ ನಮಗೆ ಹೊಚ್ಚ ಹೊಸ ಅನುಭವ, ಸಾಹಸ, ರೋಮಾಂಚನ ಎಲ್ಲವೂ ಸಿಗುತ್ತವೆ. ಕುರುಡು ಅನುಕರಣೆ ನಮ್ಮನ್ನು ಬೆಳೆಸುವುದಿಲ್ಲ.
ಸುಮಾರು 28 ವರ್ಷಗಳ ಹಿಂದಿನ ಮಾತು. ಮೇ 20, 1991ರಂದು ತುಮಕೂರಿನ ಆಸ್ಪತ್ರೆಯ ಆವರಣದಲ್ಲಿ ಮಮತಾಮೂತರ್ಿರವರ ಹೃದಯ ಮಿಡಿತ ಅಂದು ತುಸು ಹೆಚ್ಚೇ ಇತ್ತು. ಜೊತೆಯಲ್ಲಿ ಅವರ ಸಂಬಂಧಿಕರೆಲ್ಲರಿಗೂ ಆತಂಕ. ಜೊತೆಗೆ ಕುತೂಹಲ.
ಇವರ ಆತಂಕ ಕಂಡು ಇನ್ನೂ ಮೂರ್ನಾಲ್ಕು ಹಿತೈಷಿಗಳ ಸೇರ್ಪಡೆ. ಆದರೆ ಅಕ್ಕ-ಪಕ್ಕದವರಿಗೆ ಯಾತಕ್ಕಾಗಿ ಈ ರೀತಿ ಇವರು ಚಪಡಿಸುತ್ತಿದ್ದಾರೆ ಎಂದು ಅರಿಯುವಷ್ಟರಲ್ಲಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಆಗ ತಾನೆ ಜನಿಸಿದ ಮಗುವಿನ ಅಳುವಿನ ಆರ್ಥನಾದ..! ಮೆಲ್ಲನೆ ಬಾಗಿಲ ಚಿಲಕ ತೆಗೆದ ನರ್ಸ್ ಗೆ ಮೂರ್ತಿಯವರು ಕುತೂಹಲ ತಡೆಯಲಾರದೆ ಏನಾಯ್ತು ಸಿಸ್ಟರ್? ಅಂತ ಕೇಳಿಯೇ ಬಿಟ್ಟರು.
ಹೋ.. ಮಮತಾ ರವರಿಗೆ ಗಂಡು ಮಗು ಜನನವಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ವಾಡರ್್ಗೆ ಶಿಫ್ಟ್ ಮಾಡುತ್ತೇವೆ ಎನ್ನುತ್ತ ಹೊರಟು ಹೋದರು. ಮೂತರ್ಿರವರ ಕಣ್ಣಲ್ಲಿ ಆನಂದ ಬಾಷ್ಪ ಜೊತೆಗೆ ಮಂದಹಾಸದ ಕಿರುನಗೆ. ಹೌದು..! ಅಂದು ಸಂಗೀತ ಕ್ಷೇತ್ರಕ್ಕೆ ಒಂದು ನಕ್ಷತ್ರ ಜನನವಾಗಿತ್ತು. ಆ ನಕ್ಷತ್ರವೇ ‘ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್’ ನ ಅಮಿತ್ ವಿಟ್ಠಲ್.
ಅಮಿತ್
ಪ್ರಾಮಾಣಿಕತೆ, ಶ್ರಮ, ಶ್ರದ್ಧೆ ಇವೆಲ್ಲವೂ ಇದ್ದರೆ ಯಾರೇ ಆಗಲಿ ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಯಶಸ್ಸುಗಳಿಸಬಹುದು ಎನ್ನುವುದಕ್ಕೆ ಅಮೀತ್ ವಿಟ್ಠಲ್ನೇ ಸಾಕ್ಷಿ. ತಾನು ಬಾಲ್ಯದಲ್ಲಿ ಓದಿದ ಕ್ಲಾರೆನ್ಸ್ ಇಂಗ್ಲೀಷ್ ಶಾಲೆಯಲ್ಲಾಗಲಿ, ತುಮಕೂರಿನ ವಾಸವಿ ವಿದ್ಯಾ ಪೀಠ ಶಾಲೆಯಲ್ಲಿ ಪ್ರೌಢಶಾಲೆಯಲ್ಲಾಗಲಿ ಓದಿನಲ್ಲಿ ಸದಾ ಪ್ರಥಮ ಶ್ರೇಣಿಯಲ್ಲಿರುತ್ತಿದ್ದ ಅಮಿತ್ ತನ್ನ ಓದಿನ ಜೊತೆ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳತೊಡಗಿದರು.
ಪ್ರಸ್ತುತ ಎಲೆಕ್ಟ್ರಿಕಲ್ ಡಿಪ್ಲಮೊ ಓದಿರುವ ಅಮೀತ್ ತನ್ನ ಸಂಗೀತ ಪಯಾಣವನ್ನು ಪ್ರಾರಂಭಿಸಿದ್ದು 2000ನೇ ಇಸವಿಯಲ್ಲಿ. ಶ್ರೀಯುತ ಪ್ರಸನ್ನ ಕುಮಾರ್ ಮತ್ತು ಶ್ರೀಮತಿ ವನಜಾಕ್ಷ್ಮಿ ರವರ ಬಳಿ ಸಂಗೀತಭ್ಯಾಸ ಮಾಡಿರುವ ಅಮಿತ್ ಕನರ್ಾಟಿಕ್ ಜ್ಯೂನಿಯರ್ ಮತ್ತು ಸೀನಿಯರ್ ನಲ್ಲಿ ಪಾಸಾಗಿದ್ದಾರೆ.
ಮುಳ್ಳುಗಳು ಒಂದೇ ಗಡಿಯಾರದೊಳಗಿದ್ದರೂ ಪರಸ್ಪರ ಜೊತೆ ಸೇರುವುದು ಆಗೊಮ್ಮೆ-ಈಗೊಮ್ಮೆ. ಅದೂ ಒಂದು ಕ್ಷಣ. ಹಾಗೆಂದು ಅವು ಒಂದಾಗದೆ ಕಾಲ ಸರಿಯುವುದಿಲ್ಲ. ಹಾಗೆಯೇ ಯಾವುದೇ ಒಂದು ಕ್ಷೇತ್ರದಲ್ಲಿ ಏನಾದರೂ ಒಂದು ಸಾಧಿಸಬೇಕೆಂದರೆ ಅದಕ್ಕೆ ಕಲಿಸುವ, ಪ್ರೋತ್ಸಾಯಿಸುವ, ತಪ್ಪಾದರೆ ತಿದ್ದಿ ಸರಿಪಡಿಸುವ ಗುರುಗಳು ಬೇಕೇ ಬೇಕು. ಗುರು ಹಾಗೂ ಶಿಷ್ಯ ಒಂದಾದರೆ ಮಾತ್ರ ಕಲಿಕೆಗೆ ಮಹತ್ವ ಬರುವುದು. ಈ ನಿಟ್ಟಿನಲ್ಲಿ ನಾದಬ್ರಹ್ಮ ಹಂಸಲೇಖರವರ ಬಳಿ ಶಿಷ್ಯನಾಗಿ ಅಮೀತ್ ಸೇರಿಕೊಂಡರು. ಹಂಸಲೇಖರವರು ಸಹ ಅಮೀತ್ಗೆ ಇರುವ ಸಂಗೀತಾಸಕ್ತಿಯನ್ನು ಗುರುತಿಸಿ ಸಂಗೀತ ಶಾಲೆಗೆ ಒಂದು ಸಾಧರಣ ಕಲ್ಲಿನಂತೆ ಸೇರಿಕೊಂಡ ಅಮೀತ್ನಲ್ಲಿ ಒಂದು ಶಿಲ್ಪಕಲೆಯಾಗಿ ರೂಪಿಸಿದರು. ಇಂದು ಅಮೀತ್ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧಿಸಿದ್ದರೆ ಅದರ ಯಶಸ್ವು ತನ್ನ ಗುರುಗಳಾದ ಪ್ರಸನ್ನ ಕುಮಾರ್, ಶ್ರೀಮತಿ ವನಜಲಕ್ಷ್ಮಿ ಹಾಗೂ ಹಂಸಲೇಖ ಸರ್.
ಪ್ರಯೋಜನಕ್ಕೆ ಬಾರದ ಕಾಗದ ಗಾಳಿಯೊಂದಿಗೆ ಹಾರಿ ಹೋಗುತ್ತದೆ. ಆದರೆ ಹಕ್ಕಿ ಇದೆಯಲ್ಲ… ಅದು ಗಾಳಿಯಲ್ಲಿ ಇರುವಾಗ ರಕ್ಕೆಯನ್ನು ಬಡಿಯಲೇಬೇಕು. ಅದು ತನ್ನ ಗುರಿಯನ್ನು ತಲುಪವವರೆಗೂ ಪ್ರಯತ್ನ ಪಡಲೇಬೇಕು. ಹಾಗಾಗಿ ಅಮಿತ್ ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂಗೀತದ ನಾನಾ ಪ್ರಕಾರಗಳಾದ ಗಾಯನ, ತಬಲ, ಗಿಟಾರ್, ವೀಣೆ, ಮ್ಯೂಸಿಕ್ ಕೀಬೋರ್ಡ್, ಡ್ರಂ ಇತರೆಗಳೆಲ್ಲವೂ ಕಲಿತಿರಬೇಕು. ಆಗ ಮಾತ್ರ ಪರಿಪೂರ್ಣ ಸಂಗೀತಗಾರನಾಗಲು ಸಾಧ್ಯ. ಹಾಗಾಗಿ ಅಮೀತ್ ಎಲ್ಲಾ ವಿಭಾಗಗಳನ್ನು ಕಲಿತಿದ್ದರೂ ಹೆಚ್ಚು ಒಲವು ಇದ್ದದ್ದು ಮಾತ್ರ ಗಿಟಾರ್ ಕಲಿಯುವುದರಲ್ಲಿ.
ಒಂದು ಹಕ್ಕಿ ತಾನು ಕುಳಿತಿದ್ದ ಮರದಿಂದ ಮತ್ತೊಂದು ಮರಕ್ಕೆ ಹಾರಿ ಹೋಗುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ ಅದು ಸುಮ್ಮ ಸುಮ್ಮನೆ ಹಾರುವುದಿಲ್ಲ. ಬೇರೊಂದು ಮರಕ್ಕೆ ಹಾರಿದಾಗ ಅದಕ್ಕೆ ಏನಾದರೂ ಸಿಗಲೇಬೇಕು. ಆಗ ಮಾತ್ರ ಅದು ಹಾರಿದ್ದಕ್ಕೆ ಸಾರ್ಥಕ. ಹಾಗೆಯೇ ಅಮೀತ್ ಗಿಟಾರ್ ನುಡಿಸುವುದರಲ್ಲಿ ಹೆಚ್ಚಿನದನ್ನು ಕಲಿತು ಏನಾದರೊಂದು ಸಾಧಿಸಬೇಕೆಂಬ ಹಂಬಲದಿಂದ ಪಕ್ಕದ ಚೆನ್ನೈಗೆ ಪ್ರಯಾಣ ಬೆಳೆಸಿ ಅಲ್ಲಿ ‘ಸ್ವರ್ಣಭೂಮಿ ಅಕಾಡೆಮಿ ಆಫ್ ಮ್ಯೂಸಿಕ್’ ನಲ್ಲಿ ಗಿಟಾರ್, ಕೀ ಬೋರ್ಡ್, ಡ್ರಂ ಮುಂತಾದ ಹಲವು ಪ್ರಕರಗಳಲ್ಲಿ ಸಂಗೀತಭ್ಯಾಸ ಮಾಡಿದರು.
ತಾನು 7ನೇ ತರಗತಿಯಲ್ಲಿ ಓದುತ್ತಿರುವಾಗಲೇ ‘ಅರಳು ಮಲ್ಲಿಗೆ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಅಮೀತ್ ವಿಟ್ಠಲ್ ಇದುವರೆಗೂ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಜನಮನ್ನಣೆ ಗಳಿಸಿದ್ದಾರೆ. ಜೊತೆಗೆ ಅನೇಕ ಆಕರ್ೆಸ್ಟ್ರಾಗಳಲ್ಲಿ ತನ್ನ ಗಾಯನದ ಜೊತೆ ಹಿನ್ನಲೆ ಸಂಗೀತವನ್ನು ನುಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
ಆಲೋಚನೆಗಳು ಎಲ್ಲಿಂದಲೋ ಹುಟ್ಟುವುದಿಲ್ಲ. ಅದರ ಸೃಷ್ಟಿಕರ್ತರು ನಾವೇ ಆಗಿರುತ್ತೇವೆ. ಈ ನಿಟ್ಟಿನಲ್ಲಿ ಅಮೀತ್ ವಿಟ್ಠಲ್ ಈಗ ತುಮಕೂರಿನಲ್ಲಿ ತಾವೇ ಸ್ವತ: ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯಲ್ಲಿ ಪ್ರಸ್ತುತ 120 ಕ್ಕಿಂತ ಹೆಚ್ಚು ಸಂಗೀತಾಸಕ್ತ ಮಕ್ಕಳಿಗೆ ಗಿಟಾರ್, ಕೀ ಬೋರ್ಡ್ ಮತ್ತು ಡ್ರಂ ಗಳ ಬಗ್ಗೆ ತರಬೇತಿಯನ್ನು ಕೊಡುತ್ತಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡಬೇಕು, ಸಂಗೀತವೇ ನನ್ನ ದೇವರು, ಉಸಿರು ಎಂಬ ಅಭಿಲಾಶೆ ಹೊಂದಿರುವ ತುಮಕೂರಿನ ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥಾಪಕ, ಉತ್ಸಾಹಿ ಯುವಕ ಅಮಿತ್ ವಿಟ್ಠಲ್ ಮತ್ತಷ್ಟು ಎತ್ತರಕ್ಕೆ ಬೆಳೆದ ಸಾಧನೆ ಮಾಡಲಿ. ಸಂಗೀತ ಕಲಿಯಲು ಇಚ್ಛಿಸುವವರು, ಶುಭಹಾರೈಸುವವರು ಅಮಿತ್ ವಿಟ್ಠಲ್ ಅವರನ್ನು 9916156616 ನಲ್ಲಿ ಸಂಪರ್ಕಿಸಬಹುದು.
👍👍