Publicstory. in
ತುರುವೇಕೆರೆ: ತಾಲ್ಲೂಕಿನ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27ರಂದು ನಡೆಯಲಿದೆಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದರು.
ತಾಲ್ಲೂಕಿನ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು 178 ಮೂಲ ಮತಗಟ್ಟೆಗಳು ಹಾಗು ಹೆಚ್ಚುವರಿಯಾಗಿ 22 ಸೇರಿ ಒಟ್ಟು 200 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆಗೆ ಸ್ಪರ್ಧಿಸಬಯಸುವವರು ಡಿ.11ರಿಂದ 16ರವರೆಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ತೆರೆದಿರುವ ಚುನಾವಣಾ ಕಚೇರಿಯಲ್ಲೇ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು.
ನಾಮ ಪತ್ರ ಸಲ್ಲಿಸುವ ಅಭ್ಯರ್ಥಿ ಕೋವಿಡ್ ಮಾರ್ಗಸೂಚಿಯಂತೆ ತನ್ನ ಜೊತೆ ಒಬ್ಬ ಸೂಚಕ ಮಾತ್ರ ಚುನವಣಾಧಿಕಾರಿಗಳ ಕಚೇರಿಗೆ ಪ್ರವೇಶಿಸತಕ್ಕದ್ದು. ಹಾಗು ಕೋವಿಡ್ ಸೋಂಕಿತ ಅಭ್ಯರ್ಥಿ ತಾನು ನಾಮಪತ್ರ ಸಲ್ಲಿಸಲು ಇಚ್ಛಿಸಿದಲ್ಲಿ ಆತನು ಅವನ ಸೂಚಕನ ಮೂಲಕ ನಾಮಪತ್ರ ಸಲ್ಲಿಸಬಹುದು.
ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ಸುತ್ತಳತೆಯಲ್ಲಿ 5 ಜನಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಡಿ.17ರಂದು ಆಯಾ ಗ್ರಾಮ ಪಂಚಾಯಿತಿ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ನಡೆಸಲಾಗುವುದು.
ನಾಮ ಪತ್ರ ಹಿಂಪಡೆಯಲು ಡಿ.19 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ 5 ಜನ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರದೊಂದಿಗೆ ಮನೆಮನೆ ಭೇಟಿ ನೀಡಿ ಪ್ರಚಾರ ನಡೆಸಬಹುದು.
ಚುನಾವಣೆಗೆ ಸ್ಪರ್ಧಿಸಲು ಬೇಕಾದ ಬಿಸಿಎ ಮತ್ತು ಬಿಸಿಬಿ ದೃಢೀಕರಣ ಪತ್ರವನ್ನು ತಾಲ್ಲೂಕು ಕಚೇರಿಯಿಂದ ಪಡೆಯತಕ್ಕದ್ದು. ಹಾಗು ಬೇಬಾಕಿ ಮತ್ತು ಗುತ್ತಿಗೆದಾರದಲ್ಲದಿರುವ ದೃಢೀಕರಣ ಪತ್ರವನ್ನು ಪಿಡಿಒ ಅವರಿಂದ ಪಡೆಯಕ್ಕದ್ದು. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08139287325 ಸಂಪರ್ಕಿಸಿ ಎಂದಿದ್ದಾರೆ.