ತುಮಕೂರು ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯಿಂದ ಧನ್ವಂತರಿ ಜಯಂತಿ ಹಾಗೂ 4ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅಲೋಪತಿ ಚಿಕಿತ್ಸಾ ಪದ್ದತಿಯಿಂದ ಆಗುವ ಅಡ್ಡಪರಿಣಾಮ ಅರಿತು ಜನರು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ಆಯುರ್ವೇದ ಪದ್ದತಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಭಾರತದಲ್ಲಿ ಅನಾದಿ ಕಾಲದಿಂದಲೂ ಧನ್ವಂತರಿ ಚಿಕಿತ್ಸೆ ಅನುಸರಿಸುತ್ತಿದ್ದೇವೆ. ಬೇರೆ ದೇಶಗಳಲ್ಲಿ ಕೂಡ ಆಯುರ್ವೇದ ಪದ್ದತಿ ಅನುಸರಿಸಲಾಗುತ್ತಿದೆ. ಇದೊಂದು ಉತ್ತಮ ಪದ್ದತಿಯಾಗಿದ್ದು, ಆಯುರ್ವೇದ ಅಭ್ಯಾಸ ಮಾಡುವವರು ಅದರ ಬಗ್ಗೆ ಅರಿವು ಮೂಡಿಸಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ, ಆಯುರ್ವೇದ ನಮ್ಮ ದೇಶದ ಚಿಕಿತ್ಸಾ ಪದ್ದತಿಯಾಗಿದೆ. ‘ದೀರ್ಘಾಯುಕ್ಕಾಗಿ ಆಯುರ್ವೇದ’ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಹೀಗಾಗಿ ಇದನ್ನು ಪ್ರಚುರಪಡಿಸಬೇಕು ಇತ್ತೀಚೆಗೆ ಅಕಾಲಿಕ ಮರಣ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಆರ್ಯುವೇದ ಪದ್ದತಿ ಅನುಸರಿಸಬೇಕು. ದೀರ್ಘಾಯುಷಿಗಳಾಗಬೇಕು ಎಂದರು.