Publicstory. in
Nelamangala: ಲಾಕ್ ಡೌನ್ ಕಾರಣ ಪಡಿತರದ ಮೂಲಕ ಸರ್ಕಾರ ಕೊಡುವ ಹತ್ತು ಕೆಜಿ ಅಕ್ಕಿ ಏನೇನು ಸಾಲದು ಎಂದು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದ ನೆಲಮಂಗಲದ ಸುತ್ತಮುತ್ತಲ ಗ್ರಾಮಗಳ ಕುಟುಂಬಗಳಿಗೆ ಸಹಾಯ ಹಸ್ತವೊಂದು ಚಾಚಿದೆ.
ಭವಾನಿಶಂಕರ್ ಗ್ರೂಪ್ ನ ಎಚ್ ಬಿ ಮಂಜುನಾಥ್ ಅವರೇ ಈ ಸಹಾಯ ಹಸ್ತ ಚಾಚಿರುವರು.
ತಾಲೂಕು ಹಂಚೀಪುರದಲ್ಲಿ ಮತ್ತು ಸುತ್ತಮುತ್ತ ಗ್ರಾಮಗಳಿಗೆ ಭವಾನಿಶಂಕರ್ ಗ್ರೂಪ್ ವತಿಯಿಂದ ಎರಡು ಸಾವಿರದ ಐನೂರು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಕೆಲಸ ಸದ್ದಿಲ್ಲದೆ ಸಾಗಿದೆ.ಸರ್ಕಾರ ಎರಡು ತಿಂಗಳಿಗೆ ಹತ್ತು ಕೆಜಿ ಅಕ್ಕಿ ನೀಡಿದರೆ, ಬಿಜೆಪಿ ಮುಖಂಡರಾದ ಎಚ್ ಬಿ ಮಂಜುನಾಥ್ ಸರ್ಕಾರದ ಅಕ್ಕಿ ಜತೆಗೆ 25 ಕೆಜಿ ಅಕ್ಕಿ ಜತೆಗೆ ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ.
ಇದನ್ನು ಓದಿ: /ಒಂದೇ-ದಿನ-5-ಟನ್-ತರಕಾರಿ-3-ಟನ್- ಬಾಳೆಹಣ್ಣು ವಿತರಣೆ
ಯಂಟಗಾನಹಳ್ಳಿ, ಸೋಲದೇವನಹಳ್ಳಿ, ಹಂಚೀಪುರ ಕೃಷ್ಣಾನಗರ ಕರೇಕಲ್ ಪಾಳ್ಯದ ಸುತ್ತಮುತ್ತಲ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸುಮಾರು ಅಂದರೆ ಎರಡು ಸಾವಿರದ ಐನೂರು ಕುಟುಂಬಗಳಿಗೆ ಆಹಾರ ಸಾಮಗ್ರಿ ಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಭೈರೇಗೌಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಅನ್ನದಾನಯ್ಯ ಗ್ರಾಪಂ ಸದಸ್ಯ ರಾಹುಲ್ ಗೌಡ, ವಿಜಯ್ ಕುಮಾರ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಣ್ಣ ಇತರರು ಇದ್ದರು.
ಕಷ್ಟ ಕಾಲದಲ್ಲಿ ನೂರಾರು ಜನರಿಗೆ ನೆರವಿನ ಹಸ್ತ ಚಾಚಿರುವ ಮಂಜುನಾಥ ಅವರ ಕ್ರಮಕ್ಕೆ ಈ ಭಾಗದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.