Friday, November 22, 2024
Google search engine
Homeಜನಮನಪರಿಸರ ಎಂದಾ‌ಗ ಏನ್ನೆಲ್ಲ ನೆನಪಿಗೆ ಬರುತ್ತದೆ...

ಪರಿಸರ ಎಂದಾ‌ಗ ಏನ್ನೆಲ್ಲ ನೆನಪಿಗೆ ಬರುತ್ತದೆ…

ಅಕ್ಷತಾ ಕೆ. ಉಪನ್ಯಾಸಕಿ


ಆರೋಗ್ಯವಂತ ಸ್ವಾಸ್ಥ್ಯ ಸಮಾಜವು ಪರಿಸರದ ಒಂದು ಭಾಗವೇ.

ನಿರ್ಮಲ ಪರಿಸರದಿಂದ ನಮ್ಮ ಬದುಕು ಉಜ್ವಲ .
‘ಪರಿಸರ ‘ಎಂದಾಗ ನಮ್ಮ ಸುತ್ತಮುತ್ತಲಿನ ವಾತಾವರಣ ಚರಾಚರಗಳು, ನಿಸರ್ಗ ಒಳಗೊಳ್ಳುವ ಎಲ್ಲವು ಸೇರುತ್ತವೆ .
ಅದು ಸುಂದರವಾದಾಗ ಶುದ್ದವಾಗಿದ್ದಗ,ಸಂಮೃದ್ದ ಮರ ಗಿಡಗಳು ಮಳೆ ಬೆಳೆಗಳಿಂದ ನಮ್ಮ ಬದುಕೂ ಸೊಂಪಾಗಿರುತ್ತದೆ.

ಪರಿಸರದ ಜೊತೆ ಮಾನವನ ಬದುಕಿನ ಒಡನಾಟ ನಿರಂತರವಾದದು. ನಿಸರ್ಗವಿಲ್ಲದೆ ಮಾನವನ ಉಳಿವು ಅಸಾಧ್ಯ .

ಈ ಸತ್ಯವನ್ನು ಅರಿತಿದ್ದರು ನಾವುಪರಿಸರ ಸಂರಕ್ಷಣೆಯ ಬಗ್ಗೆ ಆಲೋಚಿಸದೆ ಈಗಾಗಲೆ ಮೇರೆ ಮೀರಿ ಮಲಿನವಾಗಿರುವ ಪ್ರಕೃತಿಯನ್ನು ಮತ್ತು ಮತ್ತು ಮಲಿನಗೊಳಿಸುತ್ತಾ ಸಾಗುತ್ತಿದ್ದೇವೇ ಹೊರತು ಈ ಬಗ್ಗೆ ಗಂಬೀರವಾಗಿ ಪ್ರತಿ ಪ್ರಜೆಯು ಜಾಗೃತವಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿಲ್ಲ,

ನಿರ್ಮಲ ವಾತಾವರಣ ಸೃಷ್ಟಿಗೆ ಅವಶ್ಯಕವಾದ ಮರ ಗಿಡಗಳನ್ನು ಬೆಳೆಸುವ ಮತ್ತು ಆಹಾರ ಸರಪಳಿ ಸಂರಕ್ಷಿಸುವ ಜವಬ್ದಾರಿ ನಮ್ಮ ಮೇಲಿದೆ.

ಭೂತಾಯಿಯ ಮುಡಿಯ ಹಸಿರ ಸಿರಿಯಲ್ಲಿ ಬೀಜದ ಪಾತ್ರ ಮಹತ್ತರವಾದದ್ದು, ನಾವು ನಿತ್ಯ ಜೀವನದಲ್ಲಿ ಆಹಾರವಾಗಿ ಬಳಸುವ ಹಲವು ರೀತಿಯ ಹಣ್ಣು ಹಂಪಲುಗಳ, ತರಕಾರಿಗಳ ಬೀಜಗಳ ಕಡೆಗೆ ನಮ್ಮ ಗಮನ ಹರಿಸುವುದಿಲ್ಲ ಅವುಗಳನ್ನು ತಾತ್ಸಾರವಾಗಿ ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ .ಆದರೆ ಅದು ಸಣ್ಣ ಬೀಜ ನಮ್ಮ ಮನೆಯ ಮುಂದೆ ಒಂದು ವೃಕ್ಷವನ್ನೋ, ಒಂದು ಸಣ್ಣ ಬಳ್ಳಿಯನ್ನೋ ಹಬ್ಬಿಸಿ ಪರಿಸರ ರಕ್ಷಣೆಗೂ, ಆರೋಗ್ಯಕ್ಕೂ ತನ್ನ ಕೊಡುಗೆ ನೀಡುತ್ತದೆ ಎಂಬುದನ್ನು ನಾವು ಗಮನಿಸುವುದೆ ಇಲ್ಲ.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯಂಗಳದಲ್ಲಿ ಮರ ಗಿಡ ಕೈದೋಟಗಳಿರುತ್ತವೆ. ನಗರ ಪ್ರದೇಶಗಳಲ್ಲಿ ಮರ ಗಿಡಗಳ ಅವಶ್ಯ ಕತೆ ಇರುವ ಪ್ರದೇಶಗಳಲ್ಲಿ ಅಪಾರ್ಟಮೆಂಟ್ ಗಳಂತಹ ಸ್ಥಳಗಳಲ್ಲಿಯೂ ಸಹ ತಮ್ಮ ಮಿತಿಯಲ್ಲಿ ಸಣ್ಣ ಪುಟ್ಟ ಗಿಡ ಬಳ್ಳಿಗಳನ್ನು ಹಬ್ಬಿಸಬಹುದು.

ಎಲ್ಲವೂ ನಮ್ಮ ಮನಸ್ಸಿಗೆ ಬಿಟ್ಟಿದ್ದು ‘ಮನಸ್ಸಿದ್ದರೆ ಮಾರ್ಗ’ ಎಂಬಂತೆ ಪ್ರಕೃತಿ ಸೌಂದರ್ಯ ಸವಿಯುವ ಮನಸ್ಸಿರುವ, ಪರಿಸರ ಸಂರಕ್ಷಣೆಯ ಅರಿವಿರುವ ಸಹೃದಯರಿಗೆ ಇದು ಖಂಡಿತ ಸಾಧ್ಯ.

ನಾವು ಎಂದೋ ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ಆಚರಿಸುತ್ತಾ ಗಿಡಗಳನ್ನು ನೆಡುತ್ತಾ ಜಾಗೃತಿ ಶಿಬಿರಗಳನ್ನು ನೆಡೆಸಿ, ಆ ದಿನದ ನಂತರ ನಮ್ಮ ಜವಾಬ್ದಾರಿಯನ್ನು ಮರೆತು ಮತ್ತೆ ಮತ್ತೆ ಪರಿಸರವನ್ನು ಹಲವಾರು ರೀತಿಯಲ್ಲಿ ಮಲಿನಗೊಳಿಸುತ್ತಿರುತ್ತೇವೆ.

ಪರಿಸರ ಮಾಲಿನ್ಯ ಕಡಿಮೆಯಾಗಿ ಅದು ಸಮತೋಲನ ಸ್ಥಿತಿ ತಲುಪಬೇಕಾದರೆ ವಾತಾವರಣದಲ್ಲಿ ಹೇರಳವಾಗಿ ಮರ ಗಿಡಗಳನ್ನು ಬೆಳೆಸಬೇಕಾದ ಕರ್ತವ್ಯ ಜವಾಬ್ದಾರಿ ನಮ್ಮದು.

ಪ್ರತಿ ದಿನವು ಪರಿಸರ ದಿನವೆಂದು ಭಾವಿಸಿದಾಗ ಮಾತ್ರ ಈ ಕಾರ್ಯ ಸಾದ್ಯ. ನಾವು ಪ್ರತಿನಿತ್ಯ ಬಳಸಿ ಎಸೆವ ಬೀಜಗಳನ್ನ ಬಳಸಿ ನಮ್ಮ ಮನೆಯಂಗಳದಲ್ಲಿ ಕೈದೋಟ ಮಾಡುವುದು, ನಮ್ಮ ಆಪ್ತ ಸಮಾರಂಭಗಳಲ್ಲಿ ಉತ್ತಮ ಗಿಡಗಳು ಮತ್ತು ಬೀಜಗಳನ್ನು ಉಡುಗೊರೆಯಾಗಿ ನೀಡುವ ಹವ್ಯಾಸವನ್ನು ಬೆಳೆಸಿಕೊಂಡರೆ ಪರಿಸರ ಸಮತೋಲನ ಕಾಪಾಡುವಲ್ಲಿ ನಮ್ಮದು ಒಂದು ಅಳಿಲು ಸೇವೆಯಾಗುತ್ತದೆ.

ಆಧುನಿಕತೆಯ ಪರಿಣಾಮದಿಂದಾಗಿ ಅಂತರ್ಜಲ ಕುಗ್ಗಿ, ಕಾಡು ನಶಿಸಿ ಮಳೆ ಇಲ್ಲದೆ ಬೆಳೆ ಬಾರದೆ ರೈತ ಕಂಗಾಲಾಗಿರುವ ಜೊತೆಗೆ ಬರ ಹೆಚ್ಚಿ ಕುಡಿಯುವ ನೀರಿಗೂ ಆಹಾಕಾರವಿರುವ ಸ್ಥಿತಿ ನಮ್ಮದಾಗಿರುವಾಗ ಜಲ ಸಂರಕ್ಷಣೆಗೆ ಹಲವು ಮಾರ್ಗಗಳನ್ನು ಹುಡುಕಿ ಕೊಳ್ಳಬೇಕಾದದು ನಮ್ಮ ಆದ್ಯ ಕರ್ತವ್ಯ.

ಮಳೆ ನೀರಿನ ಶೇಖರಣೆ, ಸಂರಕ್ಷಣೆ ಶುದ್ದೀಕರಣದ ಜೊತೆಗೆ ಅಂತರ್ಜಲ ಹೆಚ್ಚಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿರುವ ಬೆನ್ನಲೇ ನಾವೆಲ್ಲ ಆಲೋಚಿಸಬೇಕಾದ್ದು ನಾವು ನಿತ್ಯ ಬಳಸುವ ,ಮನೆಗಳಲ್ಲಿ ಪೋಲು ಮಾಡುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ಮಿತವಾಗಿ ಸದ್ಬಳಕೆ ಮಾಡಿಕೊಳ್ಳುವುದು ಒಳಿತು.

ಶರ ವೇಗದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಅತ್ಯವಶ್ಯಕವಾಗಿ ಕೈಗೊಳ್ಳಬೇಕಾದ ಕೆಲವು ಕ್ರಮಗಳೆಂದರೆ ಪ್ಲಾಸ್ಟಿಕ್ ನಿಷೇದ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಮನುಷ್ಯನ ನರನಾಡಿಗಳಲ್ಲಿ ರಕ್ತದ ಕಣ ಕಣಗಳಂತೆ ಇಂದು ಪ್ಲಾಸ್ಟಕ್ ಸೇರ್ಪಡೆಯಾಗುತ್ತಿದೆ.

ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರು ಇದರ ಹಾವಳಿ ನಿಂತಿಲ್ಲ .ಇದಕ್ಕೆ ಪ್ರಭುತ್ವಗಳನ್ನು ದೂರದೆ ಪ್ರತಿಯೊಬ್ಬ ಪ್ರಜೆಯು ಸ್ವ ವಿವೇಚನೆಯಿಂದ ತನ್ನ ಆರೋಗ್ಯ ಮತ್ತು ಭವಿಷ್ಯತ್ತಿನ ಪೀಳಿಗೆಗೆ ಬಳುವಳಿಯಾಗಿ ನಾವು ನೀಡುವ ಪರಿಸರದ ಸ್ಥಿತಿಯನ್ನು ಅರಿತು ಸಂರಕ್ಷಣೆ ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಅತೀ ಲೋಭಕ್ಕೆ ದುರಾಸೆಗೆ ಒಳಗಾಗಿ ಮಾನವೀಯತೆ, ಮಾನವ ಸಂಬಂಧಗಳನ್ನು ಮರೆತಿರುವ ಮಾನವ ಹಣಕ್ಕಾಗಿಯೇ ಎಲ್ಲವನ್ನೂ ವ್ಯಾಪರೀಕರಣಗೊಳಿಸ ಹೊರಟಿದ್ದಾನೆ.

ಆತನೇ ತಿನ್ನುವ ಆಹಾರದಲ್ಲೂ ಕಲಬೆರಕೆ ಮಾಡ ಹೊರಟು ಇತ್ತೀಚೆಗೆ ಮೇರೆ ಮೀರುತ್ತಿದೆ . ಹಣ್ಣುಗಳನ್ನು ರಾಸಾಯನಿಕ ಗೊಬ್ಬರಗಳಿಂದ ಬೆಳೆಸುವ ಜೊತೆಗೆ ಕೀಟ ನಾಶಕಗಳನ್ನು ಅತಿಯಾಗಿ ಸಿಂಪಡಿಸುವುದಲ್ಲದೇ ,ಅವು ಹಣ್ಣಾಗುವ ಮುನ್ನವೆ ಕಿತ್ತು ರಾಸಾಯನಿಕಗಳಿಂದ ಹಣ್ಣಾಗಿಸಿ, ಸಂರಕ್ಷಿಸಲು ಎಲ್ಲಾರೀತಿಯಿಂದಲು ಶರೀರಕ್ಕೆ ರಾಸಾಯನಿಕಗಳನ್ನು ಸೇರಿಸುತ್ತಿರುವ ಜೊತೆಗೆ ,ಅವನ ಅತಿಯಾದ ಹಣದಾಹ ಯಾವ ಮಟ್ಟ ತಲುಪಿದೆ ಎಂದರೆ ‘ಅನ್ನದಾನ ಶ್ರೇಷ್ಠದಾನ ‘ಎಂಬ ನಂಬಿಕೆಗೆ ಮಣ್ಣೆರಚಿ ತಿನ್ನುವ ಅಕ್ಕಿಗೂ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸುವುದು ಎಂಥ ನೀಚತನ.

ಹೀಗೆ ಹಣಕ್ಕಾಗಿ ಮನುಷ್ಯ ಮಾಡುತ್ತಿರುವ ಹೀನ ಕೃತ್ಯಗಳಿಂದ ಜನತೆ ಅನೇಕ ವ್ಯಾಧಿಗಳಿಗೆ ಸಂಘರ್ಷಕ್ಕೆ ಅಸಹಿಷ್ಣತೆಗೆ ಈಡಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾನವ ತಾನೆ ತೋಡಿದ ಮೃತ್ಯು ಕೂಪದಲ್ಲಿ ತಾನೇ ಬಿದ್ದು ಸಾಯುವ ಸ್ಥಿತಿ ತದ್ದೊಡ್ಡಿಕೊಳ್ಳುತ್ತಿದ್ದಾನೆ .

ನಿಸರ್ಗ ದತ್ತವಾಗಿ ದೊರೆಯುವುದನ್ನು ಕೃತಕಗೊಳಿಸಲು ಹೋದರೆ ನಷ್ಟ ನಮಗೇ .ಆರೊಗ್ಯವಂತ ಸ್ವಾಸ್ತ್ಯ ಸಮಾಜವು ಸಹ ಪರಿಸರದ ಭಾಗವೇ ಆಗಿರುವುದರಿಂದ ಮೊದಲು ಸಮಾಜದಲ್ಲಿ ಮಾನವನಲ್ಲಿ ಸ್ವಾಸ್ಥ್ಯ ಉಂಟಾದರೆ ಪರಿಸರ ತನಗೆ ತಾನೇ ಶುದ್ಧಗೊಳ್ಳುತ್ತದೆ.

ತನ್ನೊಳಗೆ ಶಾಂತಿಯನ್ನು ಸ್ವಚ್ಛತೆಯನ್ನು ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಮಾನವನಿಗೆ ಬಂದಾಗ ಪರಿಸರವನ್ನು ಆತ ಸಂರಕ್ಷಿಸ ಬಲ್ಲ. ಗಂಬೀರವಾಗಿ ಆಲೋಚಿಸಿ ಜಾಗೃತವಾಗಿ ನಮ್ಮ ಪರಿಸರವನ್ನು ಜೊತೆಗೆ ನಮ್ಮ ಜೀವನವನ್ನು ಸಂರಕ್ಷಿಸಬೇಕಾದ, ಸುಂದರಗೊಳಿಸಬೇಕಾದ ಅವಶ್ಯಕತೆ ಅನಿವಾರ್ಯತೆ ತುರ್ತಾಗಿದೆ.

ಇಲ್ಲವಾದಲ್ಲಿ ಪ್ರಕೃತಿ ವಿಕೋಪಕ್ಕೆ ಮಾನವ ಬಲಿಯಾಗಬೇಕಾಗುತ್ತದೆ. ಕೊರೋನದಂತಹ ರೋಗಗಳನ್ನು ,ಹವಾಮಾನದ ವೈಪರಿತ್ಯಗಳನ್ನು, ಭೂಕಂಪ, ಜ್ವಾಲಾಮುಖಿ, ಜಾಗತಿಕ ತಾಪಮಾನ ವನ್ಯಜೀವಿಗಳ ಬಿಕ್ಕಟ್ಟು ಜಲಕ್ಷಾಮದೊಂದಿಗೆ ಮಾನವ ಕ್ರೌರ್ಯದ ಸಾಮಾಜಿಕ ಸಂಘರ್ಷಗಳನ್ನು ಎದುರುಗೊಳ್ಳಬೇಕಾಗುತ್ತದೆ ಎಚ್ಚರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?