ಪಾವಗಡ: ಶಾಂತಿ, ಸೌಹಾರ್ಧಯುತವಾಗಿ ಮನೆಗಳಲ್ಲಿಯೇ ರಂಜಾನ್ ಆಚರಿಸಬೇಕು ಎಂದು ಪುರಸಭೆ ಸದಸ್ಯ ಎಂಎಜಿ ಇಮ್ರಾನ್ ಕರೆ ನೀಡಿದರು.
ಪಟ್ಟಣದ ಶಾದಿ ಮಹಲ್ ನಲ್ಲಿ ಮಂಗಳವಾರ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ದಾನಿಗಳ ಸಹಕಾರದೊಂದಿಗೆ ಜಾಮಿಯಾ ಮಸೀದಿಯಲ್ಲಿ 750 ಮಂದಿಗೆ ಪಡಿತರ ಕಿಟ್ ಗಳನ್ನು ವಿತರಿಸಲಾಗುತ್ತಿದೆ.
ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರ, ಅಧಿಕಾರಿಗಳ ಸೂಚನೆಯನ್ನು ಪಾಲಿಸಬೆಕು ಎಂದು ಕರೆ ನೀಡಿದರು.
ಆರೋಗ್ಯ. ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿಯ ಶ್ರಮದಿಂದಾಗಿ ತಾಲ್ಲೂಕು ಕೊರೊನಾ ಮುಕ್ತವಾಗಿದೆ. ಜನತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ತಹಶೀಲ್ದಾರ್ ವರದರಾಜು, ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ, ಸಬ್ ಇನ್ಸ್ ಪೆಕ್ಟರ್ ನಾಗರಾಜು, ಜಾಮಿಯಾ ಮಸೀದಿ ಅಧ್ಯಕ್ಷ ಮೊಹಮದ್ ಫಜ್ಲುಲ್ಲಾ, ಮುಖಂಡ ಜಹೂರ್ ಅಹಮದ್, ಲತೀಫ್, ರಫೀಕ್, ಜಾವಿದ್, ನೌ ಜವಾನ್ ಕಮಿಟಿ ಅಧ್ಯಕ್ಷ ರಿಯಾಜ್, ಸಿಖಂದರ್, ಷಫಿ, ಮನ್ನು, ಆರ್ ಟಿ ಖಾನ್ ಇದ್ದರು.