Thursday, November 21, 2024
Google search engine
Homeಜನಮನಬಡಪಾಯಿ ಮಿತ್ರನನ್ನು ಒಂದು ಗಂಟೆ ಕಾಲ ಅರಣ್ಯ ಸಚಿವರನ್ನಾಗಿ ಮಾಡಿದ್ದ ಚನ್ನಿಗಪ್ಪ!

ಬಡಪಾಯಿ ಮಿತ್ರನನ್ನು ಒಂದು ಗಂಟೆ ಕಾಲ ಅರಣ್ಯ ಸಚಿವರನ್ನಾಗಿ ಮಾಡಿದ್ದ ಚನ್ನಿಗಪ್ಪ!

ಗರಗದೊಡ್ಡಿ ನಟರಾಜ್


ತುಮಕೂರು: ನೆನಪುಗಳು ಉಮ್ಮಳಿಸಿದಾಗ.. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದಾಗ ಮಾಜಿ ಶಾಸಕ ಸಿ.ಚೆನ್ನಿಗಪ್ಪ ಅವರ ನಿಧನದ ವಾರ್ತೆ ನೋಡಿದೆ.

ಬಹುಶಃ ನಾನು ನಂಬೋಕೆ ಆಗಲಿಲ್ಲ. ಯಾಕೆಂದರೆ ನಾನು ಒಬ್ಬ ಪತ್ರಕರ್ತನಾಗಿ ಸುಮಾರು 25 ವರ್ಷ ಅವರ ಒಡನಾಡಿಯಾಗಿದ್ದವನು.ಅವರ ಬದುಕಿನ ನರ ನಾಡಿಮಿಡಿತವನ್ನು ನಾನು ಬಲ್ಲೆ.

ರಾಜಕೀಯವನ್ನು ಹೊರತು ಪಡಿಸಿದರೆ ಇವರು ಮಹಾನ್ ಸಾಧಕರು. ಸಾಧಿತ ವ್ಯಕ್ತಿಗಳು ಸತ್ತರೆ ಅವರು ಇತಿಹಾಸದಲ್ಲಿ ಅಮರ ರಾಗುತ್ತಾರೆ. ಅಂತಹ ವ್ಯಕ್ತಿತ್ವ ಚೆನಿಗಪ್ಪ ಅವರದ್ದು. ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಂತೆ ವರ್ಣರಂಜಿತ ಬದುಕನ್ನು ನಡೆಸಿದ ಧೀರೋದ್ದಾತ..

ಆ ಮನುಷ್ಯ ಬದುಕನ್ನು ಕಟ್ಟಿ ಕೊಂಡ ಪರಿ, ರಾಜಕೀಯ ಜಂಜಾಟದಲ್ಲಿ ಹೋರಾಟದ ಪರಿಯನ್ನು ನೋಡಿದರೆ ಬಹುಶಃ ಇಂದಿನ ಯಾವ ರಾಜಕಾರಣಿಗಳು ಕೂಡ ಆ ರೀತಿಯ ಬದುಕನ್ನು ನಡೆಸಲು ಸಾಧ್ಯವೇ ಇಲ್ಲ.

ಸಾಮಾಜಿಕ ವ್ಯವಸ್ಥೆಯಲ್ಲಿ ಅವರ ಬದುಕನ್ನು ಗಮನಿಸಿದ್ರೆ ಅವರ ಮನೋಧರ್ಮವನ್ನು ಎಂತಾ ಶತ್ರುಗಳು ಕೂಡ ಹಾಡಿಹೋಗಳುತ್ತಿದ್ದರು. ಹಾಗೆಯೇ ಭಯದಿಂದ ಒಳಗೊಳಗೇ ಬೇಯುತ್ತಿದ್ದರು.

ನೋಂದವರು ಮನೆ ಬಾಗಿಲಿಗೆ ಹೋದರೆ ಅವರಿಗೆ ಮೊದಲು ಊಟದ ವ್ಯವಸ್ಥೆ. ಅನಂತರ ಸಮಸ್ಯೆ ಪರಿಹಾರ, ತದನಂತರ ಬಸ್ಸು ಚಾರ್ಜ್ ಗೆ ಹಣ ನೀಡುತ್ತಿದ್ದ ಧರ್ಮಿಷ್ಠ.. ನನ್ನ ಅವರ ಒಡನಾಟದಲ್ಲಿ ಬರೀ ತುಂಟಾಟಗಳೇ ಜಾಸ್ತಿ. ನನ್ನನ್ನು ಯಾವಾಗಲೂ ಜಂಗ್ಲಿ ಎಂದೇ ಕರೆಯುತ್ತಿದ್ದರು.

ಒಮ್ಮೆ ಅವರು ಅರಣ್ಯ ಸಚಿವರಾಗಿದ್ದಾಗ ನನ್ನ ಪಕ್ಕದೂರಿಗೆ ಸಸಿ ನೆಡಲು ಬಂದ್ದಿದ್ದರು.. ಊಟದ ವೇಳೆಗೆ ನಾನು ಜಂಗ್ಲಿ ಮನೆಗೆ ಹೋಗಬೇಕು ನಡಿ ರಲೇ..ಎಂದಿದ್ದಾರೆ. ಆಗ ಸೆಕ್ಯೂರಿಟಿ ಗಳು ಗೊತ್ತಾಗದೆ ತಬ್ಬಿಬ್ಬಿಬ್ಬು ಆಗಿದ್ದಾರೆ. ಅವರು ಸುಮ್ಮನೆ ನಿಂತಿದ್ದನ್ನು ನೋಡಿ ಎಲ್ಲರನ್ನು ಗದರಿಸಿ ಜಂಗ್ಲಿ ಯಾರು ಅಂತಾ ಗೊತ್ತಿಲ್ಲದ ಮೇಲೆ ನೀವ್ಯಾರೂ ಕೆಲಸಕ್ಕೆ ಲಾಯಕ್ ಅಲ್ಲ ಎಂದು ಅಬ್ಬರಿಸಿದ್ದಾರೆ. ಈ ಪರಿಯಾಗಿ ಅವರು ನನ್ನನ್ನು ಪ್ರೀತಿಸುತ್ತಿದ್ದರು..

ಇದೇ ಸಮಯದಲ್ಲಿ ಇನ್ನೊಂದು ಘಟನೆ ನಿಮ್ಮ ಮುಂದೆ ಹೇಳ್ತೇನೆ. ಒಮ್ಮೆ ವಿಧಾನಸೌಧಕ್ಕೆ ಹೋಗಿದ್ದೆ. ಅವರ ಭೇಟಿ ಸಮಯದಲ್ಲಿ ನೀವು ಸಚಿವರಾಗಿದ್ದೀರಿ, ಇದು ನನ್ನಂತ ಬಡಪಾಯಿಗೆ ಸಾಧ್ಯವೇ ಎಂದು ಕಿಚಾಯಿಸಿದೆ. ಆ ತಕ್ಷಣ ಅವರು ಒಂದು ಘಂಟೆ ಕಾಲ ನನ್ನನ್ನು ಸಚಿವರನ್ನಾಗಿ ಮಾಡಿ ಅರ್ಧ ಬೆಂಗಳೂರನ್ನು ಝೀರೋ ಟ್ರಾಫಿಕ್ ಮಾಡಿ ಸೆಕ್ಯೂರಿಟಿ ಯೊಂದಿಗೆ ಅವರ ಕಾರಿನಲ್ಲಿ ಒಬ್ಬನನ್ನೇ ಕೂರಿಸಿ ಓಡಾಡಿಸಿದ್ರು. ಆಗ ನನಗಾದ ಅನುಭವ ಅನಂತ.

ಇಂತ ನಿಸ್ವಾರ್ಥಮಯಿ ಗುಣ ಯಾರಿಗಿದೆ. ಮಾತೃಮಯಿ ಗುಣದ ಏಕೈಕ ನಾಯಕ ಅಂದ್ರೆ ನಮ್ಮ ಚೆನ್ನಿಗಪ್ಪ. ದೊಡ್ಡವರಲ್ಲಿ ದೊಡ್ಡವರಾಗಿ..ಚಿಕ್ಕವರಲ್ಲಿ ಚಿಕ್ಕವರಾಗಿ…ನೊಂದವರಲ್ಲಿ ನೊಂದಿತನಾಗಿ..ದೀನದಲಿತರ ರಲ್ಲಿ ದಮನಿ ತಾನಾಗಿ .. ಜೀವನ ಸಾಗಿಸಿದ ಅಭಿನವ ಬಸಣ್ಣ ಅಂದ್ರೆ ನಮ್ಮ ಚೆನ್ನಿಗಪ್ಪ.

ಅದರಲ್ಲೂ ನಮ್ಮ ತಾಲ್ಲೂಕಿನ ಜನತೆಗೆ ಸದಾ ಕರೆಯುವ ಕಾಮಧೇನು. ಬೇಡಿದ್ದನ್ನು ತಕ್ಷಣವೇ ತಥಾಸ್ತು ಎನ್ನುವ ದೇವಮಾನವ. ಸದಾ ಹಸನ್ಮುಖಿಯಾಗಿ ನೊಂದ ಜನರ ಆಶಾಕಿರಣ ವಾಗಿದ್ದ ಚೆನ್ನಿಗಪ್ಪ ಇಂದು ನನ್ನನ್ನು ಬಿಟ್ಟುಹೋಗಿದ್ದಾರೆ ಎಂದರೆ ನಂಬೋಕೆ ಸಾಧ್ಯ ಆಗ್ತಾಯಿಲ್ಲ.

ಲೇಖನ ಬರೆಯುತ್ತ ಕಣ್ಣಲ್ಲಿ ನೀರು ತುಂಬಿದೆ..ಆ ಧೀರೋದ್ದಾತನ ಗುಣಗಳ ನೆನಪುಗಳು ಉಮ್ಮಳಿಸಿ ಬರುತ್ತಿವೆ..ಮತ್ತೆ ಹುಟ್ಟಿ ಬಾ ಎಂದು ಎಲ್ಲರೂ ಹಾರಿಸೋಣವೇ…


ಲೇಖಕರು ಹಿರಿಯ ಪತ್ರಕರ್ತರು

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?