Publicstory.in
ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ರಸ್ತೆ ಸಾರಿಗೆಯ ನಿರ್ವಾಹಕರು, ಚಾಲಕರನ್ನು 50ಲಕ್ಷ ವಿಮೆ ಪ್ಯಾಕೇಜ್ ಗೆ ಒಳಪಡಿಸಬೇಕು ಎಂದು ಬಿಎಂಟಿಸಿ ಕಾರ್ಮಿಕರ ಸಂಘ ಒತ್ತಾಯಿಸಿದೆ.
ವಿಪತ್ತು ಪರಿಹಾರ ಕಾಯ್ದೆಯಡಿ ಈಗಾಗಲೇ ವೈದ್ಯರು, ವೈದ್ಯ ಸಿಬ್ಬಂದಿ ಹಾಗೂ ಇನ್ನಿತರರು ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬ ವರ್ಗಕ್ಕೆ 50 ಲಕ್ಷ ವಿಮೆ ನೀಡಲಾಗುತ್ತಿದೆ. ಇದನ್ನು ಬಸ್ ಚಾಲಕರು, ನಿರ್ವಾಹಕರಿಗೂ ನೀಡಬೇಕು ಎಂದು ಹೇಳಿದ್ದಾರೆ.
ಲಾಕ್ ಡೌನ್ ಸಡಿಲಗೊಂಡ ಬಳಿಕ ಸಾರಿಗೆ ಬಸ್ ಗಳನ್ನು ಬಿಡಲಾಗಿದೆ. ಪ್ರತಿ ದಿನ ಜನರನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಅಪಾಯಕಾರಿ ಕೆಲಸದಲ್ಲಿ ಸಿಬ್ಬಂದಿ ತೊಡಗಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಹೇಳಿದ್ದಾರೆ.
ಆರೋಗ್ಯ ರಕ್ಷಾ ಕವಚಗಳು, ಸ್ಯಾನಿಟೈಜರ್ ಮತ್ತಿತರ ಸೌಲಭ್ಯಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.