Public story
ತುರುವೇಕೆರೆ: ‘ಕಾಂಗ್ರೆಸ್ ಒಂದು ಕುಟುಂಬವಾಗಿದ್ದು, ಜಿಲ್ಲಾ ಹಾಗು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನಿಂದ ಚುನಾವಣೆ ಎದುರಿಸಿ ಗೆಲುವು ಸಾದಿಸೋಣ’ ಎಂದು ಕೆ.ಪಿ.ಸಿ.ಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಕಾರ್ಯಕರ್ತರುಗಳಿಗೆ ಕರೆಕೊಟ್ಟರು.
ತಾಲ್ಲೂಕಿನ ಮಲ್ಲಾಘಟ್ಟದ ಹೊರವಲಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಣಸಂದ್ರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾರ ಶಿಫಾರಸ್ಸು ನಡೆಯದು. ಕ್ಷೇತ್ರದ ಕಟ್ಟಕಡೆಯ ಕಾರ್ಯಕರ್ತರುಗಳ ಅಭಿಪ್ರಾಯ ಸ್ವೀಕರಿಸಿ, ಜನಪರ ಆಡಳಿತಕ್ಕಾಗಿ ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಸನ್ನಧರಾಗಬೇಕು.
ಉಪಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ಮಾಜಿ ಮಂತ್ರಿ ಸಿ.ಪಿ.ಯೋಗೀಶ್ವರ್ ಮನೆಯನ್ನು ಖಾಲಿ ಮಾಡಿಸಿಕೊಡಿಸಲು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಂದ ಸಾಧ್ಯವಾಗದೆ ನಿತ್ಯವೂ ಬಿ.ಎಸ್.ವೈ.ಯಡಿಯೂರಪ್ಪರ ಮನೆಗೆ ನಿಸ್ಸಹಾಯಕರಂತೆ ತೆರಳುತ್ತಿದ್ದಾರೆ. ಯಾವ ಸಂದರ್ಭದಲ್ಲಾದರೂ ಚುನಾವಣೆ ಎದುರಾಗಬಹುದು ಇನ್ನೂ ಹೇಳುವುದಾದರೆ ಮುಖ್ಯಮಂತ್ರಿಯೇ ಬದಲಾಗಬಹುದೆನೋ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಮುಖಂಡ ಚೌದ್ರಿರಂಗಪ್ಪ ಮಾತನಾಡಿ, ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಯನ್ನು ಆಲೋಚನೆಯಲ್ಲಿಟ್ಟುಕೊಂಡು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ, ಪಕ್ಷಕ್ಕೆ ಮತ್ತಷ್ಟು ಕಸುವು ತುಂಬಲು ಎಲ್ಲರೂ ಸಂಕಲ್ಪ ಮಾಡೋಣವೆಂದರು.
ಬಾಣಸಂದ್ರ ಜಿಲ್ಲಾ ಪಂಚಾಯಿತಿ ಟಿಕೀಟ್ ಪ್ರಬಲ ಆಕಾಂಕ್ಷಿ ವಸಂತಕುಮಾರ್ ಮಾತನಾಡಿ, ಹಿಂದಿನಿಂದಲೂ ಬಾಣಸಂದ್ರ ಕ್ಷೇತ್ರವೂ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಈ ಬಾರಿಯೂ ಸಹ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸುವ ಸಾದ್ಯತೆ ಹೆಚ್ಚಿದೆ. ವಿರೋಧ ಪಕ್ಷಗಳಿಂದಲೂ ತಮ್ಮ ಪಕ್ಷದಿಂದ ಅಭ್ಯರ್ಥಿಗಳ ವಿರುದ್ದ ಪ್ರತಿಸ್ಪರ್ಧೆಗಿಳಿಸುವುದು ಸವಾಲಾಗಿದೆ. ಕಾರ್ಯಕರ್ತರು ಸಂಘಟಿತರಾಗಿ ಹೆಚ್ಚಿನ ಮತಗಳಿಂದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಣಿಯಾಗಿ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ನಾಗೇಶ್, ಜಿ.ಪಂ. ಆಕಾಂಕ್ಷಿ ಗುಡ್ಡೇನಹಳ್ಳಿಮಂಜುನಾಥ್, ಯುವ ಕಾಂಗ್ರೆಸ್ನ ವಿನಯ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜೋಗಿಪಾಳ್ಯ ಶಿವರಾಜ್, ಮುಖಂಡರಾದ ವಿಶ್ವೇಶ್ವರಯ್ಯ, ನಾರಾಯಣಗೌಡ, ದಾನಿಗೌಡ, ಕೊಳಾಲನಾಗರಾಜ್, ಉಮೇಶ್, ಕೃಷ್ಣಮೂರ್ತಿ, ನಂಜುಂಡಪ್ಪ, ಸ್ವರ್ಣಕುಮಾರ್ ಮತ್ತು ಕಾರ್ಯಕ್ತರುಗಳು ಭಾಗವಹಿಸಿದ್ದರು.