ತುಮಕೂರು: ಬೆಂಗಳೂರಿನಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯು ತನ್ನ ಅಂಗ ಸಂಸ್ಥೆಗಳ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ತುಮಕೂರಿನ ಗಂಗಸಂದ್ರದಲ್ಲಿರುವ ಶೇಷಾದ್ರಿಪುರಂ ನ ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿಗಳ ಸರಮಾಲೆಗಳನ್ನು ಪಡೆದು ಗಮನ ಸೆಳೆದರು.
ಬೆಂಗಳೂರಿನ ಶೇಷಾದ್ರಿಪುರಂ ಸಂಯೋಜಿತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈ ಸಮಾರಂಭದಲ್ಲಿ ಎಲ್ಲಾ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ವಿಭಿನ್ನ ರೀತಿಯುಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ಗಮನ ಸೆಳೆದರು.
ಖ್ಯಾತ ನೃತ್ಯಗಾರ್ತಿಯರಾದ ದೀಪ್ತಿ ಹಾಗೂ ಸರ್ವಮಂಗಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಜಿ.ಕೆ ಮಂಜುನಾಥ್ ಅವರು ವಹಿಸಿದ್ದರು. ಸಾಂಸ್ಕೃತಿಕ ಸಂಚಾಲಕರಾದ ಗೀತಾರಾಜ್ ಉಪಸ್ಥಿತರಿದ್ದರು
ವಿದ್ಯಾರ್ಥಿಗಳ ನೃತ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ
ಗಾಂಧಿವಾದ, ಸ್ನೇಹಶೀಲತೆ, ಬಾಂಧವ್ಯ, ಸಹೋದರತೆಯ ಗುಣಗಳನ್ನು ಯುವ ಜನಾಂಗದಲ್ಲಿ ಬೆಳೆಸುವ ಗುರಿಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ವೂಡೇ ಪಿ. ಕೃಷ್ಣ ಅವರು ಹೊಂದಿದ್ದು, ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಂಸ್ಥೆಯ ಮಕ್ಕಳು ಮುಂದಿದ್ದಾರೆ.
ವಿದ್ಯಾರ್ಥಿಗಳ ನೃತ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ
ತನ್ನ ಅಂಗಸಂಸ್ಥೆಗಳ ನಡುವೆ ಸೋದರತೆ, ಬಾಂಧವ್ಯ , ಸ್ನೇಹಶೀಲತೆ ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ದತ್ತಿಯು ಉತ್ತಮ ಕೆಲಸ ಮಾಡುತ್ತಿದೆ. ಉತ್ಕೃಷ್ಟ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾದ ಶೇಷಾದ್ರಿಪುರಂ ಶಿಕ್ಷಣದತ್ತಿಯ ಹಲವಾರು ಉತ್ತಮ ಕೆಲಸಗಳಿಗೆ ಮಾದರಿಯಾಗಿದೆ ಎಂದು ಪ್ರಾಂಶುಪಾಲರಾದ ಜಿ.ಕೆ ಮಂಜುನಾಥ್ ತಿಳಿಸಿದರು.
ವಿದ್ಯಾರ್ಥಿಗಳ ನೃತ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಶೇಷಾದ್ರಿಪುರಂ ತುಮಕೂರು ಕಾಲೇಜಿನ ವಿದ್ಯಾರ್ಥಿಗಳು ಎರಡು ಪ್ರಶಸ್ತಿಗಳನ್ನು ಪಡೆದರು. ವಿದ್ಯಾರ್ಥಿಗಳು ನೀಡಿದ ಪ್ರದರ್ಶನಕ್ಕೆ ತೀರ್ಪುಗಾರರು ತಲೆದೂಗಿದರು. ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಬಿ.ವಿ ಬಸವರಾಜ್ ಅಭಿನಂದಿಸಿದ್ದಾರೆ.