Public story
ಗುಬ್ಬಿ : ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲವಣೆ ವಿಚಾರ ಅವರ ಪಕ್ಷಕ್ಕೆ,
ವರಿಷ್ಠರಿಗೆ ಬಿಟ್ಟ ವಿಚಾರ ಇದರಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶ ಮಾಡುತ್ತಿರುವುದು
ಮಠ ಹಾಗೂ ಸ್ವಾಮೀಜಿಗಳ ಮೇಲೆ ಅಪಾರವಾದ ಗೌರವ ಮತ್ತು ಭಕ್ತಿ
ಇಟ್ಟುಕೊಂಡಿರುವ ಭಕ್ತರ ಮನಸ್ಸಿಗೆ ಬಹಳ ನೋವಾಗಿದೆ. ಸ್ವಾಜೀಗಳು ಯಾರೇ
ಮುಖ್ಯಮಂತ್ರಿಯಾದರು ಸ್ವಾಗತಿಸಬೇಕೇ ಹೊರತು ಇಂತವರನ್ನೇ
ಮುಖ್ಯಮಂತ್ರಿಯಾಗಿ ಮುಂದುವರೆಸಿ ಎಂದು ಹೇಳುವುದು ಸರಿಯಲ್ಲ ಎಂದು ರೈತ
ಸಂಘದ ಜಿಲ್ಲಾ ಸಂಚಾಲಕ ಸಿ.ಕೆ. ಪ್ರಕಾಶ್ ಹೇಳಿದರು.
ತಾಲೂಕಿನ ಚಂಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ
ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಸ್ವಾಮೀಜಿಗಳು ತುಂಬಾ
ಶ್ರಮತೆಗೆದುಕೊಂಡಿದ್ದಾರೆ. ಸಮಾಜದ ಉಳಿವಿಗಾಗಿ, ಸಮಾಜದ ಕಾರ್ಮಿಕರು, ರೈತರು
ಸೇರಿದಂತೆ ಹಲವು ವರ್ಗದ ಜನರ ಒಳಿತಿಗೆ ಸ್ವಾಮಿಜಿಗಳು ಶ್ರಮಿಸಬೇಕು.
ಪ್ರೆಟ್ರೋಲ್ ಬೆಲೆ ಏರಿಕೆ, ಕಾರ್ಮಿಕರು, ರೈತರು ಕೋವಿಡ್ ನಿಂದ ಸಂಕಷ್ಟಕ್ಕೆ
ಒಳಗಾದಗ ಸ್ವಾಮೀಜಿಗಳು ಇಷ್ಟು ಮುತವರ್ಜಿ ತೋರಿಸಲಿಲ್ಲ, ಈಗ ಮುಖ್ಯಮಂತ್ರಿ
ಬದಲಾವಣೆ ವಿಚಾರವಾಗಿ ಇಷ್ಟೋಂದು ಆಸಕ್ತಿ ತೋರುತಿರುವುದು ಸ್ವಾಮೀಜಿಗಳ ಬಗ್ಗೆ
ಸಮಾಜದಲ್ಲಿ ತಪ್ಪು ಸಂದೇಶ ಹೊಗುತ್ತದೆ ಇದನ್ನು ಪೂಜ್ಯರು ಮನಗಾಣಬೇಕಿದೆ
ಎಂದರು.
ಮಠಗಳಬಗ್ಗೆ ಮತ್ತು ಸ್ವಾಮೀಜಿಗಳ ಬಗ್ಗೆ ಭಕ್ತವೃಂಧಕ್ಕೆ ಮತ್ತು
ಸ್ವಾಮೀಜಿಗಳ ಬಗ್ಗೆ ಸಮಾಜದಲ್ಲಿ ಅಪಾರ ಗೌರವ ಇದೆ ಹಾಗಾಗಿ ಸ್ವಾಮೀಜಿಗಳು ರಾಜಕಾರಣ
ಮಾಡಬಾರದು ಯಾರೇ ಮುಖ್ಯಮಂತ್ರಿ ಆದರೂ ಸ್ವಾಗದಿಸಬೇಕು.ಮುಖ್ಯಮಂತ್ರಿ
ಬದಲಾವಣೆ ಅವರ ಪಕ್ಷಕ್ಕೆ, ವರಿಷ್ಠರಿಗೆ ಬಿಟ್ಟ ವಿಚಾರ ಆದರೆ ಸ್ವಾಮೀಜಿಗಳಿಗೆ ಅಲ್ಲ ಹಾಗಾಗಿ
ಸ್ವಾಮೀಜಿಗಳು ರಾಜಕೀಯ ಮಾಡುವುದು ಸಲ್ಲದು ಎಂದರು.
ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿದರೆ ಅಚ್ಛರ್ಯವಾಗುತ್ತದೆ
ಸ್ವಾಮೀಜಿಗಳು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಬೇಡಿ ಎಂದು ಹೇಳುವುದು
ಸರಿಯಲ್ಲ ಸ್ವಾಮೀಜಿಗಳು ಬೇಕಾದರೆ ಮಠಗಳಿಗೆ ಏನು ಬೇಕಾದರು
ಕೇಳಿಕೊಳ್ಳಲಿ.ಮಠಮಾನ್ಯಗಳು ಉಳಿಯಬೇಕು. ಸ್ವಾಮೀಜಿಗಳು ರಾಜಕೀಯ
ಮಾಡಿದರೆ ಭಕ್ತರು ನೀಡುವ ಗೌರವಕ್ಕೆ ಚುತಿಯಾಗಬಾರದು ಎಂದರು.