ವಿನಯ್ ಹೆಬ್ಬೂರ್
ನಿಗಧಿಯಂತೆ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಒಳಗಾಗಿ 36 ರಫೇಲ್ ಯುದ್ದ ವಿಮಾನಗಳ ಪೈಕಿ 4 ಯುದ್ದ ವಿಮಾನ ಪೂರೈಸುವುದಾಗಿ ಫ್ರಾನ್ಸ್ ತಿಳಿಸಿದೆ.
ಇದು ಭಾರತದ ಸೈನ್ಯ ಬಲವನ್ನು ಹೆಚ್ಚಿಸಿದ್ದು ಶತೃಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
2016ರಲ್ಲಿ 56ಸಾವಿರ ಕೋಟಿ ಮೊತ್ತದಲ್ಲಿ ಏರ್ಪಟ್ಟ ಈ ಒಪ್ಪಂದಂತೆ 36 ಯುದ್ದ ವಿಮಾಣಗಳ ಪೈಕಿ 4 ವಿಮಾನಗಳು ಈಗ ಭಾರತದ ಬತ್ತಳಿಕೆ ಸೇರಲಿದೆ.
ಎರಡು ಇಂಜಿನ್ ಹೊಂದಿರುವ 4.5ನೇ ಪೀಳಿಗೆಯ ಈ ಯುದ್ದ ವಿಮಾನವನ್ನು ಡಸಾಲ್ಟ್ ಕಂಪನಿ ನಿರ್ಮಿಸುತ್ತಿದೆ.
ಈ ಯುದ್ಧ ವಿಮಾನ ಗಾಳಿಯಿಂದ ಗಾಳಿಗೆ ,ಗಾಳಿಯಿಂದ ಭೂಮಿಗೆ ಅತ್ಯಂತ ನಿಖರವಾಗಿ ಕ್ಷಿಪಣಿ ಎಸೆಯಬಲ್ಲ ಸಾಮರ್ಥ್ಯ ಹೊಂದಿದೆ.ಇದಲ್ಲದೇ ಈ ಯುದ್ಧ ವಿಮಾನ ಶತೃವಿನ ಹಲವಾರು ಗುರಿಯನ್ನು ಏಕ ಕಾಲದಲ್ಲಿ ನಾಶಪಡಿಸುವ ಶಕ್ತಿ ಹೊಂದಿದೆ.
ಈಗಾಗಲೇ ನಮಗಿಂತ ವಾಯುಸೇನೆಯ ಶಕ್ತಿಯಲ್ಲಿ ಮುಂದಿರುವ ಚೀನಾ ಹಾಗೂ ಅದರ ಸಹಾಯದಿಂದ ಬೀಗುತ್ತಿದ್ದ ಪಾಕೀಸ್ಥಾನಕ್ಕೆ ಈ ಯುದ್ದ ವಿಮಾನ ದೊಡ್ಡ ತಲೆ ನೋವಾಗಿದೆ.ರಫೇಲ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣಿ ಅಳವಡಿಸುವ ಕುರಿತು ಚಿಂತನೆ ನಡೆಯುತ್ತಿದೆ.
ಭಾರತ ಹೊರತು ಪಡಿಸಿ ರಫೇಲ್ ಅನ್ನು ಫ್ರಾನ್ಸ್, ಈಜಿಪ್ಟ್, ಹಾಗೂ ಕತಾರ್ ದೇಶಗಳು ಬಳಸುತ್ತಿವೆ.ಈ ಯುದ್ದ ವಿಮಾನ ಗಂಟೆಗೆ 2222.6ಕಿಮಿ ಚಲಿಸುವ ಸಾಮರ್ಥ್ಯ ಹೊಂದಿದ್ದು ಗರಿಷ್ಠ 50000 ಅಡಿ ಎತ್ತರದವರೆಗೆ ಚಲಿಸುತ್ತದೆ.
ಈ ವಿಮಾನಕ್ಕೆ ಗಾಳಿಯಲ್ಲೇ ಇಂಧನ ತುಂಬಿಸಬಹುದಾಗಿದೆ.
ಈ ಯುದ್ದ ವಿಮಾನ 15.27 ಮೀಟರ್ ಉದ್ದವಿದ್ದು, 10.8 ಮೀಟರ್ ರೆಕ್ಕೆ ವಿಸ್ತಾರವನ್ನು ಹೊಂದಿದೆ ಮತ್ತು 45.7 ಚದರ ಮೀಟರ್ ರೆಕ್ಕೆ ಮೇಲ್ಮೈ ವಿಸ್ತೀರ್ಣವನ್ನು ಹೊಂದಿದೆ. ಇದು 9,500 ಕೆಜಿ ಬಾಂಬ್ ಮತ್ತು ಯುದ್ಧಸಾಮಗ್ರಿಗಳನ್ನು ಸಾಗಿಸಬಲ್ಲದು.
ಭಾರತ-ಪಾಕಿಸ್ತಾನ ಗಡಿಯಿಂದ 200 ಕಿಲೋಮೀಟರ್ ದೂರದಲ್ಲಿರುವ ಐಎಎಫ್‌ನ ಅತ್ಯಂತ ಆಯಕಟ್ಟಿನ ನೆಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಅಂಬಾಲಾ ಏರ್ ಬೇಸ್ನದಲ್ಲಿ ಮೊದಲ ರಫೇಲ್ ಸ್ಕ್ವಾಡ್ರನ್ ಇರಲಿದೆ.
ವಿವಿಧ ಮೂಲಗಳಿಂದ