Friday, November 22, 2024
Google search engine
Homeತುಮಕೂರ್ ಲೈವ್ಮಂದರಗಿರಿಗೆ ಭಟ್ಟಾರಕರ ನೇಮಕ: ಯುಗಳ ಮುನಿಗಳ ನಿರ್ದೇಶನ

ಮಂದರಗಿರಿಗೆ ಭಟ್ಟಾರಕರ ನೇಮಕ: ಯುಗಳ ಮುನಿಗಳ ನಿರ್ದೇಶನ

Publicstory.in


ತುಮಕೂರು: ಜೈನ ಯುಗಳ ಮುನಿಗಳ ನಡೆದ ಶ್ರೀ ಕಲ್ಪದ್ರುಮ ಆರಾಧನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ನೆಡಯಿತು. ಸಮವ ಶರಣ ತೀರ್ಥಂಕರರ ಕಲ್ಪದ್ರುಮ ಆರಾಧನಾ ಮಹೋತ್ಸವವು ಜೈನ ಯುಗಳ ಮುನಿಗಳ ಸಾನ್ನಿಧ್ಯದಲ್ಲಿ ಬಹಳ ವೈಭವೋಪೈತವಾಗಿ ನಡೆಯಿತು.

ತುಮಕೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಿಂದ ದಿಗಂಬರ ಜೈನ ಶ್ರಾವಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ (ಡಿ.19ರಂದು) ಆರಂಭಗೊಂಡಿದ್ದ ಪೂಜೆಯು ಶುಕ್ರವಾರ (ಡಿ.27ರಂದು) ಒಟ್ಟು 9 ದಿನಗಳ ಕಾಲ ನಡೆಯಿತು.

ಈ ಮಹೋತ್ಸವಕ್ಕೆ ನಾಡಿನ ಶ್ರವಣಬೆಳಗೊಳದ ಭಟ್ಟಾರಕ ಶ್ರೀಗಳು ಸೇರಿ ಎಲ್ಲ ಭಟ್ಟಾರಕ ಶ್ರೀಗಳು ಮತ್ತು ತಮಿಳುನಾಡಿನ ಅರಹಂತಗಿರಿ ಭಟ್ಟಾರಕ ಶ್ರೀಗಳು, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಸಹೋದರರಾದ ಸುರೇಂದ್ರ ಕುಮಾರ್ ದಂಪತಿ ಸಹ ಭಾಗವಹಿಸಿದ್ದು ಭಕ್ತರ ಸಂಭ್ರಮ ಇಮ್ಮಡಿಸಿತು.

ಇದೇ ಮೊದಲ ಸಲ ತುಮಕೂರು ನಗರದಲ್ಲಿ ಇಷ್ಟು ದೊಡ್ಡ ಮಟ್ಟದ ಪೂಜಾ ಸಮಾರಂಭ ಆಯೋಜಿಸುವ ಮೂಲಕ ಎಲ್ಲ ಜೈನ ಬಾಂಧವರು ಸಂಭ್ರಮಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೇರೆ ಜಿಲ್ಲೆಗಳ ಭಕ್ತರು ಹಾಗೂ ಇನ್ನಿತರ ಸಮುದಾಯಗಳ ಭಕ್ತರು ಪೂಜೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಭಕ್ತಾಧಿಗಳಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಸಭೆ: ಪೂಜೆಯ ನಡುವೆಯೂ ಡಿ.21ರಂದು ನಡೆದ ವಿಶೇಷ ಧರ್ಮಸಭೆಯಲ್ಲಿ ಶ್ರವಣಬೆಳಗೊಳದ ಶ್ರೀ ಚಾರಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ತುಮಕೂರು ಜೈನ ಸಮಾಜದ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

ಈ ಸಂದರ್ಭ ತುಮಕೂರಿನ ಮಂದರಗಿರಿ ಕ್ಷೇತ್ರದಲ್ಲಿ ಭಟ್ಟಾರಕ ಸ್ವಾಮೀಜಿಗಳನ್ನುನೇಮಕ ಮಾಡುವಂತೆ ಶ್ರವಣಬೆಳಗೊಳದ ಚಾರುಕೀರ್ತಿ ಶ್ರೀಗಳಿಗೆ ಯುಗಳ ಮುನಿಗಳು ನಿರ್ದೇಶನ ನೀಡಿದರು.

ಇದಕ್ಕೆ ಸಮ್ಮತಿ ಸೂಚಿಸಿದ ಚಾರುಕೀರ್ತಿ ಶ್ರೀಗಳು, ಮಂದರಗಿರಿಯಲ್ಲಿ ಭಟ್ಟಾರಕರು ನೇಮಕವಾದರೆ, ಶ್ರೀ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಮತ್ತು ಅಲ್ಲಿನ ಜಾಗವೂ ರಕ್ಷಣೆಯಾಗುತ್ತದೆ. ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬಹುದು ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ನೆರೆದಿದ್ದ ಎಲ್ಲ ಭಕ್ತರು ಚಪ್ಪಾಳೆ ಹಾಕುತ್ತಾ ಜೈಕಾರ ಕೂಗುತ್ತಾ ಸಮ್ಮತಿ ಸೂಚಿಸಿದರು. ಯುಗಳ ಶ್ರೀಗಳ ನಿರ್ದೇಶನಕ್ಕೆ ಮೆಚ್ಚುಗೆ ಸೂಚಿಸಿದರು.

ಒಂಭತ್ತು ದಿನಗಳ ಕಾಲ ನಡೆದ ಈ ಭವ್ಯ ಪೂಜಾ ವಿಧಿವಿಧಾನದಲ್ಲಿ ಜಿಲ್ಲೆಯ ಜೈನ ಮುಖಂಡರಾದ ಪಚ್ಚೇಶ್ ಜೈನ್, ಬಾಹುಬಲಿ ಬಾಬು, ಅಜಿತ್ ಜೈನ್, ಪದ್ಮನಾಭ, ಸುರೇಶ್, ಶೀತಲ್ ಜೈನ್, ಬಾಹುಬಲಿ, ಶ್ರುತ ಮಹಿಳಾ ಸಮಾಜದ ಸದಸ್ಯೆಯರಾದ ಶಾಂತಲಾ, ಶ್ಯಾಮಲಾ ಇತರರು ಭಾಗವಹಿಸಿದ್ದರು.

ಅಣೇಕಾರ್ ಜ್ಯೂಯಲರ್ಸ್ ನ ಮಾಲೀಕ ಪಚ್ಚೇಶ್ ಜೈನ್ ಅವರನ್ನು ಸನ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?