ಮದ್ಯ ಮಾರಾಟದಿಂದ ಸರಕಾರಿ ವಾರ್ಷಿಕ ಉತ್ತಮ ಆದಾಯವಿದೆ ನಿಜ. ಆದರೆ ಮದ್ಯ ಮಾರಾಟದಿಂದ ಸರಕಾರಕ್ಕೆ, ಪ್ರಜೆಗಳಿಗೆ ಹಾಗೂ ಸಮಾಜಕ್ಕೆ ಉಂಟಾಗುತ್ತಿರುವ ಹಾನಿಯೇ ಅಧಿಕ ಎನ್ನುತ್ತಿದೆ ಸರಕಾರದ ಅಂಗಸಂಸ್ಥೆ ನಿಮ್ಹಾನ್ಸ್ ವರದಿ.
ಇನ್ನೂ ರಾಜ್ಯದಲ್ಲಿ ಶೇ.30 ರಷ್ಟು ವಯಸ್ಕ ಪುರುಷರು ಹಾಗೂ ಶೇ.5 ರಷ್ಟು ಮಹಿಳೆಯರು ದಿನನಿತ್ಯ ಮದ್ಯಪಾನದ ವ್ಯಸನಿಗಳಾಗಿದ್ದಾರೆ. ಅಂಕಿಅಂಶಗಳ ಪ್ರಕಾರ 15 ರಿಂದ 25 ವರ್ಷದೊಳಗಿನ ಶೇ.40 ರಷ್ಟು ಯುವಕರು ಇಂದು ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಕಳೆದ 20 ವರ್ಷದಲ್ಲಿ ರಾಜ್ಯದಲ್ಲಿ ಕುಡುಕರ ಸಂಖ್ಯೆ ಶೇ.55 ರಷ್ಟು ಏರಿಕೆಯಾಗುತ್ತಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಾನ ಸಂಖ್ಯೆಯ ಕುಡುಕರನ್ನು ಹೊಂದಿರುವ ದೇಶ ಭಾರತ. ಈ ವಿಚಾರದಲ್ಲಿ ಕರ್ನಾಟಕವೂ ಹಿಂದುಳಿದಿಲ್ಲ. ರಾಜ್ಯದ ಗ್ರಾಮೀಣ ಭಾಗದಲ್ಲಿ ಕೂಲಿಕಾರರ ಒಂದು ದಿನದ ಕನಿಷ್ಟ ಕೂಲಿ 200ರೂ. ಅದರಲ್ಲಿ ದುಡಿತದ ಶೇ.70 ರಷ್ಟು ಭಾಗವನ್ನು ಆತ ಕುಡಿತಕ್ಕೆ ಮೀಸಲಿಡುತ್ತಿದ್ದಾನೆ ಎನ್ನುತ್ತಿವೆ ವರದಿಗಳು. ಉಳಿದ ಶೇ.30 ರಷ್ಟು ಹಣದಲ್ಲಿ ಮಹಿಳೆಯರು ಸಂಸಾರ ನಡೆಸಬೇಕಾದ ಪರಿಸ್ಥಿತಿ ಇದೆ.
ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ಶೇ.75 ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು, ಶೇ.80 ರಷ್ಟು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಿಗೆ ಮದ್ಯಪಾನವೇ ಕಾರಣ ಎನ್ನುತ್ತಿವೆ ಸರಕಾರಿ ಪ್ರಾಯೋಜಿತ ವರದಿಗಳು.
ನಗರ ಪ್ರದೇಶಗಳಲ್ಲಿ ದಾಖಲಾಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಶೇ.60 ರಷ್ಟು ಪ್ರಕರಣಗಳು ಕುಡಿತದ ಕಾರಣದಿಂದಲೇ ಸಂಭವಿಸುತ್ತಿವೆ. ಅಲ್ಲದೆ ಕೊಲೆ- ಸುಲಿಗೆ, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ವಿಕೃತ ಮನಸ್ಸಿನ ಅಪರಾಧ ಪ್ರಕರಣಗಳಿಗೆ ಬಹುತೇಕ ಕುಡಿತವೇ ಕಾರಣ.
ಮದ್ಯಪಾನ ಅನೇಕ ಕಾಯಿಲೆಗಳನ್ನು ಧಾರಾಳವಾಗಿ ಕರುಣಿಸುತ್ತದೆ. ಸಕ್ಕರೆ ಖಾಯಿಲೆ, ಯಕೃತ್ತಿನ ಖಾಯಿಲೆ, ಜಠರ ರೋಗ, ಅಜೀರ್ಣತೆ, ನರಮಂಡಲ ಹಾನಿ, ಲೈಂಗಿಕ ಶಕ್ತಿ ಕುಸಿತ, ಮರೆವಿನ ಖಾಯಿಲೆ, ನಿಶ್ಯಕ್ತಿ, ಮೆದುಳಿನ ಮೇಲೆ ಪರಿಣಾಮ, ಮನೋವ್ಯಾಧಿಗಳ ಜೊತೆಗೆ ಅನೇಕ ಕಾಯಿಲೆಗಳು ಕುಡುಕರನ್ನು ಆವರಿಸಿಕೊಳ್ಳುತ್ತವೆ.
ರಾಜ್ಯದ ಗ್ರಾಮೀಣ ಭಾಗದಲ್ಲಿ ಶೇ.52 ಕ್ಕೂ ಹೆಚ್ಚು ಜನ ಕುಡಿತದಿಂದಾಗಿ ಇಂತಹ ಖಾಯಿಲೆ ಒಳಗಾಗಿದ್ದಾರೆ. ಇಂತವರು ಚಿಕಿತ್ಸೆಗಾಗಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರೆ, ಹೆಚ್ಚಿನ ಚಿಕಿತ್ಸೆಗೆ ಹಣವಿಲ್ಲದೆ ಸಾವನ್ನು ಎದುರು ನೋಡುತ್ತಾ ಕುಳಿತಿರುವ ಜನರು ಮದರಿಯಾಗಲಿ,
ರಾಜ್ಯದ ಯುವ ಜನತೆ ಈ ಚಟದಿಂದ ಮುಕ್ತಿ ಹೊಂದಿ ತಮ್ಮ ಗುರಿಯತ್ತ ನಡೆಬೇಕು.
ಒಟ್ಟಿನಲ್ಲಿ ಕುಡಿತ ಎಂಬುದು ಗ್ರಾಮೀಣ ಭಾಗದ ಸಾಮಾಜಿಕ ಜೀವನವನ್ನು ಹೇಗೆ ಹರಿದು ಮುಕ್ಕಿದೆ ಎಂಬುದಕ್ಕೆ ಈ ಮೇಲಿನ ಅಂಕಿಅಂಶಗಳೇ ಸಾಕ್ಷಿ ನುಡಿಯುತ್ತವೆ.
ಅಂದರೆ, ಮದ್ಯ ಮಾರಾಟದಿಂದ ಆಗುತ್ತಿರುವ ಲಾಭಕ್ಕಿಂತ ನಷ್ಟವೇ ಅಧಿಕ ಎನ್ನುತ್ತಿವೆ ಅಂಕಿಅಂಶಗಳು. ಸಮಾಜದ ಶೇ.60 ಕ್ಕೂ ಹೆಚ್ಚು ಜನರ ಸವಾಂರ್ಗೀಣ ಬೆಳವಣಿಗೆಗೆ ಕುಡಿತದ ಚಟ ಅಡ್ಡಿಯಾಗಿದೆ. ಈ ಚಟದಿಂದಾಗಿ ಇಡೀ ರಾಜ್ಯವೇ ಇಂದು ತೀವ್ರ ನಿಗಾ ಘಟಕದಂತೆ ಭಾಸವಾಗುತ್ತಿದೆ.
ಮಧ್ಯಪಾನದಿಂದ ದೇಶ ಅನುಭವಿಸುತ್ತಿರುವ ಸಂಕಷ್ಟವನ್ನ ಸಮಗ್ರವಾಗಿ ಸ್ವಲ್ಪ ಪದಗಳಲ್ಲಿ ಮನವರಿಕೆ ಮಾಡಿಕೊಟ್ಟಿದ್ದಿರಿ ಸರ್ ….ಮಧ್ಯಪಾನದಿಂದ ಮುಕ್ತವಾದಗ ಮಾತ್ರ ಸಮಾಜದ ಅಭಿವೃಧ್ಧಿ ಸಾಧ್ಯವೆಂಬುದನ್ನ ತೋರಿಸಿದ್ದಿರಿ…🙏🙏🙏