Publicstory. in
ತುಮಕೂರು: ತುಮಕೂರು ನಗರದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಕೆಲಸಕ್ಕೆ ತುಮಕೂರು ನಗರ ಜನರು ಫಿದಾ ಆಗ ತೊಡಗಿದ್ದಾರೆ.
ಜಿಲ್ಲೆಯಲ್ಲಿ ಮಾಜಿ ಶಾಸಕರೊಬ್ಬರು ಈ ರೀತಿ ಕೆಲಸ ಮಾಡುತ್ತಿರುವುದು ಕಂಡು ಮೂಕ ವಿಸ್ಮಿತಗೊಂಡಿದ್ದಾರೆ.
ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ರೀತಿಯ ಕೆಲಸ ಮಾಜಿ ಶಾಸಕರುಗಳಿಂದ ಈವರೆಗೂ ವರದಿಯಾಗಿಲ್ಲ.
ಅಷ್ಟಕ್ಕೂ ಡಾ.ರಫೀಕ್ ಅಹಮದ್ ಮಾಡುತ್ತಿರುವ ಕೆಲಸವಾದರೂ ಏನು?
ಕೊರೊನಾ ಕಾರಣ ಲಾಕ್ ಡೌನ್ ಕಾರಣ ನಗರದ ಬಡಜನರು, ಗುತ್ತಿಗೆ ಕಾರ್ಮಿಕರು, ಪರವೂರಿನಿಂದ ಬಂದಿರುವ ವಿದ್ಯಾರ್ಥಿಗಳು, ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇವರ ಕೈ ಹಿಡಿಯುವ ಕೆಲಸವನ್ನು ರಫೀಕ್ ಮಾಡುತ್ತಿರುವುದು ಎಲ್ಲರಿಗೂ ಮೆಚ್ಚುಗೆಗೆ ಕಾರಣವಾಗುತ್ತಿದೆ.
ರಫೀಕ್ ಅಹಮದ್ ದೊಡ್ಡಮಟ್ಟದಲ್ಲಿ ಆಹಾರ ನೀಡುವ ಕೆಲಸ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಪೌರ ಕಾರ್ಮಿಕರು, ಭಿಕ್ಷುಕರು, ಅನಾಥರಿಗಷ್ಟೇ ಅಲ್ಲದೇ ನಗರದ 35 ವಾರ್ಡ್ ಗಳಲ್ಲಿ ತೀರಾ ಕಡುಕಷ್ಟದ ಜನರಿಗೆ, ವೃದ್ಧರಿಗೆ ಮನೆಮನೆಗೆ ಆಹಾರ ತಲುಪಿಸುವ ಕೆಲಸವನ್ನು ಸದ್ದಿಲ್ಲದೇ ಮಾಡತೊಡಗಿದ್ದಾರೆ.ಮಾಜಿ ಶಾಸಕರೊಬ್ಬರ ಜನರ ಕೈ ಹಿಡಿದಿರುವ ಕೆಲಸಕ್ಕೆ ಜಿಲ್ಲೆಯ ಬೇರೆ ಬೇರೆ ಭಾಗದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಮಯದಲ್ಲಿ ಮಾತ್ರ ಜನರ ಬಾಗಿಲಿಗೆ ಬರುವುದಲ್ಲ. ಸೋತರು ಸಹ ಜನಪರ ಕಾಳಜಿ ತೋರುತ್ತಿರುವ ಮಾಜಿ ಶಾಸಕರ ನಡೆ ಪ್ರಶಂಸನೀಯ. ಊಟದ ಜತೆಗೆ ಸಾಕಷ್ಟು ಬಡ ಜನರಿಗೆ ಔಷಧಿಯ ಕೊರತೆ ಎದುರಾಗಿದೆ. ಜಿಲ್ಲಾಸ್ಪತ್ರೆಯಿಂದ ಉಚಿತ ಔಷಧಿ ವಿತರಿಸುವ ಕಡೆಯೂ ಮಾಜಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎನ್ನುತ್ತಾರೆ ವಕೀಲರಾದ ನಿರಂಜನ್.
ಕಡೆ ಯಾರೂ ನೋಡಿರಲಿಲ್ಲ. ಮನೆ ಬಾಗಿಲಿಗೆ ಬಂದು ಆಹಾರ ವಿತರಿಸಿದರು. ದೇವರೆ ನಮ್ಮ ನೆರವಿಗೆ ಬಂದಂತೆ ಆಯಿತು ಎಂದು ಬನಶಂಕರಿಯಲ್ಲಿ ಆಹಾರ ಸ್ವೀಕರಿಸಿದರೊಬ್ಬರು publicstory in ಗೆ ತಿಳಿಸಿದರು.
ನಗರದ ಉಪ್ಪಾರಹಳ್ಳಿ, ಕಾಳಿದಾಸ ವೃತ್ತ, ಶಿರಾಗೇಟ್, ಜಯನಗರ ಹೀಗೆ ಎಲ್ಲೆಲ್ಲಿ ಅಗತ್ಯ ಇದೆಯೂ ಅಂತಹ ಕಡೆಯಲೆಲ್ಲ ಆಹಾರ ಹೊತ್ತ ಮಾರುತಿ ವ್ಯಾನ್ ಹೋಗುತ್ತದೆ.
ತುಮಕೂರು ನಗರದ ಜನರಿಗಾಗಿ ನನ್ನ ಹೃದಯ ಯಾವಾಗಲೂ ಮಿಡಿಯುತ್ತಿರುತ್ತದೆ. ಜನರ ಸಂಕಷ್ಟಕ್ಕೆ ನೆರವಾಗಲು ಅಧಿಕಾರ ಮುಖ್ಯವಾಗುವುದಿಲ್ಲ. ನಗರದಲ್ಲಿ ವಾಸ್ತವಕ್ಕಿಂತಲೂ ಹೆಚ್ಚು ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇನ್ನು ದೊಡ್ಡಮಟ್ಟದಲ್ಲಿ ಸಹಾಯ ಚಾಚುವ ಕೈಗಳು ಬೇಕಾಗಿವೆ ಎನ್ನುತ್ತಾರೆ ರಫೀಕ್ ಅಹಮದ್.
ಆಟೊ ಚಾಲಕರು, ಕೂಲಿ ಕಾರ್ಮಿಕರು, ಕೊಳೆಗೇರಿ ಜನರು, ಗುತ್ತಿಗೆ ಕೆಲಸಗಾರರು, ಸಣ್ಣ ಪುಟ್ಟ ಕೃಷಿಕರು ಹೀಗೆ ನಾನಾ ಬಗೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಾಧ್ಯವಾದಷ್ಟು ಅವರ ಹಸಿವು ನೀಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
12 ದಿನಗಳಿಂದಲೂ ಊಟ ನೀಡುತ್ತಿದ್ದೇನೆ. ಪ್ರತಿದಿನ. ಸಾವಿರಕ್ಕೂ ಜನರಿಗೂ ಅಧಿಕ ಮಂದಿ ಊಟ ಮಾಡುತ್ತಿದ್ದಾರೆ. ಬಡವರ ಜತೆಗೆ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೂ ಊಟ ನೀಡುವಂತೆ ಪಾಲಿಕೆ ಆಯುಕ್ತರು ಕೇಳಿದರು. ಅವರಿಗೂ ಬೆಳಿಗ್ಗೆ ವೇಳೆ ತಿಂಡಿ ನೀಡಲಾಗುತ್ತಿದೆ ಎಂದರು.
ಹಾಸ್ಟೆಲ್ ವೊಂದರಲ್ಲಿ 14 ವಿದ್ಯಾರ್ಥಿಗಳು ಬಂಧಿಯಾಗಿದ್ದಾರೆ. ಅವರಿಗೂ ಪ್ರತಿದಿನ ಊಟ ನೀಡಲಾಗುತ್ತಿದೆ ಎಂದು ಹೇಳಿದರು.
ಲಾಕ್ ಡೌನ್ ಮುಗಿಯುವವರೆಗೂ ಊಟದ ವ್ಯವಸ್ಥೆ ಮುಂದುವರೆಯಲಿದೆ. ಕರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಉತ್ತಮ ಹೆಜ್ಜೆ. ಜನರು ಸಾಮಾಜಿಕ ಅಂತರ ಕಾದುಕೊಳ್ಳಬೇಕು. ಹೊರಗೆ ಬರಬಾರದು. ಬಡವರಿಗೆ, ಅಸಹಾಯಕರಿಗೆ ಎಲ್ಲರೂ ನೆರವು ನೀಡಲು ಉದಾರ ಮನಸ್ಸು ಮಾಡಬೇಕು. ತುಮಕೂರು ನಗರ ಕ್ಷೇತ್ರದಲ್ಲಿ ಯಾರೊಬ್ಬರೂ ಹಸಿವಿನಿಂದ ನರಳಬಾರದು ಎಂದರು.
ಶಾಸಕರ ನಡೆ ಬೇರೆಯವರಿಗೂ ಮಾದರಿಯಾಗಿದೆ. ಲಾಕ್ ಡೌನ್ ಆದ ಮರುದಿನವೇ ಅವರು ಊಟದ ವ್ಯವಸ್ಥೆಗೆ ಮುತುವರ್ಜಿ ವಹಿಸಿದರು. ಪ್ರಚಾರಕ್ಕೆ ಬಾರದಂತೆ ಅನೇಕ ಸಹಾಯಗಳನ್ನು ಮಾಡುತ್ತಿದ್ದಾರೆ. ಜನರ ಕಷ್ಟಕ್ಕೆ ಮಿಡಿಯುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಹಾವೀರ ಜೈನ್ ತಿಳಿಸಿದರು.
Hats off for ur needy service rendering to the people in need. God bless you sir.👌🙏.