Publicstory. in
ತಿಪಟೂರು : ಕೋವಿಡ್ ಸೊಂಕಿಗೆ ತುತ್ತಾಗಿ ಅಗಲಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಮಾರುತಿ ಮಾನ್ಪಡೆಯರು ಇಡೀ ರಾಜ್ಯದ ಶ್ರಮಿಕ ವರ್ಗಗಳ ಪಾಲಿನ ಹೀರೋ ಆಗಿದ್ದರು ಎಂದು ಸೌಹಾರ್ದ ತಿಪಟೂರು ಸಂಘಟನೆಯ ಕಾರ್ಯದರ್ಶಿ ಅಲ್ಲಾಬಕಾಶ್ ಎ. ಹೇಳಿದರು.
ಇಲ್ಲಿ ಬುಧವಾರ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಮಾನ್ಪಡೆಯವರು ರಾಜ್ಯವ್ಯಾಪಿ ರೈತರ ಮತ್ತು ಕಾರ್ಮಿಕರ ಸಂಘಟನೆಯನ್ನು ಕಟ್ಟಲು ಶ್ರಮಿಸಿದವರು. ಅವರ ಅವಿರತ ಶ್ರಮದ ಪಲ ರಾಜ್ಯದಾದ್ಯಂತ ಕೇವಲ 500 ರಿಂದ 1000 ರೂಪಾಯಿಗೆ ಕೇಲಸ ಮಾಡುತ್ತಿದ್ದ ಗ್ರಾಮ ಪಂಚಾಯತಿ ನೌಕರರು ಇಂದು ಸುಂದರ ಬದುಕು ಕಟ್ಟಿಕೊಳ್ಳಲು ಸಾದ್ಯವಾಯಿತು. ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಆರ್ ಎಸ್ ಚನ್ನಬಸವಣ್ನ ನವರು 1975 ರಲ್ಲಿ ಪ್ರಥಮ ಬಾರಿಗೆ ಎಸ್ ಎಫ್ ಐ ಕಾರ್ಯಕ್ರಮ ಆಯೋಜಿಸಿದ್ಸಾಗ ಅವರ ಪರಿಚಯವಾಯಿತು. ಅವರು ಸದಾ ಹಸನ್ಮುಕಿಯಾಗಿರುತ್ತಿದ್ದರು. ಅದರೆ ಹೋರಾಟದ ನೇತೃತ್ವ ಕೊಟ್ಟಾಗ ಅವರ ಹೋರಾಟ ರಾಜೀರಹಿತವಾಗಿತ್ತು. ಸದಾ ರಾಜ್ಯವ್ಯಾಪಿ ಚಳುವಳಿ ಕಟ್ಟಲು ಹಗಲಿರುಲು ದುಡಿದ ಅವರು ಇಷ್ಟು ಬೇಗ ವಿಶ್ರಾಂತಿಗೆ ಹೊಗಿದ್ದು ನಂಬಲು ಹಾಗುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದರು.
ಅವರು ಹಾಕಿಕೊಟ್ಟ ಹೋರಾಟದ ದಾರಿಯನ್ನು ಮುನ್ನೆಡಸಬೇಕಿದೆ ಎಂದರು.
ಪ್ರಗತಿಪರ ಚಿಂತಕ ಉಜ್ಜಜ್ಜೆ ರಾಜಣ್ಣ ಮಾತನಾಡಿ, ಬೆರಳೆಣಿಕೆಯಷ್ಟು ಇರುವ ಪ್ರಾಮಾಣಿಕ ಹೋರಾಟಗಾರರ ಸಾವು ನಿಜಕ್ಕು ಸಹಿಸಲು ಸಾದ್ಯವಿಲ್ಲ. ಜನಪರ ಹೋರಾಟಗಳಿಂದ ಅವರು ಎಷ್ಟರ ಮಟ್ಟಿಗೆ ಜನಮನ್ನಣೆ ಪಡೆದಿದ್ದರು ಎಂಬುದಕ್ಕೆ ಇಂದು ಪತ್ರಿಕೆಗಳೆ ಸಾಕ್ಷಿಯಾಗಿವೆ ಎಂದು ಹೇಳಿದರು.
ರೈತ ಮತ್ತು ಕಾರ್ಮಿಕ ವರ್ಗಕ್ಕೆ ಮಾರುತಿ ಮಾನ್ಪಡೆಯವರ ಅಗಲಿಕೆ ಅಪಾರ ನೋವು ತಂದಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ಹಸಿರು ಸೇನೆ ಯ ಆದ್ಯಕ್ಷರಾದ ತಿಮ್ಲಾಪುರ ದೇವರಾಜ್ , ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಎತ್ತಿನಹೋಳೆ ಹೋರಾಟ ಸಮಿತಿಯ ಮನೋಹರ್ ಪಟೇಲ್, ಮುಸ್ಲಿಂ ಮುಖಂಡರಾದ ಷಪೀಉಲ್ಲಾ ಷರೀಫ್ ಪಂಚಾಯ್ತಿಯ ಬಸವಲಿಂಗಪ್ಪ, ಹೇಮಣ್ಣ ಮತ್ತು ರೈತ ಮುಖಂಡರಾದ ಗೌರಿಶಂಕರ್ ತಿಮ್ಲಾಪುರ ಮಲ್ಲಿಕಾರ್ಜುನ್ ಸಿಡ್ಲೇಹಳ್ಳಿ ಇದ್ದರು.