ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮೈದಾಳ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಮಾಜಿ ಶಾಸಕ ಬಿ.ಸುರೇಶಗೌಡ ಬಿರುಸಿನ ಸಂಚಾರ ನಡೆಸಿದರು.
ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಅವರು, ಲಾಕ್ ಡೌನ್ ತೆರವಿನ ಬಳಿಕ ಅತಿ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬರು ಸರ್ಕಾರದ ಮಾರ್ಗದರ್ಶನ ಪಾಲಿಸಬೇಕು ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಸಮೀಪ ಕೊರೊನಾ ಪೀಡಿತ ವ್ಯಕ್ತಿಯ ಶವವನ್ನು ಯಾವುದೇ ಕ್ರಮ ತೆಗೆದುಕೊಳ್ಳದೇ ಸಾಮಾನ್ಯ ಶವದಂತೆ ಮುಚ್ಚಲಾಗಿದೆ. ವರದಿ ಬರುವ ಮುನ್ನವೇ ವೈದ್ಯರು ಶವ ನೀಡಿದ ಹಿಂದೆ ಯಾವ ರಾಜಕಾರಣಿ ಇದ್ದರು ಎಂಬುದು ಕ್ಷೇತ್ರದ ಜನರಿಗೆ ಗೊತ್ತಾಗಿದೆ. ನಾನೇನು ಹೇಳಬೇಕಾಗಿಲ್ಲ. ಯಾವುದೋ ಒಂದು ಸಮುದಾಯವನ್ನು ತೃಪ್ತಿ ಪಡಿಸಲು ಕ್ಷೇತ್ರದ ಜನರನ್ನು ಭಯದಲ್ಲಿ ಇರುವಂತೆ ಮಾಡಿದರು ಎಂದು ಕಿಡಿಕಾಡಿದರು.
ಬಡವರಿಗೆ ಸಹಾಯ ಮಾತ್ರ ಮಾಡುತ್ತಿಲ್ಲ. ಕೊರೊನಾದಿಂದ ರಕ್ಷಣೆ ಪಡೆಯುವ ಕುರಿತು ಜಾಗೃತಿ ಸಹ ಮೂಡಿಸುತ್ತಿದ್ದೇನೆ. ನನ್ನ ಜನರಿಗೆ ಏನಾದರೂ ಆದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗವಲ್ಲಿ ಅಥವಾ ಗ್ರಾಮಾಂತರ ಕ್ಷೇತ್ರದಲ್ಲಿ ಕೊರೊನಾ ಕಾಣಿಸಿಕೊಂಡರೆ ಅದರ ಹೊಣೆಯನ್ನು ಶವ ಕೊಟ್ಟವರೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಜಿಲ್ಲಾ ಪಂಚಾಯ್ತಿಯ ಮೈದಾಳ ಗ್ರಾಮ ಪಂಚಾಯ್ತಿಯ ಪಂಡಿತನಹಳ್ಳಿ ಹಾಗೂ ಹಿರೇಹಳ್ಳಿ ಗ್ರಾಮ ಪಂಚಾಯ್ತಿಯ ಬಂಡಿಹಳ್ಳಿ ಗ್ರಾಮದ ಪ್ರತಿ ಮನೆ ಮನೆಗೆ ಉಚಿತ ಮಾಸ್ಕ್ ಹಾಗೂ ರೇಷನ್ ಕಿಟ್ ನ್ನು ವಿತರಣೆ ಮಾಡುವುದರ ಮೂಲಕ ಜನಗಳಿಗೆ ಮಹಾಮಾರಿ ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ವೈ, ಹೆಚ್, ಹುಚ್ಚಯ್ಯ, ಬೆಳಗುಂಬ ಜಿಲ್ಲಾ ಪಂಚಾಯ್ತಿ ಸದಸ್ಯರಾದ ನರಸಿಂಹಮೂರ್ತಿ, ತಾ ಪಂ ಉಪಾಧ್ಯಕ್ಷರಾದ ಶಾಂತಕುಮಾರ್, ತಾ ಪಂ ಸದಸ್ಯರಾದ ಮಮತಾ ಕಾಂತರಾಜು, ರಮೇಶ್, ಮೈದಾಳ ಗ್ರಾಮ ಪಂ ಉಪಾಧ್ಯಕ್ಷರಾದ ಕಾಂತಾಣ್ಣ, ಗ್ರಾಮ ಪಂ ಸದಸ್ಯರಾದ ವಿರುಪಣ್ಣ, ಹನುಮಂತರಾಜು,ನೀಲಮ್ಮ, ನಾರಾಯಣಪ್ಪ, ಮುಖಂಡರಾದ ರಾಜೇಶ್, ಹರ್ಷ, ರಘು, ರಂಗನಾಥ್, ನವೀನ್, ರಂಗಸ್ವಾಮಿ, ಮಂಜುನಾಥ್, ಬೈರಾಪುರ ಉಮೇಶ್, ಯತೀಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗಿರೀಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮದನ್, ಹಾಗೂ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು.