ಯುವ ಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ಸೂಪಿಯಾ ಕಾನೂನು ಕಾಲೇಜು ಪ್ರಾಂಶುಪಾಲ ಎಸ್.ರಮೇಶ್ ತಿಳಿಸಿದರು.
ಗುಬ್ಬಿಯಲ್ಲಿ ಭಾನುವಾರ ನಡೆದ ಮೀಡಿಯ ಬ್ಯಾಕ್ ಆಫೀಸ್ ವಾರ್ಷಿಕ ಕ್ರೀಡಾ ಕೂಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವ್ಯಕ್ತಿಗೆ ಕುಟುಂಬ ಸಾಮಾಜಿಕ ಜವಬ್ಧಾರಿ ಇರಬೇಕು. ಕುಟುಂಬದ ಜವಬ್ಧಾರಿಯಿಂದ ಇಡೀ ಕುಟುಂಬ ಬೆಳೆಯುತ್ತದೆ. ಜವಬ್ಧಾರಿ ಮರೆತಲ್ಲಿ ಸಾಕಷ್ಟು ಅನಾಹುತಗಳಾಗುತ್ತವೆ.
ಕಂಪನಿ ಕಾರ್ಮಿಕರು ಪ್ರಾಮಾಣಿಕವಾಗಿ ದುಡಿಯಬೇಕು. ಮಾಲೀಕರು ದುಡಿಮೆಯನ್ನು ಗೌರವಿಸಬೇಕು. ಕಾರ್ಮಿಕರ ಬಗ್ಗೆ ಕಾಳಜಿ ಜವಬ್ಧಾರಿ ತೋರಬೇಕು ಎಂದರು.
ಬೆಂಗಳೂರಿನಿಂದ ಕೆಲಸ ಬಿಟ್ಟು ಮಣ್ಣಿನ ಋಣ ತೀರಿಸುವ ಸಲುವಾಗಿ ಗುಬ್ಬಿಯಲ್ಲಿ ಕಂಪನಿ ಆರಂಭಿಸಿರುವ ರಘು ಅವರ ಕಾರ್ಯ ಶ್ಲಾಘನೀಯ ಎಂದರು.
ತಹಶಿಲ್ದಾರ್ ಮಮತಾ ಮಾತನಾಡಿ ಮಾಡುವ ಕೆಲಸದ ಬಗ್ಗೆ ಗೌರವ ಇರಬೇಕು. ಜೀವನದ ಹಿನ್ನೆಲೆ ಮರೆಯಬಾರದು ಎಂದರು.
ನಿವೃತ್ತ ಪ್ರಾಂಶುಪಾಲ ನಾಗಪ್ಪ ಮಾತನಾಡಿ ದೇಶೀ ಕ್ರೀಡೆಗಳಿಗೆ ಒತ್ತು ನೀಡಬೇಕು . ಕಂಪನಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ವ್ಯವಸ್ಥಾಪಕನಿರ್ದೇಶಕ ರಘು ಮಾತನಾಡಿ ಕಂಪನಿ ಕೇವಲ 20 ಮಂದಿ ನೌಕರರಿಂದ ಆರಂಭವಾಗಿ ಇದೀಗ 450 ಮಂದಿಗೆ ಉದ್ಯೋಗ ಕೊಡಲಾಗಿದೆ. ಬಹು ರಾಷ್ಟ್ರೀಯ ಕಂಪನಿಗಳಿಗೆ ಕಂಪನಿ ವಿವಿಧ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಕಂಪನಿ ಶ್ರಮಿಸುತ್ತಿದೆ ಎಂದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ 450 ಕುಟುಂಬಗಳ ಜೀವನಕ್ಕೆ ಆಧಾರವಾಗಿರುವ ರಘು ಅವರಿಗೆ ರಾಜ್ಯೊತ್ಸವ ಪ್ರಶಸ್ತಿ ಕೊಡಿಸಲಾಗುವುದು.ಕಂಪನಿ ಯಶಸ್ವಿಗಾಗಿ ಎಲ್ಲರು ಶ್ರಮಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಮೊಹಮದ್ ಸಾದಿಕ್ ಶಿವಕುಮಾರ್ ಉಪಸ್ಥಿತರಿದ್ದರು.