ಕೊರಟಗೆರೆ:
ದ್ವಿಚಕ್ರ ವಾಹನ ಹಾಗೂ ಬೊಲೆರೋ ಗೂಡ್ಸ್ ವಾಹನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ಮಾದವಾರ ಗ್ರಾಮದ ಅಶ್ವತ್ಥನಾರಾಯಣ(42) ಎಂಬುವರು ಮೃತಪಟ್ಟಿದ್ದಾರೆ.
ಅಶ್ವತ್ಥನಾರಾಯಣ ಸೋಮವಾರ ಮಧ್ಯಾಹ್ನ ಗ್ರಾಮದ ಬಳಿ ದ್ವಿಚಕ್ರವಾಹದಲ್ಲಿ ಗೊರವನಹಳ್ಳಿ ಗ್ರಾಮದ ಕಡೆ ಹೋಗುವಾಗ ಎದುರಿಗೆ ಬಂದ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂಧಿಸದೇ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೊಲೆರೋ ಗೂಡ್ಸ್ ವಾಹನ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿರುವುದು ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಹಾಗೂ ಗೂಡ್ಸ್ ವಾಹನದ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ಎಎಸ್ಐ ರಾಮಕೃಷ್ಣಪ್ಪ ಸಿಬ್ಬಂಧಿಗಳಾದ ನಿತ್ಯಾನಂದ, ನರಸಿಂಹರಾಜು ಭೇಟಿ ನೀಡಿದ್ದರು.
ರಸ್ತೆ ಅಪಘಾತ : ದ್ವಿಚಕ್ರವಾಹನ ಸವಾರ ಸಾವು
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on