ಕೊರೊನಾ ಮುಕ್ತವಾಗಿದ್ದ ಪಾವಗಡದಲ್ಲಿ 3 ಮಂದಿ ತಬ್ಲಿಘಿಗಳಿಗೆ ಕೋವಿಡ್ 19 ದೃಢಪಟ್ಟು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿತ್ತು. ಇದೀಗ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳ ಬ್ಯಾಗ್ ಗಳನ್ನು ವೈ.ಎನ್.ಹೊಸಕೋಟೆಯ ಅವರ ಮನೆಗಳಿಗೆ ವ್ಯಕ್ತಿಯೊಬ್ಬರು ಕಾರ್ ನಲ್ಲಿ ಕೊಂಡೊಯ್ದು ತಲುಪಿಸಿದ್ದಾರೆ ಎಂಬ ವಿಚಾರ ವಿವಾದವನ್ನು ಸೃಷ್ಠಿಸಿದೆ.
ತಬ್ಲಿಘಿಗಳ ಬ್ಯಾಗ್ ಗಳನ್ನು ಶನಿವಾರ ವೈ.ಎನ್.ಹೊಸಕೋಟೆಯ ವ್ಯಕ್ತಿಯೊಬ್ಬ ಕಾರ್ ನಲ್ಲಿ ತಂದು ತಬ್ಲಿಘಿಗಳ ಕುಟುಂಬ ಸದಸ್ಯರಿಗೆ ತಲುಪಿಸಿದ್ದಾನೆ. ತಬ್ಲಿಘಿಗಳಲ್ಲಿ ಒಬ್ಬರ ಮಗಳು ಬ್ಯಾಗ್ ಕಂಡ ಕೂಡಲೇ ಅಪ್ಪ ಜಮಾತ್ ಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್ ಇದು ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ತಬ್ಲಿಘಿಗಳ ಮನೆಗೆ ಹೋಗಿ ತಂದಿದ್ದ ವಾಹನಕ್ಕೆ ಔಷಧಿ ಸಿಂಪಡಿಸಿ ಬ್ಯಾಗ್ ಒಂದನ್ನು ಸುಟ್ಟು ಹಾಕಿಸಿದ್ದಾರೆ.
ಗ್ರಾಮದ ಕೆಲ ಮುಖಂಡರು ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಬಿಗಿ ಭದ್ರತೆ ನಡುವೆ ಬ್ಯಾಗ್ ಗಳನ್ನು ಸಾಗಿಸಿರುವುದು, ಮುಖಂಡರು ಭೇಟಿ ಮಾಡಿ ಬಂದಿರುವ ವಿಚಾರ ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.
ತಬ್ಲಿಘಿಗಳು ಕ್ವಾರಂಟೈನ್ ನಲ್ಲಿದ್ದರು ಸ್ಥಳೀಯರು ಮನೆ ಊಟ, ಬಿರಿಯಾನಿಯನ್ನು ಸರಬರಾಜು ಮಾಡುತ್ತಿದ್ದಾರೆ. ಲೋಕಲ್ ಏರಿಯಾ ಆದ್ದರಿಂದ ಆ ಚರ್ಯೆಯನ್ನು ನಿಲ್ಲಿಸುವುದಾಗಿಲೀ, ಸಂಭಾವ್ಯ ಸೋಂಕು ತಡೆಯುವುದಾಗಲೀ ಕಷ್ಟಸಾಧ್ಯವಾಗಿದೆ ಎಂದು ಸ್ಥಳೀಯರು ಆವೇದನೆ ವ್ಯಕ್ತಪಡಿಸಿದ್ದಾರೆ