ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ 42 ವರ್ಷದ ವ್ಯಕ್ತಿಗೆ ಸೋಮವಾರದಂದು ಕೊರೋನಾ ದೃಢಪಟ್ಟಿರುವುದರಿಂದ ಮಂಗಳವಾರ ಬೆಳಿಗ್ಗೆ ರೋಗಿಯ ಮನೆಯ ವ್ಯಾಪ್ತಿಯ 100 ಮೀಟರ್ ಸೀಲ್ಡ್ ಡೌನ್ ಮಾಡಲಾಯಿತು.

ಎಂ.ಜಿ.ರಸ್ತೆಯ ಪ್ರಥಮ, ದ್ವಿತೀಯ ಮತ್ತು ತೃತೀಯ ಕ್ರಾಸ್ ರಸ್ತೆಗಳಿಗೆ ಶೀಟ್ ಮತ್ತು ಬ್ಯಾರಿಗೇಟ್‌ಗಳನ್ನು ಅಡ್ಡ ಹಾಕಿ ಶೀಲ್ಡ್ ಡೌನ್ ಮಾಡಲಾಗಿದೆ.
ಈ ವ್ಯಾಪ್ತಿಯ ಮನೆಗಳಲ್ಲಿನ ಜನತೆ ೧೪ ದಿನಗಳ ಕಾಲ ಹೊರಬರದಂತೆ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಅಲ್ಲಿನ ಮನೆಗಳು ಮತ್ತು ಕುಟುಂಬಗಳ ಸದಸ್ಯರನ್ನು ಪಟ್ಟಿ ಮಾಡಿ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ.
ಕೊರೋನಾ ದೃಢಪಟ್ಟಿರುವ ವ್ಯಕ್ತಿಯು 7 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಗ್ರಾಮಕ್ಕೆ ಕೊರೋನಾ ಲಗ್ಗೆ ಹಿಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿ ಮತ್ತು ಪೋಲೀಸ್ ಠಾಣೆಯಲ್ಲಿ ಸ್ಯಾನಿಟಿಸಿಂಗ್ ಮತ್ತು ಸ್ಪ್ರೇ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಅತ್ಯಗತ್ಯ ಇದ್ದರೆ ಮಾತ್ರ ಸಾರ್ವಜನಿಕರಿಗೆ ಕಛೇರಿ ಪ್ರವೇಶ ನೀಡಲಾಗುತ್ತಿದೆ.

