ಪಾವಗಡ: ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಮನೋಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ನಿವೃತ್ತ ನ್ಯಾಯಧೀಶ ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಶ್ರೀಶಾಲ ಇಂಟರ್ನ್ಯಾಷನಲ್ ಸ್ಕೂಲ್ ನ ವಾರ್ಷಿಕೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಬರುವ ಕಠಿಣ ಪರಿಸ್ಥಿತಿಯನ್ನು ಸರಳ ಹಾಗೂ ಯೋಜನಾತ್ಮಕವಾಗಿ ನಿವಾರಿಸಿಕೊಳ್ಳುವ ಬುದ್ದಿಶಕ್ತಿಯನ್ನು ವಿದ್ಯಾರ್ಥಿಗಳು ಪಡೆಯುವಂತಾಗಬೇಕು. ಭವಿಷ್ಯದಲ್ಲಿ ಕಾಣುವ ಏರಿಳಿತ ಹಾಗೂ ವೈಪಲ್ಯಗಳನ್ನು ಮೆಟ್ಟಿ ನಿಲ್ಲುವಂತಹ ಆತ್ಮವಿಶ್ವಾಸ ಕೊಡುವಂತಹ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ. ಕೆಲವರು ಸಂಕಷ್ಟಗಳು, ವೈಪಲ್ಯಗಳು, ಎದುರಾದಾಗ ಅನವಶ್ಯಕ ಭಾವೋದ್ವೇಗಕ್ಕೆ ಒಳಗಾಗಿ ಇಲ್ಲದ ಸಮಸ್ಯೆಗಳಿಗೆ ಸಿಕ್ಕಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಸಿ ಅಮೂಲ್ಯವಾದ ಮನುಷ್ಯ ಜನ್ಮವನ್ನು ಹಾಳುಮಾಡಿಕೊಳ್ಳುತ್ತಾರೆ.
ಉನ್ನತ ಶಿಕ್ಷಣ, ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಣ್ಣ ಪುಟ್ಟ ಕಾರಣಗಳಿಗೆ ಆತ್ಮಹತ್ಯೆಯಂತಹ ಹಾದಿ ಹಿಡಿದು ಪೋಷಕರನ್ನು ದು:ಖತಪ್ತರನ್ನಾಗಿಸಿದ್ದಾರೆ. ಅಧುನಿಕತೆಯ ಒತ್ತಡಕ್ಕೆ ಸಿಲುಕಿ ಮನುಷ್ಯ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಅಲೋಚನಾ ಸಾಮಾಥ್ರ್ಯ ನಶಿಸಿ ಹೋಗುತ್ತಿದೆ, ಪರಿಣಾಮವಾಗಿ ಹಲವು ಗಂಡಾಂತರಗಳಿಗೆ ಸಿಕ್ಕಿ ನರಳುತ್ತಿದ್ದಾನೆ. ಆದ್ದರಿಂದ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೋತೆಗೆ ಸಂದಿಗ್ದ ಪರಿಸ್ಥಿತಿಯನ್ನು ದೈರ್ಯವಾಗಿ ಎದುರಿಸುವ ಚಾಕಚಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ತಿಳಿಸಿದರು
ಸಂಸ್ಥೆಯ ಮುಖ್ಯಸ್ಥ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ ಬರದನಾಡು ಹಿಂದುಳಿದ ತಾಲ್ಲೂಕು, ಪಾವಗಡ ತಾಲ್ಲೂಕಿನ ಮಕ್ಕಳಿಗೆ ಅತಿ ಕಡಿಮೆ ಧರದಲ್ಲಿ ಉತ್ತಮ ಶಿಕ್ಷಣ ನೀಡಬೇಕೆಂಬ ಹೆಬ್ಬಯಕೆ ನನ್ನದಾಗಿತ್ತು, ಆ ಕನಸು ಈಗ ನೇರವೇರಿದೆ, ಕಳೆದ ಹಲವು ವರ್ಷಗಳಿಂದ ಉತ್ತಮ ಶೈಕ್ಷಣಿಕ ಸೇವೆ ನೀಡುತ್ತಿದ್ದೇವೆ ಇದೀಗ ಸಿ.ಬಿ.ಎಸ್ಸಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಸಕರ್ಾರದ ಮಾನ್ಯತಾ ಪತ್ರ ಶಾಲೆಗೆ ಸಿಕ್ಕಿದೆ ಇದರಿಂದಾಗಿ ತಾಲ್ಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಇದು ಸಹಕಾರಿಯಾಗಿದೆ, ತಾಲ್ಲೂಕಿನಲ್ಲಿಯೇ ಇದೇ ಮೊದಲ ಬಾರೀಗೆ ನಮ್ಮ ಶಾಲೆಗೆ ಸಿ.ಬಿ.ಎಸ್.ಇ. ಪಠ್ಯಕ್ರಮದ ಪರವಾನಗಿ ಸಿಕ್ಕಿರುವುದು ನಮಗೆ ಅತ್ಯಂತ ಸಂತಸ ಮೂಡಿಸಿದೆ ಎಂದು ತಿಳಿಸಿದರು
ಶಾಲ ಮಕ್ಕಳಿಂದ ನೃತ್ಯ, ನಾಟಕ, ಗೀತೆ ಗಾಯನ, ಮಿಮಿಕ್ರಿ, ವಿವಿಧ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು
ಕಾರ್ಯಕ್ರಮದಲ್ಲಿ ಬೆಂಗಳೂರು ಐ.ಆರ್.ಎಸ್.ಇ. ಕಂಪೆನಿಯ ಮೇನೆಜರ್ ಹರಿಬಾಬು, ಜಿ.ಪಂ. ಸದಸ್ಯ ಚೆನ್ನಮಲ್ಲಯ್ಯ, ಸಂಸ್ಥೆಯ ಮುಖ್ಯಸ್ಥ ರಾಮಾಂಜನೇಯಲು, ತಾ.ಪಂ. ಅಧ್ಯಕ್ಷ ಸೊಗಡು ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಲಕ್ಷ್ಮೀನಾರಯಣಪ್ಪ, ನರಸಿಂಹರೆಡ್ಡಿ, ಮೈಲಪ್ಪ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ, ಚೌಧರಿ, ವಕೀಲ ನಾಗೇಂದ್ರಪ್ಪ, ಗೋವಿಂದಪ್ಪ,ಕರಿಯಣ್ಣ, ಡಾ.ಶಶಿಕಿರಣ್, ಶಾರದರಾಮಾಂಜನೇಯಲು, ಲಕ್ಷ್ಮೀವೆಂಕಟರಾಮಯ್ಯ, ಆದಿಲಕ್ಷ್ಮೀ, ಹನುಮಂತರೆಡ್ಡಿ, ನಾಗೇಂದ್ರ ಇತರ ಮುಖಂಡರು ಹಾಜರಿದ್ದರು