ತುಮಕೂರು: ಕೋರೊನಾ ವೈರಸ್ ನಿಂದ ಆರ್ಥಿಕ ಸಂಷಕ್ಕೆ ಸಿಲುಕಿದ ಆಟೋ/ಟ್ಯಾಕ್ಸಿ ಚಾಲಕರಿಗೆ ರೂ.5000/- ಒಂದು ಬಾರಿ ಪರಿಹಾರವನ್ನು ಘೋಷಣೆಯನ್ನು ಮಾಡಿರುವುದನ್ನು ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಮತ್ತು ಸಿಐಟಿಯ ಸ್ವಾಗತಿಸಿವೆ.
5000 ರೂ ಪಡೆಯಲು ಸಾರಿಗೆ ಆಯುಕ್ತರು 8 ನಿಬಂಧನೆಗಳನ್ನು ಆದೇಶದಲ್ಲಿ ಹೊರಡಿಸಿದ್ದು ಅದರಲ್ಲಿ ಹಲವು ನ್ಯೂನತೆಗಳಿರುತ್ತವೆ. ಅದನ್ನು ಸರಳೀಕರಣಗೊಳಿಸಬೇಕೆಂದು ಎಂದು ಆಟೋ ಚಾಲಕರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಚಾಲಕರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.
ಲಾಕ್ ಡೌನ್ ನಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಇದು ಆಶಾದಾಯಕ ಭರವಸೆ ಮೂಡಿಸಿತ್ತು ಆದರೆ ಪರಿಹಾರ ಪಡೆಯಲು ಹತ್ತು ಹಲವು ನಿಬಂಧನೆ ಆಳವಡಿಸಿದ್ದು ಚಾಲಕರಿಗೆ ಸೌಲಭ್ಯ ಪಡೆಯಲು ಕಷ್ಟವಾಗಿದೆ.
ಸರ್ಕಾರವು ಪರಿಹಾರ ಪಡೆಯಲು ವಾಹನದ ಎಫ್.ಸಿ. ಕೇಳುವುದು ಸರಿಯಾದ ಕ್ರಮವಲ್ಲ. ಇದರಿಂದ ಹೆಚ್ಚು ಚಾಲಕರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಾಗಾಗಿ ನಿಭಂದನೆ ಸಡಿಲಗೊಳಿಸಬೇಕು ಎಂದು ಮನವಿ ಮಾಡಿದರು.
ಆಟೋ ಚಾಲನೆ ಮಾಡಲು ಚಾಲನ ಪತ್ರ ಮಾತ್ರ ಬೇಕಾಗಿದೆ. ಈ ಮಾನದಂಡ ಪರಿಗಣನೆಗೆ ತೆಗೆದುಕೊಂಡು ಚಾಲಕರಿಗೆ ಸಿಗುವ ಪರಿಹಾರ ಕೊಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಧ ಜಿಲಾಧ್ಯಕ್ಷ ಸಿದ್ದರಾಜು, ಖಜಾಂಚಿ ಇಂತಿಯಾಜ್ ಪಾಷ, ಚಾಲಕರಾದ ನಿಜಲಿಂಗಪ್ಪ, ಪಯಾಜ್ ಹಾಜರಿದ್ದರು.