Publicstory
ತುಮಕೂರು: ಒಬ್ಬಸಾಮಾನ್ಯ ವಿವೇಕಿ ಮನುಷ್ಯನಿಗಿರಬೇಕಾದ ನಿಲುವು.
ಸಮೂಹದ ಜೊತೆ ನಿಂತು ಕೆಲಸ ಮಾಡುವ ವ್ಯಕ್ತಿ ಸಿದ್ದರಾಮಯ್ಯ ಎಂದು ಸಾಹಿತಿ ಬೂದಾಳ್ ನಟರಾಜ್ ಬಣ್ಣಿಸಿದರು.
ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದ
ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಸಂವಿಧಾನ ನಮ್ಮ ಬದುಕಿನ ಸಂವಿಧಾನವಾಗಿದೆಯೇ? ಅಲ್ಪಸ್ವಲ್ಪ. ಅಥವಾ
ಸಾಂಸ್ಕೃತಿಕ ಸಂವಿಧಾನವೋ ಬಲಶಾಲಿ ಎಂಬುದು ಎಲ್ಲಪಕ್ಷಗಳಿಗೂ ದ್ವಂದ್ವ. ಇವುಗಳಿಗೆ ಒಂದು ಸೈದ್ಧಾಂತಿಕ ಆಕರವನ್ನು ಕಟ್ಟಿಕೊಳ್ಳಲು ಆಗಿಲ್ಲ ಎಂದರು.
ಬಿಜೆಪಿಯೇತರ ನಿಲುವುಗಳನ್ನು ಸೇರಿಸಿಕೊಂಡು ನೋಡಿದರೆ..
ಧಾರ್ಮಿಕತೆ ನಿರ್ವಹಿಸುವಂತಹ ಸೈದ್ಧಾಂತಿಕ ನಿಲುಗಳನ್ನು ರೂಡಿಸಿಕೊಂಡಿದ್ದಾವ ಎಂಬ ಅನುಮಾನಗಳು ಕಾಡುತ್ತಿವೆ ಎಂದರು.
ಎಲ್ಲ ವಿಶ್ವ ವಿದ್ಯಾಲಯ ಗಳ ಸಿಂಡಿಕೇಟ್ ಇತ್ಯದಿ ವಿಸರ್ಜಿಸುವ ಕೆಲಸಕ್ಕೆ ಕೈ ಹಾಕಿದರು ಯಡಿಯೂರಪ್ಪ. ಅದು ಸ್ವತಃ ಅವರಿಗೂ ಗೊತ್ತಿಲ್ಲ. ಒಂದು ರಾಜ್ಯದದಲ್ಲಿ ಸರ್ಕಾರವನ್ನು ದಕ್ಕಿಸಿಕೊಳ್ಳುವುದಕ್ಕೆ ಯಾವ ಸಂವಿಧಾನವನ್ನು ಮೊದಲು ದಕ್ಕಿಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ನವರಿಗೆ ಇದು ತಿಳಿದಿಲ್ಲ ಎಂದು ವಿಶ್ಲೇಷಿಸಿದರು.
ಒಂದು ಸಾವಿರ ವರ್ಷದ, ಹತ್ತನೇ ಶತಮಾನದಿಂದ ಇರುವ ಸಾಹಿತ್ಯ ಮತ್ಯು ಕನ್ನಡದ ಬದುಕು ಎಂದರೆ ಜೈನ ಮತ್ತು ಬ್ರಾಹ್ಮಣ, ವೈದಿಕ, ವೀರ ಶೈವರದೇ ಸಾಹಿತ್ಯ ಓದುತ್ತಾ ಬಂದಿದ್ದೇವೆ.. ಇನ್ನುಳಿದ ಇತರ ಜಾತಿ ಜನಾಂಗದವರು ಸಾಹಿತ್ಯ ಬರೆದೇ ಇಲ್ಲವಾ?
ದುಷ್ಟ ಸಮೀಕರಣಗಳನಡುವೆ ನಟ್ಟ ನಡುವೆ ನಿಂತಿದ್ದೇವೆ.
ಭಾರತ ಎಂದರೆ ವೈದಿಕ ಹಿಂದೂ ದೇಶ. ವೈದಿಕ ಹಿಂದೂ ಧರ್ಮ ಆಚರಣೆಗಳು. ಹಿಂದೂ ಧರ್ಮಕ್ಕೆ ಚದಯುತಿ ಬದರುವುದು ಮಾಂಸ ತಿನ್ನುವ ಜನಾಂಗಗಳಿಂದ ಎಂಬುದಕ್ಕೆ ನಾವು ಒಪ್ಪಿಕೆ ಕೊಟ್ಟಿದ್ದೇವೆ. ಶೂದ್ರ ಹಿಂದೂ ಧರ್ಮ ಮತ್ತೊಂದು ಕವಲು ಎಂಬುದೊಂದು ಇದೆ ಎಂಬುದು ನಮಗೆ ತಿಳಿಯಲೇ ಇಲ್ಲ ಎಂದರು.
ಕೊರಚ, ಮಡಿವಾಳ, ಒಕ್ಕಲಿಗ ಇತ್ಯಾದಿ ಸಾಹಿತ್ಯದ ಪಟ್ಟಿಯನ್ನು ಒಳಗೆ ಬಿಟ್ಟಿಲ್ಲ. ಅತಿ ಹೆಚ್ಚು ಸಾಹಿಥ್ಯ ಬರೆಸಿರುವುದು ಇವರೇ.. ಆದರೆ ಇವರ ಸಾಹಿತ್ಯವನ್ನು ಹೊರಗಿರಿಸಲಾಗಿದೆ ಎಂದು ಆರೋಪಿಸಿದರು.
ಇವರನ್ನೆಲ್ಲ ಒಳಗೆ ಕರೆದದ್ದು ಸಿದ್ದರಾಮಯ್ಯ ನವರು. ನಾವು ಕೆಳ ಜಾತಿ ಎಂದು ಗುರುತಿಸುವ ಜನಾಂಗವನ್ನು ಮಾತ್ರ ಹೊರಗೆ ನಿಲ್ಲಿಸಿದ್ದಾರೆ ಎಂದುಕೊಂಡಿದ್ದೇವೆ. ಆದರೆ ಸಾಹಿತ್ಯವನ್ನೂ ಹೊರಗಡೆ ನಿಲ್ಲಿಸಲಾಗಿದೆ ಎಂದರು.
ಭಾರತ ಸಾವಿರಾರು ವರ್ಷಗಳ ವಸಾಹತು. ಸಾಂಸ್ಕೃತಿಕ ಸ್ವಾತಂತ್ರ್ಯ ಬಹಳ ದೂರದ ಮಾತು. ನಮ್ಮೆಲ್ಲರ ತಲೆಯ ಮೇಲೆ ವಾಮನ ಪಾದ ಇದೆ. ಅದನ್ನೇ ಸಂಭ್ರಮಿಸುತ್ತ.
ಆದರೆ ನಮ್ಮಕಾಲ ಕೆಳಗೆ ಮತ್ತೊಂದು ತಲೆ ಇದೆ. ಇದನ್ನು ಬಿಜೆಪಿಗೆ ನಿರ್ವಹಿಸುವುದು ಸುಲಭ ಎಂದು ಹೇಳಿದರು.
ರಾಜಕೀಯ ಸೈದ್ಧಾಂತಿಕ ನಿಲುವು ನಿರ್ಮಿಸುವುದಕ್ಕೆ. ಒಬ್ಬಮುಖ್ಯ ಮಂತ್ರಿಗೆ ಏನು ತಿಂದು ಬಂದಿದ್ದೀಯ ಎಂದು ಕೇಳುತ್ತಾರೆ. ರಾಜ್ಯದ ಮುಖ್ಯ ಮಂತ್ರಿಗೆ ಕೆಳುತ್ತಾರೆ ಆದರೆ. ಇನ್ನುಳಿದವರಿಗೆ.
ಈ ಸಾಂಸ್ಕೃತಿಕ ವಸಾಹತು ಅಪಾಯ ಎಂದು ವಿಶ್ಲೇಷಿದರು.
ಶೂದ್ರಧರ್ಮದ ಎಲ್ಲ ಲಕ್ಷಣಗಳನ್ನು ಅಪಹರಿಸುತ್ತಾರೆ. ಅವಮಾನ, ತನ್ನ ವಶಕ್ಕೆ ಅಪರಿಸಲಾಗಿದೆ. ಹೆಸರಿಡುವುದರಿಂದ. ಲೋಕದ ಪ್ರತಿನಿತ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಪಿಸಿದರು.
ಪ್ರಮಾಣ ವಚನ ಸ್ವೀಕರಿಸಿದವರಿಗೂ ಸಾಂಸ್ಕೃತಿಕ ರಾಜಕಾರಣ ಆವರಿಸುತ್ತದೆ. ಕಚೇರಿ ಪೂಜೆ, ಬಾವುಟಗಳು..
ಬಟ್ಟೆ ಬಣ್ಣವು ಎಲ್ಲರ ಮೆದುಳನ್ನು ತನ್ನ ನಿಯಂತ್ರಣಕ್ಕೆ ತಗೆಸುಕೊಳ್ಳುತ್ತದೆ.
ಆದ್ದರಿಂದ ಬಾವುಟದ ಮೇಲೆ ನಮ್ಮ ದೇವರ ಚಿತ್ರ. ನಮ್ಮ ದೇವರುಗಳ ಚಿತ್ರವನ್ನು ಹಾಕಲಾಗಿದೆ. ಸಾಂಸ್ಕೃತಿಕ ಅವಹರಣ ಮಾಡಲಾಗಿದೆ ಎಂದು ವಿಶ್ಲೇಷಿದರು.
ಬಹುತ್ವ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಅಂಶಗಳ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ಅಂಬೇಡ್ಕರ್ ಅವರು ಎರಡು ಸಂವಿಧಾನಗಳನ್ನು ಕೊಟ್ಟಿದ್ದಾರೆ ಎಂದರು.
ಭಾರತೀಯರು ಬಹಳ ಸಂಮೃದ್ಧವಾಗಿ ಬಹುತ್ವದ ಮೂಲಕ ಬದುಕುತ್ತಿದ್ದಾರೆ. ಅದನ್ನು ಮುಂದುವರಿಯಲು ಬಿಡುತ್ತಿಲ್ಲ ಎಂದು ತಿಳಿಸಿದರು.
ಭಾರತದ ಎಲ್ಲರ ಮೆದುಲಿಗೆ ಅನಸ್ಥೇಶಿಯ. ದಿನಾ ಹೊಸ ಸಂಗತಿಗಳು ಚರ್ಚೆಗೆ ಬರುತ್ತಿವೆ..
ನಮಗೆ ಮರೆವು ಸಹಜ ಅದನ್ನು ಎಚ್ಚರಿಸಿಕೊಳ್ಳಬಹುದು ಆದರೆ. ಉದ್ದೇಶ ಪೂರ್ವಕ ಅನಸ್ತೇಶಿಯವನ್ನು ಎಚ್ಚರಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು.
ಅದಕ್ಕಾಗಿಯೇ ಸಿದ್ದರಾಮಯ್ಯ ನವರು ತಮ್ಮ ಊರಿನಲ್ಲಿ ನಿರ್ಮಾಣ ವಾಗುತ್ತಿರುವ ರಾಮದೇವರಿಗೆ ದೇಣಿಗೆ ಕೊಟ್ಟರು. ಅಯೋಧ್ಯೆಗಲ್ಲ ಎಂದು ವಿವರಿಸಿದರು.
ನಮಗೇ ನಮ್ಮದೇ ಅಸ್ಮಿತಿ ಮತ್ತು ಆಕರವಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ ಉತ್ತರದ ಧಾರ್ಮಿಕ ಯಜಮಾನಿಕೆಯನ್ನು ದಕ್ಷಿಣ ಸ ಮೇಲೆ ಹೇರಲಾಗಿದೆ.
ಯಾರು ಸಾಂಸ್ಕೃತಿಕ ರಾಜಕಾರಣ ವನ್ನು ನಿರ್ವಹಿಸುತ್ತಾರೆ ಅವರಿಗೇ ಅಧಿಕಾರ ನಿರ್ವಹಣೆ ಅಇಗುತ್ತದೆ. ಹಾಗಾಗಿ ಸಾಂಸ್ಕೃತಿಕ ಯಜಮಾನಿಕೆ ಯಾರದ್ದೋ ಅವರದ್ದು ಅಧಿಕಾರ ಎಂದು ವಿಶ್ಲೇಷಿದರು.
ಯಾವುದೋ ಮಸೀದಿಯಲ್ಲಿ ಕಲ್ಲು ಸಿಕ್ಕರೆ ಇಲ್ಲಿನ ಉಡುಪಿ ಮಠ ಎಚ್ಚರವಾಗುತ್ತದೆ. ಇಡೀ ವಿಶ್ವದ ಎದುರಿಗೆ ಎರಡು ಅವಕಾಶಗಳಿದೆ. ಒಂದು ಫ್ಯಾಸಿಸ್ಟ್ ಮತ್ತು ಲಿಬರಲಿಸ್ಟ್. ಫ್ಯಾಸಿಸ್ಟರು ಮಾನ, ನಾಚಿಕೆ ಎಲ್ಲವನ್ನೂ ಬಿಟ್ಟಿದ್ದಾರೆ. ಅಂತ ಲಿಬರಿಸ್ಟರು ಬಹಳ ದೊಡ್ಡವರು. ಹನ್ನೆರಡನೆಯ ಶತಮಾನದ ಸಲ್ಲಿ ಚಳುವಳಿವಳಿ ಕಟ್ಟಿದರು ಎಂದರು.
ವಿಶ್ವವೆಲ್ಲ ಒಂದೇ ಧರ್ಮ, ಗ್ರಾಮ ಇತ್ಯಾದಿ ಗಳನ್ನು ಒಂದೇ ಎಂದು ಹೇಳಲಾಗುತ್ತಿದೆ.
ಒಂದೇ ದೈವದ ಕಲ್ಪನೆ ಇದ್ದರೂ ದೇವರು ಯಾರದ್ದು ಎಂದರೆ ನಂದು ಎಂದು ಮುಂದೆ ಬರುತ್ತಾರೆ.
ಒಂದು ಧಾರ್ಮಿಕ ಸಂವಿಧಾನವನ್ನು ನಿರ್ವಹಿಸದಿರುವ ಯಾವ ಪಕ್ಷಕ್ಕೂ ಉಳಿಗಾಲವಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ. ಧಾರ್ಮಿಕ ಸಂವಿಧಾನವನ್ನು ದಕ್ಕಿಸಿಕೊಂಡರೆ ರಾಜಕೀಯ ಸಂವಿಧಾನ ಉಳಿಯುತ್ತದೆ ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಇದ್ದರು.