Publicstory
ತಿಪಟೂರು : ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‍ಯುಐ) ವಿದ್ಯಾರ್ಥಿಗಳನ್ನು ನ್ಯಾಯಾಲಯದ ಮುಂಭಾಗದಲ್ಲಿ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕಡೆಗೂ ಜೂ.5ರ ಸೋಮವಾರ ರಾತ್ರಿ ದೂರು ದಾಖಲಾಗಿದೆ.
ದೂರಿನಲ್ಲಿ ಕೈಗಳಿಂದ ಹಲ್ಲೆ, ಪ್ರಾಣಬೆದರಿಕೆ, ಗಾಡಿ ಜಕಂ ಮಾಡಿರುವ ಬಗ್ಗೆ ಜಯಸಿಂಹ ಮಾದಿಹಳ್ಳಿ ಮತ್ತು ಇತರರು ಎಂದು ದೂರು ದಾಖಲಾಗಿದೆ.
ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿರುವ ಬಗ್ಗೆ ಜೂ.2 ರಂದೆ ನಗರಠಾಣೆಗೆ ದೂರು ನೀಡಿದರು ದಾಖಲಿಸಲು ನಿರಾಕರಿಸಿದ್ದ ಪೊಲೀಸರು ರಾಜ್ಯದಾದ್ಯಂತ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಇದೀಗ ಜೂ.6 ರಾತ್ರಿ ದೂರು ದಾಖಲಿಸಿದ್ದಾರೆ. ಪೊಲೀಸರ ನಡೆಗೆ ವ್ಯಾಪಕ ಖಂಡನೇ ವ್ಯಕ್ತವಾಗಿದ್ದು ಆಡಳಿತ ಪಕ್ಷದ ಕೈಗೊಂಬೆ ಆಗಿದ್ದಾರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅನೇಕ ಮುಖಂಡರು ಆರೋಪಿಸಿದ್ದರು.
ಜೂ.1ರಂದು ಘಟನೆ ನಡೆದ ದಿನವೇ ಎನ್‍ಎಸ್‍ಯುಐನ 15 ಹಾಗೂ ಜೂ.2ರಂದು 7 ಒಟ್ಟು 22 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.
ಇನ್ನೂ ಬಂಧಿತ ವಿದ್ಯಾರ್ಥಿಗಳಿಗೆ ಕಳೆದ 5-6 ದಿನಗಳಿಂದಲೂ ಜಾಮೀನಿಗಾಗಿ ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಬಂಧಿತ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಶನಿವಾರಕ್ಕೆ ಜಾಮೀನು ತೀರಸ್ಕೃತಗೊಂಡಿದ್ದು ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಜಾಮೀನಿಗಾಗಿ ಪುನಃ ಅರ್ಜಿ ಸಲ್ಲಿಸಲಾಗಿದೆ.