Wednesday, November 20, 2024
Google search engine
Homeಜನಮನಹಳ್ಳಿಯಲ್ಲೊಂದು ಪರಿಸರ ಸಂಘ ಕಟ್ಟಿ...

ಹಳ್ಳಿಯಲ್ಲೊಂದು ಪರಿಸರ ಸಂಘ ಕಟ್ಟಿ…

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಈ ಲೇಖನವನ್ನು ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ಅಮಲಗೊಂದಿ ಬರೆದಿದ್ದಾರೆ.


ನಾನು ಸ್ನಾತಕೋತ್ತರ ಸಮಾಜ ಕಾರ್ಯಕರ್ತ ವನ್ನು ತುಮಕೂರು ವಿ.ವಿ ಯಲ್ಲಿ ಮುಗಿಸಿದ್ದು. ಪ್ರಸ್ತುತ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ.

ವಾರದಲ್ಲಿ ಎರಡು ದಿನ ಪರಿಸರ ಮತ್ತು ಸುಸ್ಥಿರ ಕೃಷಿಯ ಉತ್ತೇಜನಕ್ಕಾಗಿ ಸ್ವಯಂಸೇವೆಯಿಂದ ಚಿಗುರು ಯುವಜನ ಸಂಘವನ್ನು ಕಟ್ಟಿಕೊಂಡು ಮಾಡುತ್ತಿದ್ದೇನೆ. ಸಂಘಕ್ಕೆ ಮೂಲ ಪ್ರೇರಣೆ ಸಿಎಂಸಿಎ ಸಂಸ್ಥೆಯ ಸಮುದಾಯ ಯುವ ನಾಗರೀಕ ಕಾರ್ಯಕ್ರಮವಾಗಿದೆ.

ಸಂಘದಿಂದ ಶಾಲೆಗಳಲ್ಲಿ ಗಿಡ ನೆಡುವುದು ಮತ್ತು ಫಾಲೊಅಪ್ ಮಾಡುವುದು, ಶಾಲೆಗಳ ಇಕೋ ಕ್ಲಬ್ ಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪರಿಸರ, ವನ್ಯಜೀವಿ, ನೀರಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುತ್ತಿದ್ದೇವೆ.

ಜೊತೆಯಲ್ಲಿ ಹಿಂದಿನ ವರ್ಷದಿಂದ ಯುವರೈತರಿಗೆ ಕೃಷಿ ಬಗ್ಗೆ ಉತ್ತೇಜನ ನೀಡಲು ಹಸಿರು ದಾಸೋಹ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ನಾನು ಹಿಂದಿನ ವರ್ಷದಲ್ಲಿ ಶಿರಾದಲ್ಲಿ ಭಾರತದ ಜಲ ಮನುಷ್ಯನೆಂದು ಹೆಸರಾದ ರಾಜಸ್ಥಾನದ ರಾಜೇಂದ್ರ ಸಿಂಗ್ ರವರ ನೇತೃತ್ವದಲ್ಲಿ ನಡೆದ ರಾಜ್ಯ ಜಲಾಸಕ್ತರ ಸಮಾವೇಶದಲ್ಲಿ ಪಾಲ್ಗೊಂಡು, ಅದರ ಪ್ರೇರಣೆಯಿಂದ ಮಳೆನೀರಿನ ಕೊಯ್ಲು ಮಾಡಿಸಿದ್ದು ನೀರಿನ ಬಗ್ಗೆ ಹೆಚ್ಚೆಚ್ಚು ಜನರಿಗೆ ಅರಿವನ್ನು ಮೂಡಿಸಬೇಕೆಂದು ಪ್ರಯತ್ನ ಮಾಡಲಾಗುತ್ತಿದೆ.

ಅರಣ್ಯ ಇಲಾಖೆಯ ಸಂಪರ್ಕವನ್ನು ಇಟ್ಟುಕೊಂಡು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ರೈತರಿಗೆ ತಲುಪಿಸುತ್ತಿದ್ದೇನೆ. ಅರಣ್ಯ ಕೃಷಿಯನ್ನು ಮಾಡುವುದಕ್ಕೆ ಉತ್ತೇಜನ ನೀಡುತ್ತಿದ್ದೇನೆ.

ಮಕ್ಕಳನ್ನು ಕೆರೆಗಳಿಗೆ ಕರೆದುಕೊಂಡು ಹೋಗಿ ಜಲಪಾತ್ರೆಗಳ ಮಹತ್ವವನ್ನು ಅರ್ಥಮಾಡಿಸುವುದು, ಮಕ್ಕಳಿಗೆ ಪರಿಸರ ದ ಅರಿವು ಮೂಡಿಸಲು ಪ್ರಯತ ಮಾಡುತ್ತಿದ್ದೇನೆ. ಪರಿಸರಕ್ಕೆ ಕೆಲಸ ಮಾಡುವ ಅನೇಕ ಸಂಘಟನೆಗಳಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದೇನೆ. ಪರಿಸರ, ಪಕ್ಷಿ, ಮತ್ತು ಕೃಷಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯುತ್ತಿದ್ದೇನೆ.

*ಸಂಘದ ಧ್ಯೇಯ:-


ಶಿಕ್ಷಣ ಮತ್ತು ಅರಿವು ಮೂಲಕ ಸುಸ್ಥಿರ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಗ್ರಾಮೀಣಾಭಿವೃದ್ಧಿ ಮಾಡಬೇಕೆಂದು ನಮ್ಮ ಮುಖ್ಯ ಧ್ಯೇಯವಾಗಿದೆ.

*ಸಂಘದ ದೂರದೃಷ್ಟಿ:


ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ, ಯುವಜನರಲ್ಲಿ, ಜನಸಮುದಾಯದಲ್ಲಿ ಸುಸ್ಥಿರ ಪರಿಸರದ ಆಲೋಚನೆಗಳನ್ನು ಹುಟ್ಟುಹಾಕಿ, ನೆಲೆ-ಜಲ ಪರಿಸರ ವೈವಿಧ್ಯತೆಯನ್ನು ಸಂರಕ್ಷಿಸುವ ಮೂಲಕ ಸುಸ್ಥಿರ ಪರಿಸರವನ್ನು ನಿರ್ಮಾಣ ಮಾಡುವುದಾಗಿದೆ.

*ಸಂಘ ಉದ್ದೇಶಗಳು:-*


೧. ಪರಿಸರದ ಬಗ್ಗೆ ಜನರಲ್ಲಿ ಸಂವೇದನಾಶೀಲರನ್ನಾಗಿಸುವುದು.
೨. ಸುಸ್ಥಿರ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುವುದು.
೩. ಕೃಷಿ-ಪರಿಸರಕ್ಕೆ ಪೂರಕವಾದ ನೀತಿ ನಿಯಮಗಳ ರೂಪಿಸುವಲ್ಲಿ ಕಾರ್ಯನಿರ್ವಹಿಸುವುದು.
೪. ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು.
೫. ಪರಿಸರ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು ಮತ್ತು ಆಯೋಜಿಸುವುದು.
೬. ಯುವಜನರನ್ನು ಸಮಾಜಮುಖಿಗಳನ್ನಾಗಿಸುವುದು.
೭. ಪರಿಸರಾತ್ಮಕ ಕಾರ್ಯಚಟುವಟಿಕೆಗಳಲ್ಲಿ ಇಲಾಖೆಗಳೊಂದಿಗೆ ಸಹಕರಿಸುವುದು.
೮. ಸಮಾಜಮುಖಿ ವೇದಿಕೆಗಳೊಂದಿಗೆ ಚಳುವಳಿಗಳನ್ನು ಉತ್ತೇಜಿಸುವುದು.

*ಸಂಘದ ಪದಾಧಿಕಾರಿಗಳು:


ಅಧ್ಯಕ್ಷರು:- ಮಂಜುನಾಥ್‌ಅಮಲಗೊಂದಿ.
ಕಾರ್ಯದರ್ಶಿ:- ಮಂಜುನಾಥ್‌ಆಲದಮರ.
ಸದಸ್ಯರು:- ಮಧು, ನರಸಿಂಹಮೂರ್ತಿ.ಕೆ.ಎಸ್, ಪೂಜಾ, ಅಂಬಿಕಾ, ಚಾಂದಿನಿ, ಜಲಜ, ಪ್ರಜ್ವಲ್, ನಿಶ್ಚಿತ್, ಸುರೇಶ್.ಎಲ್, ದೀಪಕ್.ಎನ್, ಯಶೋಧಾ, ಶ್ರೀನಿವಾಸ.ಎಸ್, ಕಿರಣ್‌ಕುಮಾರ್.ಜೆ, ನರಸಿಂಹರಾಜು.ಎಲ್, ಮಂಜುಪ್ರಸಾದ್, ಸುನಿಲ್‌ಕುಮಾರ್.ಹೆಚ್, ಯೋಗೇಶ್, ಮಂಜುನಾಥ್.ಜೆ, ಪುಟ್ಟರಾಜು, ಜೇಬಿನ್‌ಅಭಿಷೇಕ್, ದರ್ಶನ್.ಆರ್, ನಿತೀಶ್‌ಕುಮಾರ್.ಎಸ್, ವಿಷ್ಣು, ದರ್ಶನ್.ಎಲ್.

*ಸಂಘದ ಕಾರ್ಯಚಟುವಟಿಕೆಗಳು


1. *ಹಸಿರು ದನಿ(ಮುರಾರ್ಜಿ ಶಾಲೆಯಲ್ಲಿ):-* ಇದು ಚಿಗುರು ಯುವಜನ ಸಂಘ, ಚಿಕ್ಕಬಳ್ಳಾಪುರದ ಉಸಿರಿಗಾಗಿ ಹಸಿರು ಸಂಘಟನೆ ಮತ್ತು ಆದರ್ಶ ಯುವತಿ ಮಂಡಳಿ ಅವರ ಸಹಯೋಗದಲ್ಲಿ ನಡೆಯುತ್ತಿರುವುದು.

2.*ಇಕೋ ಕ್ಲಬ್‌ಗಳ ಜೊತೆ ಕಾರ್ಯಕ್ರಮ:-* ಶಾಲೆಗಳಲ್ಲಿ ನೀರಿನ ಬಗ್ಗೆ, ಪರಿಸರದ ಬಗ್ಗೆ, ವನ್ಯಜೀವಿಗಳ ಬಗ್ಗೆ, ವಿಶ್ವ ಮಣ್ಣು ದಿನಾಚರಣೆ, ಕೆರೆ ವೀಕ್ಷಣೆ, ಹಾವುಗಳ ಪ್ರಪಂಚ ಕಾರ್ಯಾಗಾರ, ಓಝೋನ್ ನೀ ಇಲ್ಲದಿದ್ದರೆ ನಾವೆಲ್ಲಾ ಗಾನ್, ಮುಂತಾದ ಕಾರ್ಯಕ್ರಮಗಳು.

3. *ಸಂಘದ ಇತರೆ ಕಾರ್ಯಕ್ರಮಗಳು:-*
ಆಟ ಮುಟ್ಟಾಟ,
ಬದುಗಳಿಗೆ ಇನ್ಸುರೆನ್ಸ್ ಮಾಡಿಸಿ (ಕೃಷಿ ಅರಣ್ಯ ಪ್ರೋತ್ಸಹ ಯೋಜನೆಗೆ ಉತ್ತೇಜನ)
ಗೊಬ್ಬರದ ಪೂಜೆ
ಬೀಜದುಂಡೆ ಬಿತ್ತನೆ
ಮತ ಮಾರಾಟಕ್ಕಿಲ್ಲ ಅಭಿಯಾನ
ಅರಣ್ಯ ಇಲಾಖೆಗೆ ಸಹಕಾರ,
ಮಕ್ಕಳ ಗ್ರಾಮ ಸಭೆ ಮಾಡಲು ಗ್ರಾಮ ಪಂಚಾಯತಿಗೆ ಸಹಕಾರ,
ಇತರೆ ಸಂಘಟನೆಗಳೊಂದಿಗೆ ಸಹಕಾರ.

4.*ಹಸಿರು ದಾಸೋಹ ಕಾರ್ಯಕ್ರಮ:-*


ಯುವರೈತರಿಗೆ ಹಣ್ಣಿನ ಗಿಡಗಳನ್ನು ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದು ಹಾಗೂ ಇದರ ಮೂಲಕ ಪರಿಸರಕ್ಕೆ ಹಸಿರು ಕೊಡುಗೆಯನ್ನು ನೀಡುವುದಾಗಿದೆ.

ಹಸಿರು ದಾಸೋಹ ಕಾರ್ಯಕ್ರಮದ ಉದ್ದೇಶಗಳು:- ಆರ್ಥಿಕವಾಗಿ ಹಿಂದುಳಿದಿರುವ ಯುವರೈತರಿಗೆ ತೋಟಗಾರಿಕಾ ಮತ್ತು ಅರಣ್ಯ ಕೃಷಿಯನ್ನು ಪ್ರೋತ್ಸಾಹಿಸುವುದು. ಹಾಗೂ ಕೃಷಿಯಲ್ಲಿಬದುಕನ್ನು ಕಟ್ಟಿಕೊಳ್ಳಲು ಸಹಕಾರವನ್ನು ನೀಡುವುದು.

ವಾತಾವರಣದಲ್ಲಿ ಹಸೀರೀಕರಣವನ್ನು ಹೆಚ್ಚಿಸುವುದು. ಯುವರೈತರ ಮತ್ತು ದಾನಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು. ಗ್ರಾಮೀಣ ಯುವರೈತರಿಗೆ ಸುಸ್ಥಿರ ಕೃಷಿಯ ಬಗ್ಗೆ ಅರ್ಥಮಾಡಿಸಲು ಇಂದು ಮಾದರಿಯನ್ನು ಸೃಷ್ಟಿಸುವುದು. ಯುವರೈತರು ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವಂತೆ ಮಾಡುವುದು. ಇದರಿಂದ ಅವರ ಕುಟುಂಬದ ಆರ್ಥಿಕ ಅಭಿವೃದ್ಧಿಯನ್ನು ಮಾಡುವುದು. ಗ್ರಾಹಕರಿಗೆ ವಿಷಮುಕ್ತ ಆಹಾರವನ್ನು/ಹಣ್ಣುಗಳನ್ನು ನೀಡುವುದು. ಹಣ್ಣಿನ ಗಿಡಗಳನ್ನು ಹಾಕುವ ಮೂಲಕ ಪ್ರಾಣಿ-ಪಕ್ಷಿಗಳನ್ನು ಸಹ ಬದುಕಿಸಿಕೊಳ್ಳುವುದು.

೨.ಹಸಿರು ದಾನಿಗಳನ್ನು ಗುರುತಿಸುವುದು ಮತ್ತು ಅವರಿಂದ ಹಣ/ಗಿಡಗಳನ್ನು ಪಡೆದುಕೊಳ್ಳುವುದು.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-*


ಮಂಜುನಾಥ್ ಅಮಲಗೊಂದಿ
9632095654, 8970400713. ಮಂಜುನಾಥ್ ಆಲದಮರ – 9663018651

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?